ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಸಕರ ಭವನದಿ ಬಾಂಬು ಬಾಂಬು ಬಾಂಬು; ಬೆಚ್ಚಿದ ನೌಕರರು

By Staff
|
Google Oneindia Kannada News

ಶಾಸಕರ ಭವನದಿ ಬಾಂಬು ಬಾಂಬು ಬಾಂಬು; ಬೆಚ್ಚಿದ ನೌಕರರು
ವಿಧಾನಸೌಧದ ನೌಕರರಲ್ಲಿ ಭಾರೀ ಭೀತಿ

ಬೆಂಗಳೂರು : ರಾಜ್ಯೋತ್ಸವದ ಸಂಭ್ರಮದಲ್ಲಿ ಎರಡು ದಿನ ರಜೆ ಕಳೆದು, ಸೋಮವಾರ (ನ. 03) ವಿಧಾನಸೌಧದ ಮೆಟ್ಟಿಲು ಹತ್ತುವ ಸರ್ಕಾರಿ ನೌಕರರಲ್ಲಿ ಎಂಥದೋ ವಿಚಿತ್ರ ಭಯ. ಬಾಂಬು ಸಿಡಿದು, ನಾನು ಸಂಜೆ ಹೊತ್ತಿಗೆ ಸತ್ತು ಹೋದರೇನು ಗತಿಯಪ್ಪಾ ಎಂಬ ಆತಂಕ.

ಯಾರೋ ಭ್ರಷ್ಟಾಚಾರ ವಿರೋಧಿ ಶಾಸಕರ ಭವನದಲ್ಲಿ ಇರಿಸಿದ್ದ ಮೂರು ಬಾಂಬ್‌ಗಳು ಕಳೆದೆರಡು ದಿನಗಳಲ್ಲಿ ಪೊಲೀಸರ ಕೈಗೆ ಸಿಕ್ಕಿರುವುದೇ ಈ ಭಯಕ್ಕೆ ಕಾರಣ. ತಾನು ಐಎಸ್‌ಐ ಉಗ್ರವಾದಿಯಲ್ಲ, ಭಯೋತ್ಪಾದಕನಲ್ಲ ; ಇದು ಭ್ರಷ್ಟಾಚಾರಿಗಳನ್ನು ಮಟ್ಟ ಹಾಕುವ ಹೆಜ್ಜೆ ಎಂದು ಹೇಳಿಕೊಂಡು ಇಂಗ್ಲಿಷ್‌ನಲ್ಲಿ ಬಾಂಬ್‌ ಇರಿಸಿದವ ಪತ್ರಗಳನ್ನೂ ಬರೆದಿದ್ದಾನೆ. ಪತ್ರದ ಕೆಳಗಡೆ ಆಜಾದ್‌ ಎಂಬ ಹೆಸರಿದೆ.

ರಾಜ್ಯೋತ್ಸವದ ದಿನ ಶಾಸಕರ ಭವನದ ಶೌಚಾಲಯದಲ್ಲಿ ಎರಡು ಟೈಂ ಬಾಂಬ್‌ಗಳು ಪತ್ತೆಯಾಗಿದ್ದವು. ಅದಾದ ನಂತರ ಪೊಲೀಸರ ಬೆಂಗಾವಲು ಅಲ್ಲಿ ಜಮೆಯಾಯಿತು. ಪದೇಪದೇ ಬಾಂಬ್‌ ತಪಾಸಣೆಯನ್ನೂ ನಡೆಸಲಾಯಿತು. ಭಾನುವಾರ (ನ. 02) ಒಂದು ಸುತ್ತಿನ ತಪಾಸಣೆಯಲ್ಲಿ ಬಾಂಬ್‌ ಎಲ್ಲೂ ಇರಲಿಲ್ಲ. ಆದರೆ, ಸ್ವಲ್ಪ ಸಮಯದ ನಂತರ ನಾಲ್ಕನೇ ಮಹಡಿ ಮೆಟ್ಟಿಲಿನ ಜಂಕ್ಷನ್‌ ಭಾಗದಲ್ಲಿ ಮತ್ತೊಂದು ಬಾಂಬ್‌ ಪತ್ತೆಯಾಯಿತು. ನಗರ ಪೊಲೀಸ್‌ ಆಯುಕ್ತ ಎಸ್‌.ಮರಿಸ್ವಾಮಿ ಹಾಗೂ ಹೆಚ್ಚುವರಿ ಪೊಲೀಸ್‌ ಆಯುಕ್ತ ಸಿ.ಚಂದ್ರಶೇಖರ್‌ಗೆ ಈ ಬಾಂಬ್‌ ಕಣ್ಣಾಮುಚ್ಚಾಲೆಯಾಟ ತಲೆನೋವಾಗಿದೆ.

ನಗರದ ವಿವಿಧ ಪೊಲೀಸ್‌ ಠಾಣೆಗಳ ಸುಮಾರು 100 ಪೊಲೀಸರು ಶಾಸಕರ ಭವನದಲ್ಲಿ ಇನ್ನಷ್ಟು ಬಾಂಬ್‌ಗಳಿರುವ ಶಂಕೆಯಲ್ಲಿ ಈಗಲೂ ತಪಾಸಣೆಯಲ್ಲಿ ನಿರತರಾಗಿದ್ದಾರೆ. ಶಾಸಕರ ಭವನಕ್ಕೆ ಈಗ ಯಾರು ಕಾಲಿಟ್ಟರೂ ಭಾರೀ ತಪಾಸಣೆ. ಈ ಕಟ್ಟಡದಲ್ಲಿ ಶುಚಿ ಮಾಡದ ಅನೇಕ ಜಾಗೆಗಳಿರುವುದೇ ಬಾಂಬನ್ನು ಸುಲಭವಾಗಿ ಇಡಲು ಸಾಧ್ಯವಾಗುತ್ತಿದೆ ಎಂಬುದು ಪೊಲೀಸರ ಅಂಬೋಣ. ನೂರಾರು ಪೊಲೀಸರ ಗಸ್ತನ್ನೂ ಬೇಧಿಸಿ ಮೂರನೇ ಬಾಂಬನ್ನು ಇರಿಸಿದ್ದು ಪೊಲೀಸ್‌ ಪಡೆಗೆ ದೊಡ್ಡ ಸವಾಲಾಗಿದೆ.

ಆಫೀಸಿಗೆ ಚಕ್ಕರ್‌ : ಬಾಂಬ್‌ ಆತಂಕದಲ್ಲಿ ವಿಧಾನಸೌಧ ಮತ್ತು ಎಂ.ಎಸ್‌.ಕಟ್ಟಡಕ್ಕೆ ಕೆಲಸಕ್ಕೆ ಹೋಗುವ ನೌಕರರಲ್ಲಿ ಅನೇಕರು ಸೋಮವಾರ ಆಫೀಸಿಗೆ ಚಕ್ಕರ್‌. ಇನ್ನು ಕೆಲವರು ಬಸ್ಸಿನಲ್ಲಿ ನಡೆಯುತ್ತಿರುವ ಬಾಂಬ್‌ ಕುರಿತ ಬಿಸಿ ಚರ್ಚೆಯಿಂದ ಎಚ್ಚೆತ್ತುಕೊಂಡು, ಆಫೀಸಿಗೆ ಹೋಗುವ ಮನಸ್ಸು ಬದಲಾಯಿಸಿ ಮನೆಯತ್ತ ಮುಖಮಾಡುತ್ತಿರುವುದೂ ಉಂಟು. ಕೆಲವು ಶಾಸಕರ ಹಣೆಯಲ್ಲಂತೂ ಬೆವರು ಸಾಲುಗಳು ಇನ್ನೂ ಇಂಗಿಲ್ಲ.

(ಇನ್ಫೋ ವಾರ್ತೆ)

Post your views

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X