ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೂಡಬಿದ್ರೆ ಸಾಹಿತ್ಯ ಸಮ್ಮೇಳನದಲ್ಲಿ 25 ಪುಸ್ತಕಗಳ ಅನಾವರಣ

By Staff
|
Google Oneindia Kannada News

ಮೂಡಬಿದ್ರೆ ಸಾಹಿತ್ಯ ಸಮ್ಮೇಳನದಲ್ಲಿ 25 ಪುಸ್ತಕಗಳ ಅನಾವರಣ
ಬಿಡುಗಡೆಯಾಗಲಿರುವ ಪುಸ್ತಕಗಳ ಪಟ್ಟಿಯಲ್ಲಿ ದಕ್ಷಿಣ ಕನ್ನಡದ್ದೇ ಸಿಂಹಪಾಲು

ಮಂಗಳೂರು: ಮೂಡಬಿದಿರೆಯಲ್ಲಿ ನಡೆಯಲಿರುವ ಅಖಿಲ ಭಾರತ 71ನೇ ಸಾಹಿತ್ಯ ಸಮ್ಮೇಳನದಲ್ಲಿ ವಿವಿಧ ಸಾಹಿತ್ಯ ಪ್ರಕಾರದ 25 ಕೃತಿಗಳು ಬಿಡುಗಡೆಯಾಗಲಿವೆ.

ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯು ಪುಸ್ತಕ ಪ್ರಕಟಣೆ ಧನಸಹಾಯ ಯೋಜನೆಯಡಿ 25 ಹಸ್ತಪ್ರತಿಗಳನ್ನು ಆಯ್ಕೆ ಮಾಡಿದ್ದು ಪ್ರತಿಯಾಂದು ಕೃತಿಗೂ 5 ಸಾವಿರ ರೂಪಾಯಿ ಧನಸಹಾಯ ನೀಡಲಿದೆ. ಪ್ರಕಟಿತ ಕೃತಿಗಳನ್ನು ಸಾಹಿತ್ಯ ಸಮ್ಮೇಳನದಲ್ಲಿ ಅನಾವರಣಗೊಳಿಸಲಾಗುವುದು ಎಂದು ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಡಾ. ಎಂ. ಮೋಹನ ಆಳ್ವ ಅವರ ಪ್ರಕಟಣೆ ತಿಳಿಸಿದೆ.

ಆಯ್ಕೆಯಾದ ಕೃತಿಗಳು : ಹತ್ತಿರದ ಮಾತು (ಸತ್ಯನ್‌ ದೇರಾಜೆ), ಚಿತ್ತ ಸಾಗರದಲ್ಲಿ (ಎಚ್‌. ಆನಂದ ರಾಮ ಶಾಸ್ತ್ರಿ), ಲೇಖಕರ ಪ್ರಥಮ ಕೃತಿ ವಿಭಾಗದಲ್ಲಿ : ನಕ್ಷತ್ರ ಮೇಯುವ ಹಕ್ಕಿಗಳು(ಹರೀಶ್‌ ಕೇರ), ತುಳು ಭಾಷೆ ಮತ್ತು ಜನಜೀವನ( ಡಾ. ಕೆ. ವಿ. ಜಲಜಾಕ್ಷಿ). ನಾಟಕ : ರೈತನ ಕೂಗು(ಬಸವರಾಜ ಹಳಂಗಳಿ), ಉರ್ವಿ ( ಆನಂದ ಋಗ್ವೇದಿ).

ಪುಸ್ತಕ ವಿಮರ್ಶೆ: ನಾನು ಮತ್ತು ಆಕಾಶ(ಧನಂಜಯ ಕುಂಬ್ಳೆ), ಪುರಾಣ ಕುತೂಹಲ (ಸುಮುಖಾನಂದ)ಸಂಶೋಧನೆ: ಪಾಶುಪತ ದರ್ಶನ (ಎಸ್‌. ಎಸ್‌. ಹಿರೇಮಠ), ಭಾರತೀಯ ಮಹಿಳೆಯರ ಸಾಂಸ್ಕೃತಿಕ ವಿಕಾಸ( ಬಿ. ವಿ. ವೀರಭದ್ರಪ್ಪ).ಕಥಾ ಸಂಕಲನ: ಆಷಾಡದ ಮಳೆ(ಕೆ. ಎಸ್‌. ಭಗವಾನ್‌), ಹೂವಿಗೊಂದು ಹೂ( ಶಂಕರ್‌ ಯು. ಮಂಜೇಶ್ವರ), ಕಾದಂಬರಿ : ಪರಿಹಾರ (ರವಿ ಸಸಿತೋಟ), ತಂಬಿಲ (ಪ್ರಭಾಕರ ನೀರ್‌ಮಾರ್ಗ), ಲಲಿತ ಪ್ರಬಂಧ: ದೆವ್ವಗಳ ಭವ್ಯಲೋಕ (ಜಾನಕಿ ಸುಂದರೇಶ್‌), ನಮ್ಮೂರಿನ ಬಸ್ಸುಗಳು ( ಸಿದ್ಧಾಪುರ ವಾಸುದೇವ ಭಟ್‌).

ಮಕ್ಕಳ ಸಾಹಿತ್ಯ: ಬಾಲಾಯಣ (ಮಲ್ಲಿಕಾ), ಮಂಗಳನ ಅಂಗಳಕೆ ( ಪ. ಗು. ಸಿದ್ಧಾಪುರ). ವಿಜ್ಞಾನ ಸಾಹಿತ್ಯ: ನಿಸರ್ಗದ ಮಡಿಲಲ್ಲಿ(ಡಾ. ಇ. ಬಿ. ಸೇಡಂಕರ್‌), ಸಸ್ಯಾಂತ ರಂಗ(ಡಾ. ವಿರೂಪಾಕ್ಷ ಬಡಿಗೇರ). ಜೀವನ ಚರಿತ್ರೆ: ಮಾರ್ನಾಡು ವರ್ಧಮಾನ ಹೆಗಡೆ (ಮುನಿರಾಜ ರೇಂಜಾಳ), ನೆಲ ಸಂಪಗೆ (ಡಾ. ಉಪ್ಪಂಗಳ ರಾಮ ಭಟ್‌).

ಜಾನಪದ: ಜಾನಪದ ಮಾಹಿತಿಯ ಮರು ಅರ್ಥೈಸುವಿಕೆ ( ಡಾ. ಕೆ. ಜಿ. ಗುರುಮೂರ್ತಿ), ತಮಾಷಾ ಮತ್ತು ನಾನು ( ತಿರುಮಲ ಮಾವಿನಕುಳಿ). ಪ್ರವಾಸ ಸಾಹಿತ್ಯ: ಹಿಮಾಲಯದ ತಪ್ಪಲಲ್ಲಿ(ಬಿ. ಆರ್‌. ವಿಠೋಬರಾವ್‌).

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X