ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಪ್ಲೇವಿನ್‌ನಿಂದ ಯಾರೂ ಸತ್ತಿಲ್ಲ ,ಸುಮ್ಮನೆ ಗೂಬೆ ಕೂರಿಸಲಾಗುತ್ತಿದೆ’

By Staff
|
Google Oneindia Kannada News

‘ಪ್ಲೇವಿನ್‌ನಿಂದ ಯಾರೂ ಸತ್ತಿಲ್ಲ ,ಸುಮ್ಮನೆ ಗೂಬೆ ಕೂರಿಸಲಾಗುತ್ತಿದೆ’
ಲಾಟರಿ ಕೇಂದ್ರಗಳ ಮೇಲೆ ನಡೆಯುತ್ತಿರುವ ದಾಳಿಗೆ ಪ್ಲೇವಿನ್‌ ಆಕ್ರೋಶ

ಬೆಂಗಳೂರು : ಪ್ಲೇವಿನ್‌ ಆನ್‌ಲೈನ್‌ ಲಾಟರಿ ಆಡಿ ಯಾರೊಬ್ಬರೂ ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿಲ್ಲ. ಆದರೂ ರಾಜಕೀಯ ಗುಲ್ಲೆಬ್ಬಿಸಿ ತನ್ನ ಮೇಲೆ ದಾಳಿ ನಡೆಯುತ್ತಿದೆ ಎಂದು ಪ್ಲೇವಿನ್‌ ಆರೋಪಿಸಿದೆ.

ಪ್ಲೇವಿನ್‌ ಬೂತುಗಳನ್ನು ಹಾಳು ಮಾಡುವದನ್ನು ಪ್ರತಿಭಟನಾಕಾರರು ಮೊದಲು ನಿಲ್ಲಿಸಬೇಕು. ಲಾಟರಿ ವಿಷಯದಲ್ಲಿ ಸರ್ಕಾರ ಯಾವುದೇ ನಿಯಂತ್ರಣ ಮಾಡಿದರೂ ಅದನ್ನು ಸ್ವಾಗತಿಸುತ್ತೇವೆ ಎಂದು ಪ್ಲೇವಿನ್‌ ಸಿಇಓ ಸಂಜಯ್‌ ದಾಸ್‌ ಗುರುವಾರ ಸುದ್ದಿಗಾರರಿಗೆ ತಿಳಿಸಿದರು.

ಕರ್ನಾಟಕದಲ್ಲಿ ಪ್ಲೇವಿನ್‌ ಲಾಟರಿ ಸುಮಾರು 1100 ಕಡೆ ಬಿಕರಿಯಾಗುತ್ತಿದೆ. ಈ ಪೈಕಿ 700 ಪ್ಲೇವಿನ್‌ ಕೇಂದ್ರಗಳು ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಲ್ಲಿವೆ. ಉಳಿದವು ಜಿಲ್ಲಾ ಕೇಂದ್ರಗಳಲ್ಲಿವೆ. ಅಬ್ಬಬ್ಬಾ ಅಂದರೆ 10 ಬೂತುಗಳು ತೀರಾ ಮೂಲಭೂತ ಸೌಲಭ್ಯಗಳಿಲ್ಲದ ಹಳ್ಳಿಗಳಲ್ಲಿ ಇವೆ.

ಪೊಲೀಸರಿಂದ ರಾಜ್ಯ ಲಾಟರಿ ನಿರ್ದೇಶಕರು ಪಡೆದಿರುವ ವರದಿಯಂತೆ ಆನ್‌ಲೈನ್‌ ಲಾಟರಿಯಿಂದ ಯಾರೊಬ್ಬರೂ ಆತ್ಮಹತ್ಯೆ ಮಾಡಿಕೊಂಡಿಲ್ಲ. ಮೂವರು ಕೃಷಿ ಪರಿಣತರು ಕೂಡ ಇದನ್ನು ಸಮರ್ಥಿಸಿದ್ದು, ಆತ್ಮಹತ್ಯೆಗೆ ಬದಲಾಗಿರುವ ಕೃಷಿ ತಂತ್ರವೇ ಕಾರಣ ಎಂದಿದ್ದಾರೆ. ಹಾಗಿದ್ದೂ ಸುಮ್ಮನೆ ಪ್ಲೇವಿನ್‌ ಮೇಲೆ ಗೂಬೆ ಕೂರಿಸಲಾಗುತ್ತಿದೆ. ಲಾಟರಿಗಳ ನಿಯಂತ್ರಿಸುವುದು ಒಳ್ಳೆಯದೇ. ಆನ್‌ಲೈನ್‌ ಲಾಟರಿ ನಿಯಂತ್ರಣಕ್ಕಾಗಿ ಸರಕಾರದ ಮೇಲೆ ಒತ್ತಡ ಹೆಚ್ಚಾಗುತ್ತಿರುವುದೂ ನಮ್ಮ ಅರಿವಿಗೆ ಬಂದಿದೆ ಎಂದು ಸಂಜಯ್‌ ಹೇಳಿದರು.

ಐದು ವರ್ಷಗಳ ಪರವಾನಿಗಿ ಅವಧಿಯಲ್ಲಿ ಪ್ಲೇವಿನ್‌ 1096 ಕೋಟಿ ರೂಪಾಯಿಗಳನ್ನು ಸರಕಾರಕ್ಕೆ ನೀಡಬೇಕು ಎಂಬುದು ಒಪ್ಪಂದ. ಈಗಾಗಲೇ 100 ಕೋಟಿ ರೂ.ಗಳನ್ನು ನೀಡಿದ್ದಾಗಿದೆ. ಸರಕಾರ ಒಂದು ವರ್ಷದ ಅವಧಿಯಲ್ಲಿ ಲಾಟರಿ ಕ್ಷೇತ್ರದಲ್ಲಿ ಗಳಿಸಿದ ಅತಿ ಹೆಚ್ಚು ಆದಾಯ ಇದು ಎಂದ ಸಂಜಯ್‌, ರಾಜ್ಯ ಲಾಟರಿ ಹಾಗೂ ಆನ್‌ಲೈನ್‌ ಲಾಟರಿ ಕಾಯ್ದೆಯನ್ನು ಪ್ಲೇವಿನ್‌ ಸರಿಯಾಗಿ ಪಾಲಿಸುತ್ತಿದೆ. ಕಾನೂನು ಪ್ರಕಾರವೇ ಪ್ಲೇವಿನ್‌ ಉದ್ಯಮ ನಡೆಯುತ್ತಿದೆ ಎಂದರು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X