ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಟ್ಸ್‌ಕನ್ನಡ.ಕಾಂ ಮುಂಭಾಗದ ಮೇಲುಸೇತುವೆ ಉದ್ಘಾಟನೆ

By Staff
|
Google Oneindia Kannada News

ದಟ್ಸ್‌ಕನ್ನಡ.ಕಾಂ ಮುಂಭಾಗದ ಮೇಲುಸೇತುವೆ ಉದ್ಘಾಟನೆ
ಬೆಂಗಳೂರಿನ ಶ್ವಾಸಕೋಶಕ್ಕೆ ಒಂಚೂರು ನಿರಾಳ

At last Hossur Road Flyover is open for vehicles(ದಟ್ಸ್‌ಕನ್ನಡ ವರದಿ)

ಬೆಂಗಳೂರು : ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 7, ಹೊಸೂರು ರಸ್ತೆಯ https://www.oneindia.com ಬಳಿ ನಿರ್ಮಿಸಲಾಗಿರುವ ನೂತನ ಮೇಲು ಸೇತುವೆಯನ್ನು ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಗುರುವಾರ ಬೆಳಗ್ಗೆ ಸಂಚಾರಕ್ಕೆ ಅನಾವರಣಗೊಳಿಸಿದರು.

ಗುರುವಾರ (ಅ.30) ಬೆಳಗ್ಗೆ 11ರ ಸುಮಾರಿಗೆ ಟೇಪು ಕತ್ತರಿಸುವ ಮೂಲಕ ಮೇಲು ಸೇತುವೆಯನ್ನು ಸಂಚಾರಕ್ಕೆ ಮುಕ್ತಗೊಳಿಸಿದ ಮುಖ್ಯಮಂತ್ರಿ ಕೃಷ್ಣ , ಸೇತುವೆಯ ಮೇಲೆ ಅಡ್ಡಾಡಿ ಕಾಮಗಾರಿಯನ್ನು ವೀಕ್ಷಿಸಿದರು. 1 ಗಂಟೆ ವಿಳಂಬವಾಗಿ ಆಗಮಿಸಿದ ಮುಖ್ಯಮಂತ್ರಿ ಕೃಷ್ಣ , ಸುರಿಬಿಸಿಲಿನಲ್ಲಿ ಕಾದಿದ್ದ ನಾಗರಿಕರನ್ನು ಕಾಯಿಸಿದರು. ಕಾರ್ಯಕ್ರಮದ ಪ್ರಯುಕ್ತ 45 ನಿಮಿಷಗಳ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು .

SM Krishna in a happy mood while inaugurating the flyoverಮೇಲು ಸೇತುವೆಯ ಅನಾವರಣದಿಂದಾಗಿ ಕೇಂದ್ರ ರೇಷ್ಮೆ ಮಂಡಳಿ ವೃತ್ತದ ಬಳಿಯ ಸಂಚಾರ ದಟ್ಟಣೆಗೆ ಪರಿಹಾರ ದೊರೆತಿದ್ದು, ನಾಗರಿಕರು ನೆಮ್ಮದಿಯ ಉಸಿರುಬಿಡುವಂತಾಗಿದೆ. ಎರಡೂ ಬದಿಯ ತಲಾ ಮೂರು ಪಥ ಒಳಗೊಂಡಿರುವ ಬೆಂಗಳೂರಿನ ಮೊದಲ ಮೇಲು ಸೇತುವೆ ಇದಾಗಿದೆ. 530 ಮೀಟರ್‌ ಉದ್ದದ ಈ ಮೇಲುರಸ್ತೆಯ ನಿರ್ಮಾಣಕ್ಕೆ 20 ಕೋಟಿ ರುಪಾಯಿಗೂ ಅಧಿಕ ವೆಚ್ಚ ತಗುಲಿದೆ.

ಸಚಿವರಾದ ಆರ್‌.ವಿ.ದೇಶಪಾಂಡೆ, ಡಿ.ಕೆ.ಶಿವಕುಮಾರ್‌, ಬಿ.ಕೆ.ಚಂದ್ರಶೇಖರ್‌, ಬಿಡಿಎ ಆಯುಕ್ತ ಜಯಕರ್‌ ಜೆರೋಮ್‌, ಶಾಸಕರಾದ ಅಶೋಕ್‌ ಹಾಗೂ ಸೀತಾರಾಂ ಮೇಲು ಸೇತುವೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಉದ್ಘಾಟನಾ ಶಿಲಾ ಫಲಕದಲ್ಲಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಹೆಸರಿದೆ, ಆದರೆ ದೇವೇಗೌಡರು ಕಾರ್ಯಕ್ರಮಕ್ಕೆ ಬಂದಿರಲಿಲ್ಲ .

ಮುಖಪುಟ / ಕೃಷ್ಣಗಾರುಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X