ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ.1ರಿಂದ ಬೆಂಗಳೂರುಐಟಿ.ಕಾಂ ಮೇಳ; ಈಸಲ ಏನಪ್ಪಾ ವಿಶೇಷ?

By Staff
|
Google Oneindia Kannada News

ನ.1ರಿಂದ ಬೆಂಗಳೂರುಐಟಿ.ಕಾಂ ಮೇಳ; ಈಸಲ ಏನಪ್ಪಾ ವಿಶೇಷ?
ಸಾಫ್ಟ್‌ವೇರ್‌ ರಫ್ತಿನಲ್ಲಿ ಶೇ.30ರಿಂದ 35ರಷ್ಟು ಹೆಚ್ಚಳದ ನಿರೀಕ್ಷೆ

ಬೆಂಗಳೂರು: ಆರನೇ ಐಟಿ ಮೇಳಕ್ಕೆ ಭಾರತದ ಸಿಲಿಕಾನ್‌ ನಗರಿ ಸಿದ್ಧವಾಗುತ್ತಿದೆ. ನವೆಂಬರ್‌ 1ರಿಂದ ಐದು ದಿನಗಳ ಕಾಲ ನಗರದ ಅರಮನೆ ಆವರಣದಲ್ಲಿ ಬೆಂಗಳೂರು ಐಟಿ ಮೇಳ ನಡೆಯಲಿದೆ ಎಂದು ಐಟಿ ಹಾಗೂ ಬಿಟಿ ಸಚಿವ ಡಿ. ಬಿ. ಇನಾಂದಾರ್‌ ಬುಧವಾರ (ಅ. 29) ತಿಳಿಸಿದರು.

ಪ್ರತಿಷ್ಠಿತ ಐಟಿ ಮೇಳದ ಪೂರ್ವ ತಯಾರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಚಿವರು ಸುದ್ದಿಗಾರರೊಂದಿಗೆ ಮಾತನಾಡುತ್ತ , ಬೆಂಗಳೂರುಐಟಿ.ಕಾಂ ಮೇಳದ ರೂಪುರೇಷೆಗಳ ವಿವರ ನೀಡಿದರು. ಹೊಸದಾಗಿ ನೇಮಕಗೊಂಡಿರುವ ರಾಜ್ಯಐಟಿ ಕಾರ್ಯದರ್ಶಿ ಕೆ. ಎಂ. ಶಿವಕುಮಾರ್‌ ಹಾಗೂ ಸಾಫ್ಟ್‌ವೇರ್‌ ತಂತ್ರಜ್ಞಾನ ಪಾರ್ಕ್‌ ನಿರ್ದೇಶಕ ಬಿ.ವಿ. ನಾಯ್ಡು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದು ಮೇಳದ ಬಗೆಗೆ ಮಾಹಿತಿ ನೀಡಿದರು. ಏಷ್ಯಾದ ಅತಿ ದೊಡ್ಡ ಐಟಿ ಮೇಳ ಎಂದು ಗುರುತಿಸಿಕೊಂಡಿರುವ ಈ ಕಾರ್ಯಕ್ರಮವನ್ನು ರಾಜ್ಯಪಾಲ ಟಿ.ಎನ್‌.ಚತುರ್ವೇದಿ ಹಾಗೂ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ನ.1ರಂದು ಉದ್ಘಾಟಿಸುವರು.

ಮೇಳದ ಬಗ್ಗೆ :

  • ಈ ಬಾರಿ 20 ಸಾವಿರ ಚದರ ಮೀಟರ್‌ ವಿಸ್ತಾರದಲ್ಲಿ ಮೇಳಕ್ಕಾಗಿ ಮಳಿಗೆಗಳನ್ನು ಹಾಕಲಾಗಿದ್ದು , ಈಗಾಗಲೇ ಎಲ್ಲ ಮಳಿಗೆಗಳೂ ಭರ್ತಿಯಾಗಿವೆ.
  • ಕೇಂದ್ರ ಐಟಿ ಮಂತ್ರಿ ಅರುಣ್‌ ಶೌರಿಯವರನ್ನು ಮೇಳಕ್ಕೆ ಆಹ್ವಾನಿಸಲಾಗಿದ್ದರೂ, ಅವರು ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗುತ್ತಿಲ್ಲ.
  • 500 ಮಂದಿ ವಿದೇಶೀ ಸಂದರ್ಶಕರು ಸೇರಿದಂತೆ 15 ಸಾವಿರ ಮಂದಿ ಉದ್ಯಮ ಪ್ರತಿನಿಧಿಗಳು ಮೇಳದಲ್ಲಿ ಭಾಗವಹಿಸುವರು. ಬಿ. ಪಿ. ಒ, ಐಟಿ ನೇಷನ್ಸ್‌, ಎಸ್‌ಟಿಪಿಐ, ಸಾಫ್ಟ್‌ವೇರ್‌ ಸೊಲ್ಯೂಷನ್ಸ್‌ ಗಳಿಗೆ ಮೇಳದಲ್ಲಿ ಪ್ರತ್ಯೇಕ ಪೆವಿಲಿಯನ್‌ಗಳನ್ನು ಒದಗಿಸಲಾಗುವುದು. ವಯರ್‌ಲೆಸ್‌ ಇಂಟರ್‌ನೆಟ್‌ ಸೌಲಭ್ಯ ಇರುವ ದೇಶದ ಪ್ರಥಮ ಐಟಿ ಮೇಳ ಎಂಬ ಖ್ಯಾತಿಯೂ ಈ ಮೇಳಕ್ಕೆ ಸಲ್ಲಲಿದೆ.
ಸಾಮಾನ್ಯ ಮನುಷ್ಯನಿಗೆ ಐಟಿ :

  • ಐಐಟಿ ಮೆಡ್ರಾಸ್‌ನ ಪ್ರೊಫೆಸರ್‌ ಅಶೋಕ್‌ ಜುನ್‌ಜುನ್‌ವಾಲಾ ಅವರಿಂದ ಹಾಗೂ ನೆಟ್‌ಕೋರ್‌ನ ಎಂ.ಡಿ. ರಾಜೇಶ್‌ ಜೈನ್‌ ಅವರಿಂದ ಉಪನ್ಯಾಸ, ವಿದ್ಯಾರ್ಥಿಗಳ ಇಂಟರ್‌ನೆಟ್‌ ಪೆವಿಲಿಯನ್‌, ಗ್ರಾಮೀಣ ಐಟಿ ಕ್ವಿಝ್‌ ಮೂಲಕ ಜನ ಸಾಮಾನ್ಯರೂ ಮೇಳದಲ್ಲಿ ಭಾಗವಹಿಸಲು ಪ್ರೋತ್ಸಾಹ.
  • ಎಎಂಡಿ, ಇಂಟೆಲ್‌, ಐಬಿಎಂ, ಟಿಸಿಎಸ್‌, ಇನ್ಫೋಸಿಸ್‌, ಸಬೆಕ್ಸ್‌ ಸಿಸ್ಟಮ್ಸ್‌ ಮತ್ತು ಸಿ-ಡ್ಯಾಕ್‌ ಕಂಪನಿಗಳು ಈ ಮೇಳದಲ್ಲಿ ಮಳಿಗೆಗಳನ್ನು ತೆರೆಯಲಿವೆ. ಕಳೆದ ಬಾರಿ ಸುಮಾರು 35 ಐಟಿ ಕಂಪೆನಿಗಳು ಮೇಳದಲ್ಲಿ ಭಾಗವಹಿಸಿರಲಿಲ್ಲ. ಈ ಬಾರಿ ಆ ಎಲ್ಲ ಕಂಪೆನಿಗಳೂ ಮೇಳದಲ್ಲಿ ಭಾಗವಹಿಸುತ್ತಿವೆ.
  • ಜುರೋಂಗ್ಟನ್‌ ಕಾರ್ಪೊರೇಶನ್‌ ಐಟಿ ಕಾರಿಡಾರ್‌ ಪ್ರಸ್ತಾಪವನ್ನು ಸರಕಾರದ ಮುಂದಿಟ್ಟಿದೆ. ಐಟಿ ಮೇಳದ ನಂತರ ಐಟಿ ಕಾರಿಡಾರ್‌ ಕಾಯ್ದೆಯನ್ನು ಅಂಗೀಕರಿಸಲಾಗುವುದು. ಕಾರ್ಪೊರೇಶನ್‌ನ ಪ್ರಸ್ತಾಪವನ್ನು ಕೈಗೆತ್ತಿಕೊಳ್ಳಲಾಗುವುದು.
ಈ ವರ್ಷ ಸಾಫ್ಟ್‌ವೇರ್‌ ರಫ್ತಿನಲ್ಲಿ ಹೆಚ್ಚಳ ನಿರೀಕ್ಷೆ

ಈ ವರ್ಷ ಬೆಂಗಳೂರಿನ ಸಾಫ್ಟ್‌ವೇರ್‌ ರಫ್ತು ಉದ್ಯಮದಲ್ಲಿ ಸುಮಾರು ಶೇ.30ರಿಂದ 35ರಷ್ಟು ಹೆಚ್ಚಳವಾಗುವ ನಿರೀಕ್ಷೆಯಿದೆ ಎಂದು ಸಾಫ್ಟ್‌ವೇರ್‌ ಟೆಕ್‌ ಪಾರ್ಕ್‌ ನಿರ್ದೇಶಕ ಬಿ.ವಿ. ನಾಯ್ಡು ಹೇಳಿದ್ದಾರೆ. ಈಗಾಗಲೇ ಸಾಫ್ಟ್‌ವೇರ್‌ ಉದ್ಯಮ ಮತ್ತೆ ಚೇತರಿಸಿಕೊಳ್ಳುವ ಲಕ್ಷಣಗಳು ಕಂಡು ಬರುತ್ತಿವೆ ಎಂದು ನಾಯ್ಡು ಅವರು ಈ ಹೊಸ ಬೆಳವಣಿಗೆಯನ್ನು ಸೆಕೆಂಡ್‌ ಐಟಿ ವೇವ್‌ ಎಂದು ಬಣ್ಣಿಸಿದರು.

(ಪಿಟಿಐ)

ಮುಖಪುಟ / ಐಟಿ - ಬಿಟಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X