ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯೋತ್ಸವದಂದು ಸಾಣೇಹಳ್ಳಿಯಲ್ಲಿ ನಾಟಕೋತ್ಸವ ಆರಂಭ

By Staff
|
Google Oneindia Kannada News

ರಾಜ್ಯೋತ್ಸವದಂದು ಸಾಣೇಹಳ್ಳಿಯಲ್ಲಿ ನಾಟಕೋತ್ಸವ ಆರಂಭ
ಕೃತಿಯ ಉತ್ತಮ ವಿನ್ಯಾಸ, ಕಲೆ ಹಾಗೂ ಮುದ್ರಣಕ್ಕೆ ಸಂದ ಪ್ರಶಸ್ತಿ

ಸಾಣೇಹಳ್ಳಿ: ಇಲ್ಲಿನ ಶಿವಕುಮಾರ ಕಲಾ ಸಂಘದ ಆಶ್ರಯದಲ್ಲಿ ಹೊಸದಾಗಿ ಶ್ರೀ ಶಿವಕುಮಾರ ಬಯಲು ರಂಗ ಮಂದಿರವೊಂದನ್ನು ನಿರ್ಮಿಸಲಾಗಿದ್ದು, ರಂಗಮಂದಿರದ ಉದ್ಘಾಟನೆ ಹಾಗೂ ನಾಟಕೋತ್ಸವದ ಉದ್ಘಾಟನಾ ಸಮಾರಂಭವು ನವೆಂಬರ್‌ 1ರ ರಾಜ್ಯೋತ್ಯವದಂದು ನಡೆಯಲಿದೆ.

ನವೆಂಬರ್‌ 1ರಿಂದ ಒಂದು ವಾರದ ಕಾಲ ನಾಟಕೋತ್ಸವ ನಡೆಯಲಿದ್ದು , ಸಿರಿಗೆರೆಯ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಈ ಕಾರ್ಯಕ್ರಮವನ್ನು ಉದ್ಘಾಟಿಸುವರು. ಕ್ರೀಡಾ ಸಚಿವ ಎಸ್‌. ಎಸ್‌. ಮಲ್ಲಿಕಾರ್ಜುನಯ್ಯ ಬಯಲು ರಂಗಮಂದಿರವನ್ನು ಉದ್ಘಾಟಿಸುವರು.

ನವೆಂಬರ್‌ 7 ರಂದು ರೈತರ ಸಮಸ್ಯೆ ಹಾಗೂ ನಮ್ಮ ಹೊಣೆಗಾರಿಕೆ ಎಂಬ ವಿಷಯ ಕುರಿತು ವಿಚಾರ ಸಂಕಿರಣವೂ ನಡೆಯಲಿದೆ. ನಾಟಕೋತ್ಸವದಲ್ಲಿ ವಿಶ್ವಬಂಧು ಮರುಳ ಸಿದ್ಧ, ಆಮ್ರಪಾಲಿ, ಆವಸ್ಥೆ, ನರ್ತಕಿ ಪೂಜೆ, ನೀಲಿ ಕುದುರೆ, ಮೊದಲಗಿತ್ತಿ, ಸಿಂಗಾರೆವ್ವ ಮತ್ತು ಅರಮನೆ, ರಕ್ತಾಕ್ಷಿ ನಾಟಕಗಳು ಪ್ರದರ್ಶನಗೊಳ್ಳಲಿವೆ.

ನಾಟಕೋತ್ಸವ ನಡೆಯುವ ಏಳು ದಿನಗಳಲ್ಲಿ ನಡೆಯುವ ಚರ್ಚೆಗಳು ಹಾಗೂ ಗೋಷ್ಠಿಗಳಲ್ಲಿ ವಿವಿಧ ಮಠಾಧೀಶರು, ಸಂಸದರು ಭಾಗವಹಿಸುವರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X