ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೂವಿನ ಹಡಗಲಿಯಲ್ಲಿ ನ.1ರಿಂದ ಕಿತ್ತೂರು ರಾಣಿ ಚೆನ್ನಮ್ಮ ಉತ್ಸವ

By Staff
|
Google Oneindia Kannada News

ಹೂವಿನ ಹಡಗಲಿಯಲ್ಲಿ ನ.1ರಿಂದ ಕಿತ್ತೂರು ರಾಣಿ ಚೆನ್ನಮ್ಮ ಉತ್ಸವ
ಮುಖ್ಯಮಂತ್ರಿ ಕೃಷ್ಣಾರಿಂದ ಉತ್ಸವದ ಉದ್ಘಾಟನೆ

ಹಗರಿಬೊಮ್ಮನ ಹಳ್ಳಿ: ಹೂವಿನ ಹಡಗಲಿ ತಾಲ್ಲೂಕು ಕೇಂದ್ರದಲ್ಲಿ ನವೆಂಬರ್‌ 1ರಿಂದ ವೀರರಾಣಿ ಕಿತ್ತೂರ ಚೆನ್ನಮ್ಮನ 180ನೇ ವಿಜಯೋತ್ಸವ ಆಚರಣೆ ನಡೆಯಲಿದ್ದು, ಉತ್ಸವಕ್ಕಾಗಿ ಭರ್ಜರಿ ಸಿದ್ಧತೆಗಳು ಆರಂಭವಾಗಿವೆ.

ಚೆನ್ನಮ್ಮ ಉತ್ಸವದ ಜೊತೆಗೆ ಬಳ್ಳಾರಿ ಜಿಲ್ಲಾ ವೀರಶೈವ ಪಂಚಮಶಾಲಿ ಸಮಾವೇಶ ಕೂಡ ಅದ್ಧೂರಿಯಾಗಿ ನಡೆಯಲಿದೆ. ಚೆನ್ನಮ್ಮ ಉತ್ಸವದಲ್ಲಿ ಉಜ್ಜಯಿನಿಯ ಮರುಳಸಿದ್ಧ ರಾಜ ದೇಶಿಕೇಂದ್ರ ಮಹಾ ಸ್ವಾಮಿ ಆಶೀರ್ವಚನ ನೀಡುವರು. ಮುಖ್ಯಮಂತ್ರಿ ಎಸ್‌. ಎಂ. ಕೃಷ್ಣ ಉತ್ಸವವನ್ನು ಉದ್ಘಾಟಿಸುವರು ಎಂದು ವೀರಶೈವ ಪಂಚಮಶಾಲಿ ವಕ್ತಾರ ಅಂಗಡಿ ಗವಿಸಿದ್ಧಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ವೀರಶೈವ ಪಂಚಮಶಾಲಿ ಜನಾಂಗದ ರಾಜ್ಯಾಧ್ಯಕ್ಷ ಬಾವಿ ಬೆಟ್ಟಪ್ಪ ಸಮಾವೇಶದ ಅಧ್ಯಕ್ಷತೆ ವಹಿಸುವರು. ಈ ಸಂದರ್ಭದಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ಶೋಭಾಯಾತ್ರೆಯನ್ನೂ ಆಯೋಜಿಸಲಾಗಿದೆ. ಮೆರವಣಿಗೆಯಲ್ಲಿ ಸಾಗಲಿರುವ ರಾಣಿ ಚೆನ್ನಮ್ಮನವರ ಹೊಸ ಭಾವ ಚಿತ್ರವನ್ನು ಕೇಂದ್ರ ಸಚಿವ ಬಸನಗೌಡ ಆರ್‌. ಪಾಟೀಲ್‌ ಉದ್ಘಾಟಿಸುವರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X