• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೈಸೂರಲ್ಲಿ ಚಿತ್ಪಾವನ ಬ್ರಾಹ್ಮಣರ ಮೇಳ

By Staff
|

ಮೈಸೂರಲ್ಲಿ ಚಿತ್ಪಾವನ ಬ್ರಾಹ್ಮಣರ ಮೇಳ

ಡಿಸೆಂಬರ್‌ 27 ಮತ್ತು 28ರಂದು ಚಿತ್ಪಾವನ ಬ್ರಾಹ್ಮಣರ ಮೂರನೆ ಮಹಾ ಸಮ್ಮೇಳನ

ಮೈಸೂರು : ಅಖಿಲ ಕರ್ನಾಟಕ ಚಿತ್ಪಾವನ ಬ್ರಾಹ್ಮಣ ಸಂಘವು ನಾಡಿನ ಸಾಂಸ್ಕೃತಿಕ ಕೇಂದ್ರವೆನಿಸಿರುವ ಮೈಸೂರು ನಗರದಲ್ಲಿ ಡಿಸೆಂಬರ್‌ ತಿಂಗಳಲ್ಲಿ (ತಾ. 27 ಮತ್ತು 28, 2003) ಅಖಿಲ ಕರ್ನಾಟಕ ಚಿತ್ಪಾವನ ಬ್ರಾಹ್ಮಣರ ತೃತೀಯ ಮಹಾಸಮ್ಮೇಳನವನ್ನು ಆಯೋಜಿಸಿದೆ.

ಸಮ್ಮೇಳನದ ಸಮರ್ಥ ನಿರ್ವಹಣೆಗಾಗಿ ಸಮ್ಮೇಳನ ಸಮಿತಿ ಹಾಗೂ ಹಲವು ಉಪಸಮಿತಿಗಳನ್ನು ನೇಮಿಸಲಾಗಿದ್ದು, ಪೂರ್ವಭಾವಿ ಸಿದ್ಧತೆಗಳು ಈಗಾಗಲೇ ಪ್ರಾರಂಭವಾಗಿವೆ ಎಂದು ಅಖಿಲ ಕರ್ನಾಟಕ ಚಿತ್ಪಾವನ ಬ್ರಾಹ್ಮಣ ಸಂಘದ ಪ್ರಕಟಣೆ ತಿಳಿಸಿದೆ.

Chitpavan Brahmins Conference at Mysoreಈ ಹಿಂದೆ 1994 ಹಾಗೂ 1998ರಲ್ಲಿ ನಡೆದ ಎರಡು ಸಮ್ಮೇಳನಗಳಿಂದ ಕರ್ನಾಟಕದ ಮೂಲೆಮೂಲೆಗಳಲ್ಲಿ ಚದುರಿಹೋದ ಚಿತ್ಪಾವನ ಬ್ರಾಹ್ಮಣರಲ್ಲಿ ಸಂಘಟನೆಯ ಅರಿವು ಮೂಡಿದ್ದು , ಚಿತ್ಪಾವನ ಬ್ರಾಹ್ಮಣರ ಸಾಂಸ್ಕೃತಿಕ ಪರಂಪರೆಯನ್ನು ಅರ್ಥವತ್ತಾಗಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಚಿಂತನೆಗಳು ವೈಯಕ್ತಿಕ ಮಟ್ಟದಿಂದ ಸಾಂಘಿಕ ಮಟ್ಟಕ್ಕೆ ಏರಿವೆ.

ದಾಟಬೇಕಿದೆ ಲಕ್ಷ್ಮಣರೇಖೆ : ಭಾರತೀಯ ಬ್ರಾಹ್ಮಣ ಸಮಾಜ ಪ್ರದೇಶ-ಭಾಷೆ-ಕಾಲಗತಿಗಳ ಪ್ರಭಾವದಿಂದ ಹಾಗೂ ಇತರ ಐತಿಹಾಸಿಕ ಕಾರಣಗಳಿಂದ ಶಾಖೋಪಶಾಖೆಗಳಾಗಿ ಹಂಚಿಹೋಗಿ ಪ್ರತಿಯಾಂದು ಶಾಖೆಯೂ ತಮ್ಮ ಸುತ್ತಲೂ ಲಕ್ಷ್ಮಣರೇಖೆಯನ್ನೆಳೆದು ಸಂಕುಚಿತವಾಗಿವೆ. ನಾವಿಂದು ಈ ಲಕ್ಷ್ಮಣರೇಖೆಯನ್ನು ದಾಟಿ ಇನ್ನುಳಿದ ಶಾಖೆಗಳೊಡನೆ ನಮ್ಮನ್ನು ಗುರುತಿಸಿಕೊಳ್ಳಬೇಕಾದ ಕಾಲ ಬಂದಿದೆ.

ಬದಲಾದ ಸಾಂಸ್ಕೃತಿಕ ಸಂದರ್ಭದಲ್ಲಿ ನಮ್ಮ ಸಾಂಸ್ಕೃತಿಕ ಬೇರುಗಳನ್ನು ಕಳಚಿಕೊಳ್ಳದೆ ಹೇಗೆ ತಲೆಯೆತ್ತಿ ನಿಲ್ಲಬಹುದು ಎಂಬುದರ ಬಗ್ಗೆ ಚಿಂತನೆ ಮಾಡಬೇಕಾದ ಅಗತ್ಯ ಇಂದು ಎಂದಿಗಿಂತಲೂ ಹೆಚ್ಚಾಗಿದೆ. ಸ್ವಾವಲಂಬನೆ, ಸ್ವ-ಉದ್ಯೋಗ, ಯುವಶಕ್ತಿ, ಸ್ತ್ರೀ ಶಕ್ತಿಗಳ ಉಪಯೋಗ ಇವುಗಳ ಬಗ್ಗೆ ವಿಶೇಷ ಗಮನ ನೀಡಬೇಕಾದ ಅಗತ್ಯವಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.

ಈ ಎಲ್ಲ ವಿಚಾರಗಳ ಬಗ್ಗೆ ಮುಕ್ತವಾಗಿ ಚರ್ಚಿಸಲು ಅವಕಾಶ ಮಾಡಿಕೊಡುವ ದೃಷ್ಟಿಯಿಂದ ಈ ಬಾರಿಯ ಮಹಾ ಸಮ್ಮೇಳನದಲ್ಲಿ ವಿಶೇಷ ಗೋಷ್ಠಿಗಳನ್ನೇರ್ಪಡಿಸಲಾಗುವುದು. ಈ ಗೋಷ್ಠಿಗಳಲ್ಲಿ ಸಂಬಂಧಿಸಿದ ವಿಷಯಗಳಲ್ಲಿ ಪರಿಣತರಿಂದ ಪ್ರಬಂಧಗಳನ್ನು ಮಂಡಿಸಿ ಅವುಗಳ ಬಗ್ಗೆ ಚರ್ಚಿಸಲು ಪ್ರಶ್ನೋತ್ತರ ವೇಳೆಯನ್ನು ನಿಗದಿಪಡಿಸಲಾಗುವುದು.

ಈ ಸಂದರ್ಭದಲ್ಲಿ ಚಿತ್ಪಾವನ ವಿಳಾಸದರ್ಶಿನಿಯ ಪರಿಷ್ಕೃತ ಇಂಗ್ಲಿಷ್‌ ಆವೃತ್ತಿಯನ್ನೂ ಚಿತ್ಪಾವನರ ಸ್ವ-ಉದ್ಯೋಗ ಕೈಪಿಡಿಯನ್ನೂ ಪ್ರಕಟಿಸಲಾಗುವುದು. ಇದಲ್ಲದೆ ಸಮ್ಮೇಳನದ ಸವಿನೆನಪಿಗಾಗಿ ಒಂದು ಸುಂದರ ಸ್ಮರಣಸಂಚಿಕೆಯನ್ನು ಸಂಪಾದಿಸಿ ಪ್ರಕಟಿಸಲಾಗುವುದು.

ಈ ಸಮ್ಮೇಳನವನ್ನು, ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿರುವ ಗೋಕರ್ಣಕ್ಷೇತ್ರದ ವೇ।।ಬ್ರ।।ಶ್ರೀ। ಕೇಶವ ಭಟ್‌ ಜೋಗಳೇಕರರ ನೇತೃತ್ವದಲ್ಲಿ ನಡೆಸಲಾಗುವುದು.

ಸಮ್ಮೇಳನ ಕಾರ್ಯಕಾರಿ ಸಮಿತಿ ಇಂತಿದೆ :

- ವಿಜಯ ಗೋರೆ, ಐ.ಅ.ಎಸ್‌, ಬೆಂಗಳೂರು

(ಗೌರವಾಧ್ಯಕ್ಷರು, ಸಮ್ಮೇಳನ ಸಮಿತಿ)

- ಎಂ. ಬಾಲಚಂದ್ರ ಡೋಂಗ್ರೆ

(ಅಧ್ಯಕ್ಷರು, ಅ.ಕ.ಚಿ.ಬ್ರಾ.ಸಂಘ, ಹಾಗೂ ಸಮ್ಮೇಳನ ಸಮಿತಿ)

- ಡಿ. ಹೃಷಿಕೇಶ ಹೆಬ್ಬಾರ್‌ ಗೋಗಟೆ

( ಕಾರ್ಯದರ್ಶಿ, ಸಮ್ಮೇಳನ ಸಮಿತಿ)

ಮನವಿ: ಧನಸಹಾಯದ ಚೆಕ್‌ ಅಥವಾ ಡಿಡಿಗಳನ್ನು ‘ಚಿತ್ಪಾವನ ಬ್ರಾಹ್ಮಣ ಸಂಘ, ಮೈಸೂರು’ ಹೆಸರಿಗೆ ಮೈಸೂರಲ್ಲಿ ಜಮೆಯಾಗುವಂತೆ ಬರೆದು ಕಳಿಸಬೇಕೆಂದು ಕೋರಿಕೆ.

ಸಂಪರ್ಕ ವಿಳಾಸ : 65B Shanthi Marga, Siddharthanagar, Mysore 570 011, India

ದೂರವಾಣಿ : 0821-2472784, 2443783

ವಿದ್ಯುನ್ಮಾನ ಅಂಚೆ: akcbs_sammelan@yahoo.com

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more