• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದಸರೆ ಸಿರಿ ಹಂಪಿಗೂ ಹರಿವು, ಸಂಸ್ಕೃತಿ ಉತ್ಸವಕ್ಕೆ ಖಾಸಗಿ ನೆರವು

By Staff
|

ದಸರೆ ಸಿರಿ ಹಂಪಿಗೂ ಹರಿವು, ಸಂಸ್ಕೃತಿ ಉತ್ಸವಕ್ಕೆ ಖಾಸಗಿ ನೆರವು

ಖಾಸಗಿ ಪ್ರಾಯೋಜಕರಿಗೆ ಇಲ್ಲೂ ಮೊರೆ, ವಿದೇಶೀ ಪ್ರವಾಸಿಗರಿಗೆ ಮುದ ಕೊಡುವ ಕಾರ್ಯಕ್ರಮಗಳು

*ದಟ್ಸ್‌ಕನ್ನಡ ಬ್ಯೂರೋ

ಬೆಂಗಳೂರು : ಮೈಸೂರು ದಸರಾ ಅಂಬಾರಿ ಹೊತ್ತು , ಸಂಭ್ರಮ ಹಂಚಿದ ಬಲರಾಮ ಮತ್ತು ಸ್ನೇಹಿತರು ಕಾಡಿಗೆ ಮರಳಿದ ನಂತರ ಈಗ ಹಂಪಿ ಉತ್ಸವದ ಸಿದ್ಧತೆಯ ಸಂಭ್ರಮ ನಡೆದಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಮುದ್ದುಕೃಷ್ಣ ಅವರ ಮನಸ್ಸಲ್ಲಿ ಈಗ ಉತ್ಸವದ ಸಿದ್ಧತೆಯದ್ದೇ ಸಂಚಾರ.

ನವೆಂಬರ್‌ 3, 4 ಹಾಗೂ 5ನೇ ತಾರೀಕು ಹಂಪಿ ಉತ್ಸವ ನಡೆಯಲಿದ್ದು, ಈ ಬಾರಿ 2 ಲಕ್ಷ ಪ್ರವಾಸಿಗರು ಇದನ್ನು ನೋಡಲು ಬರುವ ನಿರೀಕ್ಷೆಯಿದೆ. ಎಂದಿಗಿಂತ ಭಿನ್ನವಾಗಿ ಹಾಗೂ ಅದ್ಧೂರಿಯಾಗಿ ಹಂಪಿ ಉತ್ಸವ ಆಯೋಜಿಸುವುದು ಇಲಾಖೆಯ ಉದ್ದೇಶ. ಶಾಸ್ತ್ರೀಯ ನೃತ್ಯ, ಶಾಸ್ತ್ರೀಯ ಸಂಗೀತ, ಧ್ವನಿ ಮತ್ತು ಬೆಳಕಿನ ಪ್ರದರ್ಶನ, ರಂಗ ಕಲೆ, ಚಿತ್ರಕಲೆ, ಕೈಬರಹಗಳು ಹಾಗೂ ನಾಣ್ಯಗಳ ಪ್ರದರ್ಶನ- ಈ ಸಲದ ಉತ್ಸವದ ವಿಶೇಷಗಳು.

Stone Chariot of Hampiಕಳೆದ ಮೂರ್ನಾಲ್ಕು ವರ್ಷಗಳಿಂದ ಬಣ್ಣಗೆಟ್ಟಿದ್ದ ಮೈಸೂರು ದಸರಾ ಉತ್ಸವವನ್ನು ಈ ಸಲ ಖಾಸಗಿ ಸಹಭಾಗಿತ್ವದೊಂದಿಗೆ ಸರ್ಕಾರ ಕಳೆಗಟ್ಟುವಂತೆ ಮಾಡಿತು. ಅದೇ ಉಮೇದಿಯನ್ನು ಹಂಪಿ ಉತ್ಸವದಲ್ಲೂ ಮುಂದುವರೆಸುವುದು ಮುದ್ದುಕೃಷ್ಣ ಅವರ ಬಯಕೆ. ಮೈಸೂರು ದಸರಾಗೆ ಅಗತ್ಯವಿದ್ದ 16 ಲಕ್ಷ ರುಪಾಯಿಯನ್ನು ಖಾಸಗಿ ಪ್ರಾಯೋಜಕರಿಂದ ಕ್ರೋಢೀಕರಿಸಲಾಗಿತ್ತು. ಹಂಪಿ ಉತ್ಸವಕ್ಕೆ 35 ಲಕ್ಷ ರುಪಾಯಿ ಬೇಕಿದ್ದು, ಅದನ್ನು ಕೂಡ ಖಾಸಗಿ ಪ್ರಾಯೋಜಕರಿಂದ ಹೊಂದಿಸುವ ಗುರಿಯಿದೆ. ಅದನ್ನು ಸಾಧಿಸುತ್ತೇವೆ ಎಂಬ ನಂಬಿಕೆಯೂ ಇದೆ ಎನ್ನುತ್ತಾರೆ ಮುದ್ದುಕೃಷ್ಣ.

ಹೆಚ್ಚು ವಿದೇಶೀ ಪ್ರವಾಸಿಗರು ಭೇಟಿ ಕೊಡುವ ಹಂಪಿ ತನ್ನ ಪರಂಪರೆಗೆ ಹೆಸರುವಾಸಿ. ವಿಜಯನಗರ ಕಾಲದ ಅರಸು ಮನೆತನದ ಮಂದಿ ಈಗಲೂ ಇಲ್ಲಿ ವಾಸಿಸುತ್ತಾರೆ. ಸ್ವಾಭಾವಿಕ ಕಲ್ಲಿನ ರಥ ಇರುವ ರಥ ಬೀದಿ, ಆನೆಗುಂದಿಯ ಸಾಸುವೆ ಗಣಪತಿ ಈ ಸಲ ಕಳೆಗಟ್ಟಲಿವೆ. 14ನೇ ಶತಮಾನದಲ್ಲಿ ವಿರೂಪಾಕ್ಷ ದೇವಾಲಯದ ಕಲ್ಲಿನ ಮಂಟಪದಲ್ಲಿ ನರ್ತಕಿಯರು ಕಣ್ಣು ಕೋರೈಸುವಂತೆ ಕುಣಿಯುತ್ತಿದ್ದರು. ಆ ಗತ ವೈಭವವನ್ನು ಮತ್ತೆ ಉತ್ಸವದಲ್ಲಿ ತೋರುವುದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬಯಕೆ.

ಬಾಲಮುರಳಿ ಕೃಷ್ಣ, ಯೇಸುದಾಸ್‌, ಚಿತ್ರ ವಿಶ್ವೇಶ್ವರನ್‌, ಹೇಮಾ ಮಾಲಿನಿ ಮೊದಲಾದ ಗಾಯಕ- ಗಾಯಕಿ- ಕಲಾವಿದರನ್ನು ಕರೆಸಿ, ಉತ್ಸವದಲ್ಲಿ ಪ್ರದರ್ಶನ ಕೊಡುವ ನಿಟ್ಟಿನಲ್ಲಿ ಇಲಾಖೆ ಪ್ರಯತ್ನಗಳನ್ನು ನಡೆಸಿದೆ. ಹಂಪಿ ಹಾಗೂ ಆನೆಗುಂದಿಯ ಪ್ರಸಿದ್ಧ ಚಾರಿತ್ರಿಕ ಸ್ಥಳಗಳಲ್ಲಿ ನಾಲ್ಕು ಸುಸಜ್ಜಿತ ವೇದಿಕೆ ನಿರ್ಮಾಣದ ಕೆಲಸವೂ ಸದ್ಯದಲ್ಲೇ ಪ್ರಾರಂಭವಾಗಲಿದೆ.

ನಾಲ್ಕೂ ರಂಗ ಸಜ್ಜಿಕೆಗಳ ಮೇಲೆ ನೃತ್ಯ, ಸಂಗೀತ, ನಾಟಕ, ಜಾನಪದ ಪ್ರದರ್ಶನಗಳು ಏಕಕಾಲದಲ್ಲಿ ನಡೆಯಲಿವೆ. ದೇಶದ ದಕ್ಷಿಣ, ಪೂರ್ವ, ಪಶ್ಚಿಮ ಹಾಗೂ ಉತ್ತರ ಭಾಗಗಳಿಂದ ಸಾಂಸ್ಕೃತಿಕ ತಂಡಗಳನ್ನು ಉತ್ಸವಕ್ಕೆ ಕರೆಸಲಾಗುತ್ತಿದ್ದು, ಅವರೆಲ್ಲ ತಮ್ಮ ತಮ್ಮ ಪ್ರದೇಶದ ಕಲೆಗಳನ್ನು ಪ್ರಸ್ತುತ ಪಡಿಸಲಿದ್ದಾರೆ. ಈ ಬಾರಿ ವಿದೇಶೀ ಪ್ರವಾಸಿಗರನ್ನು ಪ್ರಮುಖ ದೃಷ್ಟಿಯಲ್ಲಿ ಇಟ್ಟುಕೊಂಡು ದೇವಾಲಯ ನೃತ್ಯ ರೂಪಕಗಳನ್ನು ಹೆಚ್ಚಾಗಿ ಪ್ರದರ್ಶಿಸಲಾಗುವುದು. ವಿದೇಶೀ ಪ್ರವಾಸಿಗರಿಗೆ ಈ ನೃತ್ಯ ಪ್ರಕಾರದಲ್ಲಿ ಅಪಾರ ಆಸಕ್ತಿಯಿದ್ದು, ಅದನ್ನು ತಿಳಿದುಕೊಳ್ಳುವ ಕಾರಣಕ್ಕೇ ಹಂಪಿಗೆ ಬರುತ್ತಾರೆ. ಹೀಗಾಗಿ ಅವರ ಅವಶ್ಯಕತೆಯನ್ನು ಉತ್ಸವದಲ್ಲಿ ಪೂರೈಸಲಾಗುವುದು ಎಂದು ಮುದ್ದುಕೃಷ್ಣ ಹೇಳಿದರು.

ಧ್ವನಿ ಹಾಗೂ ಬೆಳಕನ್ನು ಉಪಯೋಗಿಸಿ, ಹಂಪಿಯ ಐತಿಹಾಸಿಕ ಮಹತ್ವವನ್ನು ತೋರಿಸುವ ಪ್ರಾತ್ಯಕ್ಷಿಕೆಗಳು, ಶಾಸ್ತ್ರೀಯ ಹಾಗೂ ಅರೆ ಶಾಸ್ತ್ರೀಯ ಸಂಗೀತ- ನೃತ್ಯ ಪ್ರಕಾರಗಳು ಹಂಪಿ ಉತ್ಸವದ ವಿಶೇಷ ಆಕರ್ಷಣೆ. ಹಂಪಿಯಲ್ಲಿನ ಯಾವುದೇ ರಚನೆಯೂ ಹಾನಿಯಾಗದಂತೆ ಕಾರ್ಯಕ್ರಮಗಳನ್ನು ಸಿದ್ಧಪಡಿಸಲಾಗುತ್ತಿದ್ದು, ಅಬ್ಬರದ ದನಿ ಹೊಮ್ಮಿಸುವ ವಾದ್ಯಗಳನ್ನು ಬಳಸಲು ಅನುಮತಿಯಿಲ್ಲ. ವಿಜಯನಗರದ ಅರಸ ಕೃಷ್ಣದೇವರಾಯನ ಆಳ್ವಿಕೆಯ ಕಾಲದಲ್ಲಿ ಸಾರ್ವಜನಿಕರು ಬಳಸುತ್ತಿದ್ದ ನಾಣ್ಯಗಳನ್ನು ಕೂಡ ಪ್ರದರ್ಶನಕ್ಕೆ ಇಡಲಾಗುವುದು.

ಹಂಪಿ ಉತ್ಸವಕ್ಕೂ ಮೈಸೂರು ದಸರಾದಲ್ಲಿ ಇದ್ದಂತೆ ವಿಶೇಷ ಪ್ಯಾಕೇಜ್‌ಗಳನ್ನು ಹೊಸೆಯಲಾಗುತ್ತಿದೆ. ಪ್ರವಾಸೋದ್ಯಮ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ನಿಟ್ಟಿನಲ್ಲಿ ಮಾತುಕತೆ ನಡೆಸಿವೆ. ಹೊಸಪೇಟೆ ಮತ್ತು ಬಳ್ಳಾರಿಯ ಹೊಟೇಲುಗಳಲ್ಲಿ ಪ್ರವಾಸಿಗರಿಗೆ ಇಳಿದುಕೊಳ್ಳುವ ವ್ಯವಸ್ಥೆ ಮಾಡಲಾಗುತ್ತಿದೆ.

Post your views

ಮುಖಪುಟ / ವಾಟ್ಸ್‌ ಹಾಟ್‌

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more