ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವೆಂಬರ್‌ನಿಂದ ಇನ್ನೊಂದು ವರ್ಷ ‘ಕನ್ನಡಿಗರಿಗೆ ಉದ್ಯೋಗ ವರ್ಷ’

By Staff
|
Google Oneindia Kannada News

ನವೆಂಬರ್‌ನಿಂದ ಇನ್ನೊಂದು ವರ್ಷ ‘ಕನ್ನಡಿಗರಿಗೆ ಉದ್ಯೋಗ ವರ್ಷ’
ರಾಜ್ಯ ಸ್ಥಾಪನೆಯಾದ 50ನೇ ವರ್ಷಾಚರಣೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಿದ್ಧತೆ

ಬೆಂಗಳೂರು : ವಿವಿಧ ಕ್ಷೇತ್ರಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ಕಲ್ಪಿಸಿಕೊಡಬೇಕೆಂಬ ಸರೋಜಿನಿ ಮಹಿಷಿ ಸಮಿತಿ ವರದಿಯನ್ನು ಅರ್ಥಪೂರ್ಣವಾಗಿ ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಈ ವರ್ಷದ ನವೆಂಬರ್‌ ನಿಂದ ಒಂದು ವರ್ಷ ಕಾಲ ‘ಕನ್ನಡಿರಿಗೆ ಉದ್ಯೋಗ ವರ್ಷ ’ ಆಚರಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ ನಿರ್ಧರಿಸಿದೆ.

ಸೋಮವಾರ (ಅ. 20) ಸುದ್ದಿಗಾರರಿಗೆ ಪ್ರಾಧಿಕಾರದ ಅಧ್ಯಕ್ಷ ಬಿ.ಎಂ.ಇದಿನಬ್ಬ ಈ ವಿಷಯ ತಿಳಿಸಿದರು. ಬೆಂಗಳೂರು ನಗರ ಹಾಗೂ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ವಿಚಾರ ಸಂಕಿರಣಗಳನ್ನು ನಡೆಸುವುದರ ಜೊತೆಗೆ ಸರ್ಕಾರದ ಅಧೀನದಲ್ಲಿರುವ ಖಾಸಗಿ ಕೈಗಾರಿಕೆಗಳ ಮಂಡಳಿಗಳಿಗೆ ಸರೋಜಿನಿ ಮಹಿಷಿ ಸಮಿತಿಯ ಶಿಫಾರಸ್ಸುಗಳನ್ನು ಮನವರಿಕೆ ಮಾಡಿಕೊಡಲಾಗುವುದು. ಈ ಬಗ್ಗೆ ಸರ್ಕಾರಿ ಆದೇಶ ಹೊರಡಿಸಬೇಕು ಎಂದು ಮುಖ್ಯಮಂತ್ರಿ ಎಸ್ಸೆಂ ಕೃಷ್ಣ ಅವರನ್ನು ಕೇಳಿಕೊಳ್ಳಲಾಗಿದೆ ಎಂದು ಇದಿನಬ್ಬ ಹೇಳಿದರು.

ಕನ್ನಡ ಅಭಿವೃದ್ಧಿಯ ನಿಟ್ಟಿನಲ್ಲಿ ಪ್ರಾಧಿಕಾರ ಕೈಗೊಂಡಿರುವ ಕ್ರಮಗಳು-

  • ಜಿಲ್ಲೆಗಳಲ್ಲಿ ಕನ್ನಡದ ಯಶಸ್ವಿ ಬಳಕೆಯ ಮೇಲೆ ನಿಗಾ ಇಡಲು ಪ್ರತಿ ಜಿಲ್ಲೆಯಲ್ಲೂ ಜಾಗೃತ ಸಮಿತಿ ರಚಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
  • ಅಂಗಡಿ ಮುಂಗಟ್ಟು ಮತ್ತಿತರ ಸಂಸ್ಥೆಗಳ ನಾಮ ಫಲಕಗಳು ಕನ್ನಡದಲ್ಲಿಯೇ ಇರುವುದನ್ನು ಖಾತರಿ ಪಡಿಸಿಕೊಳ್ಳಲು ಅಧಿಕಾರಿಗಳ ಮತ್ತು ಅಧಿಕಾರೇತರ ಸದಸ್ಯರ ತನಿಖಾ ತಂಡಗಳನ್ನು ರಚಿಸಲಾಗಿದೆ.
  • ಸರ್ಕಾರಿ ಕಚೇರಿಗಳಿಗೆ ಪ್ರಾಧಿಕಾರದ ಅಧಿಕಾರಿಗಳು ಭೇಟಿ ನೀಡಿ, ಕನ್ನಡ ಅನುಷ್ಠಾನವನ್ನು ಪರಿಶೀಲಿಸಿ ವರದಿ ಸಿದ್ಧಪಡಿಸಲಿದ್ದಾರೆ. ಇದಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳೂ ನೆರವು ನೀಡಲಿದ್ದಾರೆ.
  • ಇನ್ನೆರಡು ತಿಂಗಳೊಳಗೆ ‘ಅಕ್ಷರ ಸಾಹಿತ್ಯ ಯೋಜನೆ’ಯಡಿ ಮಾಹಿತಿ ಕೈಪಿಡಿ ಮಾಲೆ ಮತ್ತು ಕನ್ನಡ ಕಲಿಕಾ ಪುಸ್ತಕಗಳು ಪ್ರಕಟವಾಗಲಿವೆ.
  • 2006ನೇ ಇಸವಿಯಲ್ಲಿ ರಾಜ್ಯ ಸ್ಥಾಪನೆಯ 50ನೇ ವರ್ಷವನ್ನು ‘ಸುವರ್ಣ ಕರ್ನಾಟಕ’ ಎಂದು ಆಚರಿಸಲು ತೀರ್ಮಾನಿಸಲಾಗಿದೆ. ಈ ಸಂದರ್ಭದಲ್ಲಿ ‘ಕರ್ನಾಟಕ ಏಕೀಕರಣಕ್ಕಾಗಿ ದುಡಿದ ಮಹನೀಯರು’ ಎಂಬ ಗ್ರಂಥ ಪ್ರಕಟಿಸಲು ಸಂಪಾದಕರ ಮಂಡಳಿ ರಚಿಸಲಾಗಿದೆ.
  • ಕರ್ನಾಟಕ ಮತ್ತು ಕನ್ನಡದ ಬಗ್ಗೆ ಮಾಹಿತಿ ಕೊಡುವ ‘ಕನ್ನಡ ಚಿಂತನೆ’ ಎಂಬ ಇನ್ನೊಂದು ಪುಸ್ತಕ ಪ್ರಕಟಿಸಲು ಪ್ರಾಧಿಕಾರ ನಿರ್ಧರಿಸಿದೆ.
(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X