ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆದೇಶ ಉಲ್ಲಂಘನೆ ; 1142 ವೈದ್ಯರ ವಜಾಕ್ಕೆ ಸರ್ಕಾರದ ಚಿಂತನೆ

By Staff
|
Google Oneindia Kannada News

ಆದೇಶ ಉಲ್ಲಂಘನೆ ; 1142 ವೈದ್ಯರ ವಜಾಕ್ಕೆ ಸರ್ಕಾರದ ಚಿಂತನೆ
ಅನಧಿಕೃತವಾಗಿ ಗೈರು ಹಾಜರಾದ 102 ವೈದ್ಯರ ವಜಾ

ಬೆಂಗಳೂರು : ಸರ್ಕಾರ ಸೂಚಿಸಿದ ಸ್ಥಳಗಳಲ್ಲಿ ಕೆಲಸ ಮಾಡಲು ಒಪ್ಪದ ವೈದ್ಯರು ಹಾಗೂ ನರ್ಸ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

1142 ವೈದ್ಯರು ಹಾಗೂ 1324 ಎಎನ್‌ಎಂಗಳು ನಿಗದಿಪಡಿಸಿದ ಸ್ಥಳದಲ್ಲಿ ಕೆಲಸ ಮಾಡಲು ಒಪ್ಪದಿರುವ ಮೂಲಕ ಸರ್ಕಾರಿ ಆದೇಶವನ್ನು ಉಲ್ಲಂಘಿಸಿದ್ದಾರೆ. ಇವರುಗಳನ್ನು ಸೇವೆಯಿಂದ ವಜಾಗೊಳಿಸುವುದು ಸೇರಿದಂತೆ ಯಾವುದೇ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ಕಠಿಣ ನಿಲುವು ತಳೆದಿದೆ ಎಂದು ಆರೋಗ್ಯ ಸಚಿವ ಕಾಗೋಡು ತಿಮ್ಮಪ್ಪ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.

ಸರ್ಕಾರಿ ಆದೇಶ ಉಲ್ಲಂಘಿಸಿರುವ ವೈದ್ಯರು ಹಾಗೂ ನರ್ಸ್‌ಗಳ ಪಟ್ಟಿಯನ್ನು ಈಗಾಗಲೇ ತಯಾರಿಸಲಾಗಿದ್ದು , ಇವರುಗಳ ವಿರುದ್ಧ ಚಾರ್ಜ್‌ಷೀಟ್‌ ಸಲ್ಲಿಸಲಾಗುವುದು. ಅನಧಿಕೃತವಾಗಿ ಗೈರು ಹಾಜರಾಗಿರುವ 102 ವೈದ್ಯರುಗಳನ್ನು ಈಗಾಗಲೇ ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.

ಪ್ರಸ್ತುತ ಸರ್ಕಾರಿ ಆದೇಶ ಉಲ್ಲಂಘಿಸಿರುವ 1142 ವೈದ್ಯರುಗಳನ್ನು ಸೇವೆಯಿಂದ ವಜಾ ಮಾಡಲು ಸರ್ಕಾರ ಹಿಂಜರಿಯುವುದಿಲ್ಲ . ಹೊಸ ನೇಮಕಾತಿಯ ನಿರೀಕ್ಷೆಯಲ್ಲಿ ಸಾಕಷ್ಟು ಮಂದಿ ವೈದ್ಯರಿದ್ದಾರೆ ಎಂದು ತಿಮ್ಮಪ್ಪ ಹೇಳಿದರು.

ಸರ್ಕಾರಿ ಆಸ್ಪತ್ರೆಗಳ ಮೇಲೆ ಲೋಕಾಯುಕ್ತರು ನಡೆಸುತ್ತಿರುವ ಸರಣಿ ದಾಳಿಗಳ ಕುರಿತು ಪ್ರಸ್ತಾಪಿಸಿದ ಸಚಿವ ಕಾಗೋಡು ತಿಮ್ಮಪ್ಪ , ದಾಳಿಯ ವರದಿಗಳನ್ನು ಲೋಕಾಯುಕ್ತರಿಂದ ಪಡೆಯಲಾಗುವುದು ಎಂದರು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X