ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೀವಳಿಗೆ ಕೊಡುಗೆ; ಓದುಗರಿಗೆ ಕಾದಂಬರಿ ಅ.ನ.ಕೃ.‘ಸಂಧ್ಯಾರಾಗ’

By Staff
|
Google Oneindia Kannada News

ದೀವಳಿಗೆ ಕೊಡುಗೆ; ಓದುಗರಿಗೆ ಕಾದಂಬರಿ ಅ.ನ.ಕೃ.‘ಸಂಧ್ಯಾರಾಗ’
ಲೇಖನ ಹಾಗೂ ವಿಮರ್ಶಾ ಬರಹಗಳನ್ನೊಳಗೊಂಡ ಬೃಹತ್‌ ಸಂಪುಟ

ಬೆಂಗಳೂರು : ಕನ್ನಡದ ಕಾದಂಬರಿ ಸಾರ್ವಭೌಮ ಎಂದು ಹೆಸರಾದ ಅ.ನ.ಕೃಷ್ಣರಾಯರ ಲೇಖನ ಹಾಗೂ ವಿಮರ್ಶಾ ಬರಹಗಳನ್ನೊಳಗೊಂಡ ಬೃಹತ್‌ ಸಂಪುಟವನ್ನು ಅ.ನ.ಕೃ. ಜನ್ಮ ಶತಾಬ್ದಿ ಸಂದರ್ಭದಲ್ಲಿ ಹೊರ ತರಬೇಕಿದೆ ಎಂದು ವಿಮರ್ಶಕ ಎಂ.ಎಚ್‌.ಕೃಷ್ಣಯ್ಯ ಅಭಿಪ್ರಾಯಪಟ್ಟಿದ್ದಾರೆ.

ಕನ್ನಡಿಗರಲ್ಲಿ ಓದುವ ಅಭಿರುಚಿಯನ್ನು ಮೂಡಿಸಲು ಶ್ರಮಿಸಿದ ಅ.ನ.ಕೃ. ಅವರ ಕೃತಿಗಳನ್ನು ಮರು ಪರಿಶೀಲಿಸಬೇಕಾದ ಅಗತ್ಯವಿದೆ. ಅವರ ಆಳವಾದ ಹಾಗೂ ಗಂಭೀರವಾದ ಚಿಂತನೆಗಳ ಕುರಿತ ಸಂಶೋಧನೆ ಪಿಎಚ್‌.ಡಿ ಪ್ರಬಂಧಕ್ಕೆ ಯೋಗ್ಯವಾದುದು ಎಂದು ಕೃಷ್ಣಯ್ಯ ಅಭಿಪ್ರಾಯಪಟ್ಟರು. ಅ.ನ.ಕೃ ಅವರ ಮೇರು ಕಾದಂಬರಿ ‘ಸಂಧ್ಯಾರಾಗ’ (ಮರು ಮುದ್ರಿತ 28ನೇ ಆವೃತ್ತಿ) ಪುಸ್ತಕ ಬಿಡುಗಡೆ ಸಮಾರಂಭ (ಅ.19, ಭಾನುವಾರ)ದಲ್ಲಿ ಕೃಷ್ಣಯ್ಯ ಮಾತನಾಡುತ್ತಿದ್ದರು.

A.Na.Kru.ಅ.ನ.ಕೃ ಅವರ ಕಾದಂಬರಿಗಳ ಮೌಲ್ಯ ಮಾಪನಕ್ಕಿಂತ ಚಿಂತನೆ ನಡೆಯಬೇಕಾಗಿದೆ ಎಂದ ಕೃಷ್ಣಯ್ಯ, ಕನ್ನಡ ಸಾಂಸ್ಕೃತಿಕ ಬದುಕಿನ ಮಾನ್ಯತೆಗೆ ಹೋರಾಡಿದ ಚೇತನ ಎಂದು ಅ.ನ.ಕೃಷ್ಣರಾಯರನ್ನು ಬಣ್ಣಿಸಿದರು.

ಅ.ನ.ಕೃ ಕಾದಂಬರಿಗಳು ಸಮಕಾಲೀನ ಸಾಮಾಜಿಕ ಮೌಲ್ಯಗಳು ಹಾಗೂ ಆಂತರಿಕ ಜಂಜಾಟಗಳ ಬಗ್ಗೆ ಬೆಳಕು ಚೆಲ್ಲುತ್ತವೆ ಎಂದು ಪುಸ್ತಕ ಬಿಡುಗಡೆ ಮಾಡಿದ ಶಿಕ್ಷಣ ಸಚಿವ ಪ್ರೊ.ಬಿ.ಕೆ.ಚಂದ್ರಶೇಖರ್‌ ಹೇಳಿದರು. ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾರನಹಳ್ಳಿ ರಾಮಸ್ವಾಮಿ ಹಾಗೂ ಅಂಕಿತ ಪುಸ್ತಕದ ಪ್ರಕಾಶ್‌ ಕಂಬತ್ತಳ್ಳಿ ಕಾರ್ಯಕ್ರಮದಲ್ಲಿ ಹಾಜರಿದ್ದರು.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಅ.ನ.ಕೃ ‘ಸಂಧ್ಯಾರಾಗ’ ಮರು ಮುದ್ರಣ

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X