ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಲ್ಪ ತಾಳಿ, ಅಮೆರಿಕೆ ಆಗಲಿದೆ ಮತ್ತೆ ಕೆಲಸದ ಮೆಕ್ಕಾ- ಕಾರ್ಬೆಟ್‌

By Staff
|
Google Oneindia Kannada News

ಸ್ವಲ್ಪ ತಾಳಿ, ಅಮೆರಿಕೆ ಆಗಲಿದೆ ಮತ್ತೆ ಕೆಲಸದ ಮೆಕ್ಕಾ- ಕಾರ್ಬೆಟ್‌
ಬೆಂಗಳೂರಲ್ಲಿ ಬಿಪಿಓ ಭರಾಟೆ, ಸಂಕಿರಣದಲ್ಲಿ ಅಮೆರಿಕ ಪರಿಣತ

ಬೆಂಗಳೂರು : ಎರವಲು ಸೇವೆಯಿಂದ ಸದ್ಯಕ್ಕೆ ಅಮೆರಿಕೆಯಲ್ಲಿ ಉದ್ಯೋಗಾವಕಾಶ ಕಡಿಮೆಯಾಗಿರಬಹುದು. ಆದರೆ, ಇದರಿಂದ ಮುಂದಿನ ವರ್ಷಗಳಲ್ಲಿ ಅಮೆರಿಕೆಯಲ್ಲಿ ಉತ್ಪಾದನೆ ಹೆಚ್ಚಿ, ಹೆಚ್ಚು ಉದ್ಯೋಗಗಳು ಸಿಗುವಂತಾಗುತ್ತದೆ ಎಂದು ಅಮೆರಿಕೆಯ ಎರವಲು ಸೇವೆ ಪರಿಣತ ಮೈಕೆಲ್‌ ಎಫ್‌ ಕಾರ್ಬೆಟ್‌ ಹೇಳಿದ್ದಾರೆ.

ವ್ಯಾಪಾರಿ ಉದ್ದಿಶ್ಯ ಎರವಲು ಸೇವೆ (ಬಿಪಿಓ) ಗೆ ಸಂಬಂಧಿಸಿದ ಸಂಕಿರಣವೊಂದರಲ್ಲಿ ಬುಧವಾರ (ಅ. 15) ಕಾರ್ಬೆಟ್‌ ಮಾತಾಡುತ್ತಿದ್ದರು. ತಮ್ಮದೇ ಹೆಸರಿನ ಕಂಪನಿಯ ಅಧ್ಯಕ್ಷ ಹಾಗೂ ಸಿಇಓ ಆಗಿರುವ ಕಾರ್ಬೆಟ್‌, ಅಮೆರಿಕೆಯಲ್ಲಿ ವ್ಯಾಪಾರಿ ಉದ್ದಿಶ್ಯ ಎರವಲು ಸೇವೆ ಕ್ಷೇತ್ರದಲ್ಲಿ ಪಳಗಿದ ಕೈ.

ಸದ್ಯಕ್ಕೆ ಭಾರತ ಮತ್ತಿತರ ದೇಶಗಳಿಂದ ಅಮೆರಿಕಾ ಎರವಲು ಸೇವೆ ಪಡೆಯುತ್ತಿರುವುದು ಹೆಚ್ಚಾಗಿದೆ. 2003ನೇ ಇಸವಿ ಕೊನೆ ಹೊತ್ತಿಗೆ ಜಗತ್ತಿನ ಬಿಪಿಓ ಮೌಲ್ಯವೇ 5.1 ಟ್ರಿಲಿಯನ್‌ ಮುಟ್ಟುವ ಅಂದಾಜಿದೆ. ಇದರಲ್ಲಿ ಅಮೆರಿಕೆಯ ಪಾಲು ಪ್ರತಿಶತ 65ರಷ್ಟು . ಎರವಲು ಸೇವೆಯಿಂದ ಉತ್ಪಾದನಾ ವೆಚ್ಚ ಕಡಿಮೆಯಾಗುತ್ತಿದೆ. ಭಾರತದಲ್ಲಂತೂ ಪರಿಣತರು ಅತಿ ಕಡಿಮೆ ಸಂಬಳಕ್ಕೆ ಸಿಗುತ್ತಿದ್ದಾರೆ. ಇದರಿಂದ ಅಮೆರಿಕಾದಲ್ಲಿ ಉತ್ಪಾದನಾ ವೆಚ್ಚ ಸಹಜವಾಗಿ ಸಾಕಷ್ಟು ತಗ್ಗಲಿದ್ದು, ಉತ್ಪಾದನೆಯ ಪ್ರಮಾಣ ಯಥೇಚ್ಛವಾಗಲಿದೆ. ಹೀಗಾದಾಗ ಆರ್ಥಿಕವಾಗಿ ದೇಶ ಮುಂದುವರೆಯುತ್ತದೆ. ಆಮೇಲೆ ಉದ್ಯೋಗಾವಕಾಶಗಳು ಸಾಕಷ್ಟು ಸೃಷ್ಟಿಯಾಗಲಿವೆ ಎಂಬುದು ಕಾರ್ಬೆಟ್‌ ಭವಿಷ್ಯ.

30-40 ವರ್ಷಗಳಿಗಾಗುವಷ್ಟು ಬುದ್ಧಿವಂತರಿದ್ದಾರೆ : ಸಂಕಿರಣದಲ್ಲಿ ಮಾತಾಡಿದ ಭಾರತೀಯ ಸಾಫ್ಟ್‌ವೇರ್‌ ಟೆಕ್ನಾಲಜಿಕಲ್‌ ಪಾರ್ಕ್‌ (ಎಸ್‌ಟಿಪಿಐ) ನ ನಿರ್ದೇಶಕ ಬಿ.ವಿ.ನಾಯ್ಡು , ಭಾರತ ಉತ್ತಮ ಸಾಫ್ಟ್‌ವೇರ್‌ ಎರವಲು ಸೇವೆಯನ್ನು ಸಮರ್ಪಕವಾಗಿ ಒದಗಿಸುವುದರ ಜೊತೆಗೆ ಇತರ ದೇಶಗಳಿಗೆ ಹೋಲಿಸಿದರೆ 60 ರಿಂದ 65 ಪ್ರತಿಶತ ಕಡಿಮೆ ದರದಲ್ಲಿ ಕೆಲಸ ಮಾಡಿಕೊಡುತ್ತಿದೆ. ಐರ್‌ಲೆಂಡಿನ ಕಾಲ್‌ಸೆಂಟರ್‌ನಲ್ಲಿ 25 ಸಾವಿರ ವೃತ್ತಿಪರರು ಕೆಲಸ ಮಾಡುತ್ತಿದ್ದಾರೆ. ನಮ್ಮಲ್ಲಿ ಬೆಂಗಳೂರೊಂದರಲ್ಲೇ 56 ಸಾವಿರ ಮಂದಿ ಕಾಲ್‌ಸೆಂಟರ್‌ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ನಮ್ಮಲ್ಲಿ ಪ್ರತಿಭೆಗಳು ಎಷ್ಟಿದ್ದಾರೆಂದರೆ, ಇನ್ನು 30- 40 ವರ್ಷಗಳಿಗಾಗುವಷ್ಟು ಮಾಹಿತಿ ತಂತ್ರಜ್ಞಾನಿ ಕೈಗಳಿಗೆ ಕೊರೆಯಿಲ್ಲ ಎಂದರು.

ಕಂಪ್ಯೂಟರ್‌ ಕೂಲಿಗಳೆನ್ನದಿರಿ : ಭಾರತದ ವೃತ್ತಿಪರರನ್ನು ಇತ್ತೀಚೆಗೆ ಸಾಫ್ಟ್‌ವೇರ್‌ ಕೂಲಿಗಳು ಎಂದು ಗೇಲಿ ಮಾಡಲಾಗುತ್ತಿದೆ. ಇದು ಸರಿಯಲ್ಲ. ಕಡಿಮೆ ಸಂಬಳಕ್ಕೆ ಕೆಲಸ ಮಾಡುವ ಅನೇಕ ಬುದ್ಧಿವಂತರು ನಮ್ಮಲ್ಲಿ ಇದ್ದಾರೆ. ಪರಿಸ್ಥಿತಿಗಳ ಒತ್ತಡ ಇದಕ್ಕೆ ಕಾರಣ. ಹಾಗಂತ ಅವರು ಕೂಲಿಗಳಲ್ಲ. ಅನುಭವ ಗಾಢವಾದಂತೆ, ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ನಿಜವಾದ ಪ್ರತಿಭೆಗಳಿಗೆ ಭವಿಷ್ಯ ಇದ್ದೇ ಇದೆ ಎಂದು ಮಾಹಿತಿ ತಂತ್ರಜ್ಞಾನ ಮತ್ತು ಪ್ರವಾಸೋದ್ಯಮ ಸಚಿವ ಡಿ.ಬಿ.ಇನಾಂದಾರ್‌ ಹೇಳಿದರು.

(ಪಿಟಿಐ)

ಮುಖಪುಟ / ಐಟಿ - ಬಿಟಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X