ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅ.ನ.ಕೃ ‘ಸಂಧ್ಯಾರಾಗ’ ಮರು ಮುದ್ರಣ

By Staff
|
Google Oneindia Kannada News

ಅ.ನ.ಕೃ ‘ಸಂಧ್ಯಾರಾಗ’ ಮರು ಮುದ್ರಣ
ಅ.19ರ ಭಾನುವಾರ 28ನೇ ಮುದ್ರಣ ಭಾಗ್ಯ ಕಾಣುತ್ತಿರುವ ‘ಸಂಧ್ಯಾರಾಗ’ ಬಿಡುಗಡೆ.

ಬೆಂಗಳೂರು: ಕನ್ನಡ ಕಾದಂಬರಿ ಸಾರ್ವಭೌಮರೆಂದು ಪ್ರಸಿದ್ಧರಾದ ದಿವಂಗತ ಅ. ನ. ಕೃಷ್ಣರಾಯರ ಪ್ರಸಿದ್ಧ ಕಾದಂಬರಿ ‘ಸಂಧ್ಯಾರಾಗ’ದ ಹೊಸ ಮುದ್ರಣವನ್ನು ಬೆಂಗಳೂರಿನ ಅಂಕಿತ ಪುಸ್ತಕ ಪ್ರಕಟಿಸುತ್ತಿದೆ.

ಅ.ನ.ಕೃ ಅವರ ‘ಸಂಧ್ಯಾರಾಗ’ 28ನೇ ಬಾರಿ ಮರುಮುದ್ರಣ ಕಾಣುತ್ತಿದ್ದು , 28 ಬಾರಿ ಮುದ್ರಿತವಾಗಿರುವ ಕನ್ನಡದ ಅಪರೂಪದ ಕೃತಿಗಳಲ್ಲಿ ಸಂಧ್ಯಾರಾಗ ಒಂದಾಗಿದೆ.

ನೂರಕ್ಕೂ ಹೆಚ್ಚು ಕಾದಂಬರಿಗಳನ್ನು ಬರೆದಿರುವ ಅ.ನ.ಕೃ ಕನ್ನಡಿಗರಿಗೆ ಓದುವ ಹುಚ್ಚು ಹಿಡಿಸಿದವರು. ಒಂದೆಡೆ ಕನ್ನಡ ಜಾಗೃತಿ ಮೂಡಿಸಲು ನಾಡಿನಾದ್ಯಂತ ಮಿಂಚಿನಂತೆ ಸಂಚರಿಸುತ್ತಾ , ತಮ್ಮ ವಾಗ್ಝರಿಯಿಂದ ಕೇಳುಗರನ್ನು ಮಂತ್ರಮುಗ್ಧರಾಗಿಸುತ್ತಿದ್ದ ಅ.ನ.ಕೃ, ಇನ್ನೊಂದೆಡೆ ತಮ್ಮ ಕಾದಂಬರಿಗಳ ಮೂಲಕ ಓದುಗ ವಲಯವನ್ನು ವಿಸ್ತರಿಸುತ್ತಿದ್ದರು.

A.Na.Kru.ಪ್ರಗತಿಶೀಲ ಪಂಥದ ಮುಂಚೂಣಿಯಲ್ಲಿದ್ದ ಅ.ನ.ಕೃ ಅವರ ಶ್ರೇಷ್ಠ ಕೃತಿ ಎನ್ನುವ ಅಗ್ಗಳಿಕೆಗೆ ‘ಸಂಧ್ಯಾರಾಗ’ ಪಾತ್ರವಾಗಿದೆ. ಸಂಗೀತಗಾರನ ಜೀವನದ ಏರಿಳಿತಗಳನ್ನು ದಾಖಲಿಸುವ ‘ಸಂಧ್ಯಾರಾಗ’ ಕನ್ನಡ ಸಾಹಿತ್ಯದಲ್ಲಿನ ಜನಪ್ರಿಯ ಕಾದಂಬರಿಗಳಲ್ಲೊಂದು. ‘ಸಂಧ್ಯಾರಾಗ’ ಸಿನಿಮಾ ಆಗಿಯೂ ಯಶಸ್ವಿಯಾಗಿದೆ. ಸಂಗೀತಗಾರ ಲಕ್ಷ್ಮಣನ ಪಾತ್ರದಲ್ಲಿ ವರನಟ ರಾಜ್‌ಕುಮಾರ್‌ ಅವಿಸ್ಮರಣೀಯ ಅಭಿನಯ ನೀಡಿದ್ದಾರೆ.

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ. ಕೆ. ಚಂದ್ರಶೇಖರ್‌ ಅವರು ‘ಸಂಧ್ಯಾರಾಗ’ ಪುಸ್ತಕ ಬಿಡುಗಡೆ ಮಾಡುವರು. ಅನಕೃ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ಮಾಜಿ ಸಚಿವರಾದ ಹಾರನಹಳ್ಳಿ ರಾಮಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ವಿಜಯ ಕರ್ನಾಟಕ ದಿನಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ವಿಶ್ವೇಶ್ವರ ಭಟ್‌ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ಸಮಾರಂಭ ನಡೆಯುವ ಸ್ಥಳ : ಬಸವನಗುಡಿ ನ್ಯಾಷನಲ್‌ ಕಾಲೇಜಿನ ಡಾ. ಎಚ್‌. ಎನ್‌. ಸಭಾಂಗಣ
ದಿನಾಂಕ : ಅಕ್ಟೋಬರ್‌ 19ರ ಭಾನುವಾರ
ಸಮಯ : ಬೆಳಿಗ್ಗೆ 10.30

ಅ.ನ.ಕೃಷ್ಣರಾಯರನ್ನು ನೆನಪಿಸಿಕೊಳ್ಳಲು ಒಂದು ಕಾರಣವಾಗುವ ಈ ಕಾರ್ಯಕ್ರಮಕ್ಕೆ ಸರ್ವರಿಗೂ ಸ್ವಾಗತ.

ಅ.ನ.ಕೃ. ಹಾಗೂ ಅವರ ಕೃತಿಗಳ ಬಗೆಗಿನ ವಿವರಗಳಿಗೆ ನೋಡಿ-

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X