ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನಿ ಅಭಿಮಾನಿ ರಾಜಕಾರಣಿಗಳಿಗೆ ಲಾಲೂ ಕೊಟ್ಟ ಹಾಲು

By Staff
|
Google Oneindia Kannada News

ಪಾಕಿಸ್ತಾನಿ ಅಭಿಮಾನಿ ರಾಜಕಾರಣಿಗಳಿಗೆ ಲಾಲೂ ಕೊಟ್ಟ ಹಾಲು
ಲಾಲೂ ಪ್ರಸಾದ್‌ ಯಾದವ್‌ ಪಾಕಿಸ್ತಾನದಲ್ಲೀಗ ‘ವರ್ಲ್ಡ್‌ ಫೇಮಸ್ಸು’!

ಪಾಟ್ನಾ : ಕೈಯಲ್ಲಿ ಆಲೂ ಹಿಡಿದು ಲಾಲೂ ನಿಂತಿದ್ದರು. ಅವರ ಪಕ್ಕದಲ್ಲಿ ಪಾಕಿಸ್ತಾನದ ಮುಸ್ಲಿಂ ಲೀಗ್‌ ವಕ್ತಾರ ತಾರಿಕ್‌ ಅಜೀಂ. ಒಂದಷ್ಟು ಗಜ ದೂರದಲ್ಲಿ ಪಾಕಿಸ್ತಾನ ಪೀಪಲ್ಸ್‌ ಪಾರ್ಟಿಯ ಜುಲ್ಫೀಕರ್‌ ಅಲಿ ಗುಂಡಾಲ್‌. ಲಾಲೂ ಮನೆಯ ಹಿತ್ತಲು, ಪಕ್ಕದ ಹೊಲದಲ್ಲಿ ಭಾರತ- ಪಾಕ್‌ ಭಾಯಿ ಭಾಯಿ ವಾತಾವರಣ.

ಶಾಂತಿ ಸಂವಾದಕ್ಕೆಂದು ಭಾರತಕ್ಕೆ ಭೇಟಿ ಕೊಟ್ಟ ಪಾಕಿಸ್ತಾನದ 6 ಸದಸ್ಯರ ತಂಡದ ಇಬ್ಬರು ಲಾಲೂ ಮನೆ ಹುಡುಕಿಕೊಂಡು ಸೋಮವಾರ (ಅ. 13) ಪಾಟ್ನಾವರೆಗೆ ಪಾದ ಬೆಳೆಸಲು ಕಾರಣವಿತ್ತು. ಈ ಇಬ್ಬರೂ ಈಗ ಲಾಲೂ ಅಭಿಮಾನಿಗಳು. ಇವರಂತೆಯೇ ಪಾಕಿಸ್ತಾನದ ಹಲವಾರು ರಾಜಕಾರಣಿಗಳು ಇವತ್ತು ಲಾಲೂ ಆಲೂ ತೋರುವ ಪರಿಗೇ ತಲೆದೂಗುತ್ತಾರೆ. ಇತ್ತೀಚೆಗೆ ಪಾಕಿಸ್ತಾನಕ್ಕೆ ಹೋಗಿ ಬಂದ ಲಾಲೂ ಮೋಡಿ ಅಲ್ಲಿ ಹಾಗೆ ಕೆಲಸ ಮಾಡಿದೆ.

ಅಜೀಂ ಅವರಂತೂ ಲಾಲೂ ಹಿಂದೆ ಅವರ ಹೊಲ ಗದ್ದೆಗಳನ್ನೆಲ್ಲಾ ನೋಡಿಕೊಂಡು ಬಂದು, ಲಾಲೂ ಮನೆಯ ಹಿತ್ತಲ ಕೊಟ್ಟಿಗೆಯ ಹಸುವನ್ನು ಮೈದಡವುತ್ತಾ ನಿಂತರು. ತಾವು ಎಂಎಲ್‌ಎ ಆದ ಕಾಲದಿಂದಲೂ ಇರುವ ಆ ಹಸುವನ್ನು ಲಾಲೂ ತಮ್ಮದೇ ನಗೆ ಖದರಿನಲ್ಲಿ ಪರಿಚಯ ಮಾಡಿಕೊಟ್ಟರು. ‘ಇವಳಿಗೆ ಈಗ ವಯಸ್ಸಾಗಿದೆ. ಮೆಲ್ಲಗೆ ಮೈದಡವಿ’ ಅಂತ ಲಾಲೂ ಅಜೀಂ ಕೈಗೆ ಕೆನೆ ಹಾಲಿನ ಲೋಟ ಇಟ್ಟರು. ಬಿಹಾರದ ಮುಖ್ಯಮಂತ್ರಿ ರಾಬ್ಡಿ ದೇವಿ ಪಾಕಿ ಸ್ನೇಹಿತರಿಗೆ ನಮಸ್ಕರಿಸಿದರು. ‘ಬಾಭೀಜೀ.. ಲಾಲೂಜೀ ಕೆ ಸಾಥ್‌ ಆಪ್‌ ಜರೂರ್‌ ಪಾಕಿಸ್ತಾನ್‌ ಆಯಿಯೇ’ ಎಂಬ ಬುಲಾವನ್ನು ಮನ್ನಿಸಿದರು. ‘ಅಗ್ಲಿ ಬಾರ್‌ ಹಮ್‌ರಿ ಬೇಗಂ ಕೀ ಸಾಥ್‌ ಪಾಕ್‌ ಜರೂರ್‌ ಜಾಯೇಂಗೇ’ ಅಂತ ಲಾಲೂ ಹಾಲಿನ ಲೋಟವನ್ನು ಮೇಲೆತ್ತಿದರು.

ಭಾರತ ಹಾಗೂ ಪಾಕಿಸ್ತಾನದ ನಡುವೆ ಬೇಗ ಕ್ರಿಕೆಟ್‌ ಪಂದ್ಯಗಳನ್ನಾಡಿಸಬೇಕು. ಸರ್ಕಾರ ಈ ಬಗ್ಗೆ ತೀರ್ಮಾನ ತೆಗೆದುಕೊಂಡ ನಂತರ, ಮೊದಲ ಪಂದ್ಯವನ್ನು ಪಟ್ನಾದಲ್ಲೇ ಆಡಿಸಲು ನಾನು ತಯಾರ್‌ ಎಂದು ಲಾಲೂ ಹೇಳಿದಾಗ ಪಾಕಿ ಅಭಿಮಾನಿಗಳಿಂದ ಚಪ್ಪಾಳೆ.

ಲಾಲೂ ಕೈಗೆ ಅಜೀಂ ಅಪರೂಪದ ಉಡುಗೊರೆಯಾಗಿ ಮುಷರ್ರಫ್‌ ಜೊತೆಯಲ್ಲಿ ಖುದ್ದು ಲಾಲೂ ಇರುವ ದೊಡ್ಡ ಫೋಟೋ ಕೊಟ್ಟರು. ಅದರ ಮೇಲೆ ಮುಷರ್ರಫ್‌ ಸಹಿಯ ಸಹಿತ ಬರೆದಿದ್ದ ಒಕ್ಕಣೆ ನೋಡಿ ಅರೆಬರೆ ಅರ್ಥವಾದ ಆರ್‌ಜೆಡಿ ಸದಸ್ಯರೂ ಸಣ್ಣಗೆ ನಕ್ಕರು. ಮುಷರ್ರಫ್‌ ಬರೆದಿದ್ದ ಒಕ್ಕಣೆ ಹೀಗಿತ್ತು- To an artist of a politician.

ದೆಹಲಿಯಲ್ಲಿ ಬ್ರಿಟಿಷ್‌ ಕೌನ್ಸಿಲ್‌ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಭಾಗವಹಿಸಲು ಪಾಕಿಸ್ತಾನದ ತಂಡ ಬಂದಿತ್ತು. ಪಾಕಿಸ್ತಾನದಲ್ಲಿ ಲಾಲೂ ಎಷ್ಟು ಫೇಮಸ್‌ ಆಗಿದ್ದಾರೆಂದರೆ, ಅಲ್ಲಿನ ಟೀವಿ ಚಾನೆಲ್‌ಗಳು ಲಾಲೂ ಸಂದರ್ಶನವನ್ನು ಇವತ್ತೂ ಪದೇಪದೇ ಪ್ರಸಾರ ಮಾಡುತ್ತಿದೆಯಂತೆ.

Post your views

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X