ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರೋಗ್ಯ ನಗರಿಯಾಗಿ ಬೆಂಗಳೂರು, ಬಹರೈನ್‌ ಜೊತೆ ಒಪ್ಪಂದ

By Staff
|
Google Oneindia Kannada News

ಆರೋಗ್ಯ ನಗರಿಯಾಗಿ ಬೆಂಗಳೂರು, ಬಹರೈನ್‌ ಜೊತೆ ಒಪ್ಪಂದ
ರಾಜ್ಯದಲ್ಲಿನ ಆರೋಗ್ಯ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರದ ಚಿಂತನೆ

ಬೆಂಗಳೂರು : ಬೆಂಗಳೂರನ್ನು ವೈದ್ಯಕೀಯ ನಗರಿಯನ್ನಾಗಿ ರೂಪಿಸುವ ಹಿನ್ನೆಲೆಯಲ್ಲಿ ಬಹರೈನ್‌ನೊಂದಿಗೆ ಒಪ್ಪಂದವೊಂದಕ್ಕೆ ಬರಲು ಕರ್ನಾಟಕ ಸರ್ಕಾರ ಉದ್ದೇಶಿಸಿದೆ.

ಬೆಂಗಳೂರಿನಲ್ಲಿ ಅತ್ಯುತ್ತಮ ವೈದ್ಯಕೀಯ ಸೇವೆಗಳು ಲಭ್ಯವಿದ್ದು , ಈ ಸೇವೆಗಳನ್ನು ಅಂತರರಾಷ್ಟ್ರೀಯ ಸಮುದಾಯಕ್ಕೆ ತಲುಪಿಸುವ ಮೂಲಕ ರಾಜಧಾನಿಯನ್ನು ವೈದ್ಯಕೀಯ ನಗರಿಯನ್ನಾಗಿಯೂ ಅಭಿವೃದ್ಧಿ ಪಡಿಸಲು ರಾಜ್ಯ ಸರ್ಕಾರ ಉದ್ದೇಶಿಸಿದೆ. ಈ ಕಾರಣದಿಂದಾಗಿ ಬಹರೈನ್‌ನ ರೋಗಿಗಳು ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯಲು ಅನುವಾಗುವಂತೆ, ಶೀಘ್ರದಲ್ಲೇ ಬರಹೈನ್‌ ಆಡಳಿತದೊಂದಿಗೆ ಒಪ್ಪಂದವೊಂದಕ್ಕೆ ಬರಲಾಗುವುದು ಎಂದು ಪ್ರವಾಸೋದ್ಯಮ ಹಾಗೂ ಐಟಿ ಸಚಿವ ಡಿ.ಬಿ.ಇನಾಂದಾರ್‌ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.

ಅತ್ಯುತ್ತಮ ವೈದ್ಯಕೀಯ ಪ್ರತಿಭೆ ಹಾಗೂ ಸೇವೆಗಳು ಬೆಂಗಳೂರಿನಲ್ಲಿ ಲಭ್ಯವಿವೆ. ಈ ಅನುಕೂಲಗಳನ್ನು ನಾವು ಅಂತರರಾಷ್ಟ್ರೀಯ ಮಟ್ಟದಲ್ಲಿ ಸದುಪಯೋಗಪಡಿಸಿಕೊಳ್ಳಬೇಕಿದೆ. ಕೆಲವೊಂದು ಸಂದರ್ಭಗಳಲ್ಲಿ ಇತರ ವೈದ್ಯಕೀಯ ಕೇಂದ್ರಗಳಿಗಿಂತ ಬೆಂಗಳೂರಿನಲ್ಲಿ ಶೇ.50ರಷ್ಟು ಕಡಿಮೆ ಶುಲ್ಕಕ್ಕೆ ವೈದ್ಯಕೀಯ ಸೇವೆಗಳು ದೊರೆಯುತ್ತವೆ ಎಂದು ಇನಾಂದಾರ್‌ ಹೇಳಿದರು.

ಸುಮಾರು 6 ಲಕ್ಷ ಜನಸಂಖ್ಯೆಯನ್ನು ಬಹರೈನ್‌ ಹೊಂದಿದ್ದು , ಇದರಲ್ಲಿ 1.2 ಲಕ್ಷ ಮಂದಿ ಭಾರತೀಯ ಮೂಲದವರು ಎಂದ ಇನಾಂದಾರ್‌- ರಾಜ್ಯವನ್ನು ವೃದ್ಧರ ಮನೆಯನ್ನಾಗಿ ರೂಪಿಸುವ ರಾಜ್ಯ ಸರ್ಕಾರದ ಇರಾದೆಯನ್ನು ಬಹಿರಂಗಪಡಿಸಿದರು. ಖಾಸಗಿ ಸಹಭಾಗಿತ್ವದಲ್ಲಿ ವೃದ್ಧಾಶ್ರಮಗಳನ್ನು ರಾಜ್ಯದ ವಿವಿಧ ಭಾಗಗಳಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದೆ. ಈ ವೃದ್ಧಾಶ್ರಮಗಳು ಆಸ್ಪತ್ರೆಗಳಿಗೆ ಹೊಂದಿಕೊಂಡಿರುವಂತೆ ನೋಡಿಕೊಳ್ಳಲಾಗುವುದು ಎಂದರು.

ವಿವಿಧ ಸಂಸ್ಥೆಗಳನ್ನು ಬೆಂಗಳೂರಿನಲ್ಲಿ ಆರೋಗ್ಯ ಸೇವೆಗಳನ್ನು ಒದಗಿಸುವಂತೆ ಕೋರಲಾಗುತ್ತಿದೆ. ಬೆಂಗಳೂರಿನಲ್ಲಿನ ತನ್ನ ನಾಗರಿಕರಿಗೆ ಆರೋಗ್ಯ ಸೇವೆಗಳನ್ನು ಒದಗಿಸುವಂತೆ ಬ್ರಿಟನ್‌ನ ರಾಷ್ಟ್ರೀಯ ಆರೋಗ್ಯ ಸೇವೆಗಳು (ಎನ್‌ಎಚ್‌ಎಸ್‌) ಕೇಂದ್ರವನ್ನು ಸಂಪರ್ಕಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ರಾಜ್ಯ ಪ್ರವಾಸೋದ್ಯಮ ಆಯುಕ್ತ ಮಹೇಂದ್ರ ಜೈನ್‌ ತಿಳಿಸಿದರು.

ರಾಜ್ಯದಲ್ಲಿ ಆಲೋಪತಿ ಮಾತ್ರವಲ್ಲದೆ, ಆಯುರ್ವೇದ, ನ್ಯಾಚುರೋಪತಿ, ಯೋಗ ಹಾಗೂ ಹೋಮಿಯೋಪತಿ ಚಿಕಿತ್ಸಾ ಸೇವೆಗಳು ಲಭ್ಯವಿರುವುದು ಆರೋಗ್ಯ ಪ್ರವಾಸೋದ್ಯಮ ದೃಷ್ಟಿಯಿಂದ ಲಾಭಕರ ಎಂದು ಜೈನ್‌ ಹೇಳಿದರು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X