ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಟಿ... ಮೈಸೂರ್‌ ಐಟಿ , ಮಂಗಳೂರ್‌ ಐಟಿ, ಹುಬ್ಬಳ್ಳಿ ಐಟಿ !

By Super
|
Google Oneindia Kannada News

ಧಾರವಾಡ : ಮೈಸೂರು, ಮಂಗಳೂರು ಮತ್ತು ಹುಬ್ಬಳ್ಳಿ ಕೂಡ ಮಾಹಿತಿ ತಂತ್ರಜ್ಞಾನ ಕೇಂದ್ರಗಳಾಗಿ ಬೆಳೆಯುತ್ತಿದ್ದು, ಇಡೀ ಐಟಿ ಕ್ಷೇತ್ರದ ಅಭಿವೃದ್ಧಿ ಇನ್ನಷ್ಟು ದಾಪುಗಾಲಿಕ್ಕಿದೆ ಎಂದು ಮಾಹಿತಿ ತಂತ್ರಜ್ಞಾನ ಮತ್ತು ಪ್ರವಾಸೋದ್ಯಮ ಸಚಿವ ಡಿ.ಬಿ.ಇನಾಂದಾರ್‌ ಹೇಳಿದರು.

ಇತ್ತೀಚೆಗೆ ಸುದ್ದಿಗಾರರ ಜೊತೆ ಇನಾಂದಾರ್‌ ಮಾತಾಡುತ್ತಿದ್ದರು. ಹುಬ್ಬಳ್ಳಿಯಲ್ಲಿ ವಿಮಾನ ಸಂಚಾರ ಮತ್ತೆ ಶುರುವಾಗಿರುವುದರಿಂದ ಅಲ್ಲಿನ ಐಟಿ ಪಾರ್ಕ್‌ನಲ್ಲಿ ಉದ್ದಿಮೆ ಚಟುವಟಿಕೆಗಳು ಚುರುಕಾಗಿವೆ. ಗುಲ್ಬರ್ಗಾ, ಬೆಳಗಾವಿ ಮತ್ತು ಉತ್ತರ ಕರ್ನಾಟಕದಲ್ಲೂ ಐಟಿ ಪಾರ್ಕ್‌ ಸ್ಥಾಪಿಸುವ ಗುರಿ ಗರಿಗೆದರಿದೆ. ಮಾರ್ಚ್‌ 31, 2003ಕ್ಕೆ ಮುಗಿದ ವಿತ್ತ ವರ್ಷದಲ್ಲಿ ಮೈಸೂರು ಟೆಕ್‌ ಪಾರ್ಕ್‌ 80 ಕೋಟಿ ರುಪಾಯಿ ವಹಿವಾಟು ನಡೆಸಿದ್ದು, ಮಂಗಳೂರು ಐಟಿ ಪಾರ್ಕ್‌ 300 ಕೋಟಿ ರುಪಾಯಿ ವ್ಯಾಪಾರ ನಡೆಸಿದೆ. ಬೆಂಗಳೂರಲ್ಲಷ್ಟೇ ಅಲ್ಲದೆ ರಾಜ್ಯದ ಇತರೆ ಕಡೆ ಕೂಡ ಮಾಹಿತಿ ತಂತ್ರಜ್ಞಾನ ಜೋರಾಗುತ್ತಿದೆ ಎಂಬುದಕ್ಕೆ ಹಿಡಿದ ಕನ್ನಡಿ ಇದು ಎಂದರು.

ಖಾಸಗಿ ಪ್ರವಾಸೋದ್ಯಮ : ಖಾಸಗಿ ಮತ್ತು ಸಾರ್ವಜನಿಕರನ್ನು ತೊಡಗಿಸಿಕೊಂಡು ಪ್ರವಾಸೋದ್ಯಮವನ್ನು ಇನ್ನಷ್ಟು ನಳನಳಿಸುವಂತೆ ಮಾಡುತ್ತೇವೆ. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್‌ಟಿಡಿಸಿ) ದ ಮೂಲಕ ಈಗಾಗಲೇ ಸರ್ಕಾರ 18 ಹೊಟೇಲುಗಳನ್ನು ಖಾಸಗಿಯವರ ಉಸ್ತುವಾರಿಗೆ ಕೊಟ್ಟಿದೆ. ರಸ್ತೆ ಅಭಿವೃದ್ಧಿ, ವಿಮಾನ ಯಾನ ಅಭಿವೃದ್ಧಿಗೆ ಒತ್ತು ಕೊಡಲು ಖಾಸಗಿಯವರಿಗೆ ಸೂಚಿಸಲಾಗಿದೆ ಎಂದರು.(ಪಿಟಿಐ)

English summary
Information Technology development now not only in Bangalore. Mangalore makes Rs. 300 crore business during the financial year 2002-03
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X