ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀನಾಸಂ ತಿರುಗಾಟದಲ್ಲಿ ಮೊದಲಗಿತ್ತಿ

By Staff
|
Google Oneindia Kannada News

ನೀನಾಸಂ ತಿರುಗಾಟದಲ್ಲಿ ಮೊದಲಗಿತ್ತಿ & ಅನಂತಮೂರ್ತಿ ಅವಸ್ಥೆ
ಅಕ್ಟೋಬರ್‌ 19 ಮತ್ತು 20ರಂದು ಬೆಂಗಳೂರಿನಲ್ಲಿ ನಾಟಕ ಪ್ರದರ್ಶನ

ಬೆಂಗಳೂರು : ನೀನಾಸಂ ಎಂದೇ ಪ್ರಸಿದ್ಧವಾದ ಹೆಗ್ಗೋಡಿನ ನೀಲಕಂಠೇಶ್ವರ ನಾಟ್ಯ ಸಂಘ ತನ್ನ ವಾರ್ಷಿಕ ತಿರುಗಾಟಕ್ಕೆ ಸಿದ್ಧವಾಗಿದ್ದು , ಬೆಂಗಳೂರಿನಲ್ಲಿ ಅ.19 ಹಾಗೂ 20ರಂದು ನಾಟಕಗಳನ್ನು ಪ್ರದರ್ಶಿಸಲಿದೆ.

ಅಕ್ಟೋಬರ್‌ 19ರಂದು ಅವಸ್ಥೆ ಹಾಗೂ ಅ.20ರಂದು ಮೊದಲಗಿತ್ತಿ ನಾಟಕಗಳನ್ನು ನೀನಾಸಂ ಪ್ರದರ್ಶಿಸಲಿದೆ. ಬೆಂಗಳೂರು ಲಲಿತಕಲಾ ಪರಿಷತ್‌ ಈ ಪ್ರದರ್ಶಗಳನ್ನು ಏರ್ಪಡಿಸಿದೆ.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಯು.ಆರ್‌.ಅನಂತಮೂರ್ತಿಯವರ ಅವಸ್ಥೆ ಕಾದಂಬರಿಯನ್ನು ಪ್ರಕಾಶ್‌ ಬೆಳವಾಡಿ ಅವರು ನಾಟಕ ರೂಪಕ್ಕೆ ಬದಲಿಸಿದ್ದು , ಬೆಳವಾಡಿಯವರೇ ನಾಟಕವನ್ನು ನಿರ್ದೇಶಿಸಿದ್ದಾರೆ. ವರ್ತಮಾನದ ತಾತ್ವಿಕ ಆಕೃತಿಯಾಂದನ್ನು ನಿರ್ಮಿಸುವ ಮಹತ್ವಾಕಾಂಕ್ಷೆಯ ಅವಸ್ಥೆ , ಪ್ರಸಿದ್ಧ ಸಮಾಜವಾದಿ ನೇತಾರ ಶಾಂತವೇರಿ ಗೋಪಾಲಗೌಡರ ಬದುಕು ಸಾಧನೆಗಳನ್ನು ಆಧರಿಸಿ ರಚಿತವಾಗಿದೆ. ಅವಸ್ಥೆ ಅನಂತಮೂರ್ತಿಯವರ ಅತ್ಯುತ್ತಮ ಕೃತಿಗಳಲ್ಲೊಂದು.

ಮೊದಲಗಿತ್ತಿ ನಾಟಕ ಅಸ್ಸಾಮಿ ಕಥೆಯಾಂದನ್ನು ಆಧರಿಸಿದ್ದು. ನಾಟಕರೂಪ ಹಾಗೂ ನಿರ್ದೇಶನ ಬಹರುಲ್‌ ಇಸ್ಲಾಂ ಅವರದ್ದು . ಗಂಡನಿಂದ ತಿರಸ್ಕೃತಳಾದ ಮುಸ್ಲಿಂ ಹೆಣ್ಣುಮಗಳು ಎದುರಿಸುವ ತಾಕಲಾಟಗಳ ಕಥೆ ಈ ನಾಟಕದ್ದು . ನೀನಾಸಂ ತಿರುಗಾಟದ ಕೃತಿಗಳೆಂದ ಮೇಲೆ ನಾಟಕಪ್ರಿಯರಿಗೆ ಹಬ್ಬವಿದ್ದಂತೆ. ಈ ಬಾರಿ ತಪ್ಪಿದರೆ, ಮತ್ತೆ ವರ್ಷ ಕಾಯಬೇಕು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X