ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಡುಗಳ್ಳವೀರಪ್ಪನ್‌ ಶರಣಾಗತಿಗೆ ಮುತ್ತುಲಕ್ಷ್ಮಿ ರಾಯಭಾರ

By Staff
|
Google Oneindia Kannada News

ಕಾಡುಗಳ್ಳವೀರಪ್ಪನ್‌ ಶರಣಾಗತಿಗೆ ಮುತ್ತುಲಕ್ಷ್ಮಿ ರಾಯಭಾರ
ದಿನಸಿ ಜೊತೆಗೆ ವ್ಯಾಪಾರಿಯನ್ನೂ ವೀರಪ್ಪನ್‌ ಅಪಹರಿಸಿದ್ದಾನೆ

*ನವೀನ್‌ ಅಮ್ಮೆಂಬಳ

ಬೆಂಗಳೂರು: ಜಯಲಲಿತಾ ಸರಕಾರ ಅಧಿಕಾರಕ್ಕೆ ಬರುವ ಮುನ್ನ ಶರಣಾಗತಿಗೆ ಆಲೋಚನೆ ನಡೆಸಿದ್ದ ಕಾಡುಗಳ್ಳ ವೀರಪ್ಪನ್‌ ತಮಿಳುನಾಡಿನಲ್ಲಿ ಮತ್ತೆ ಕರುಣಾನಿಧಿ ಸರಕಾರ ಬರುವುದನ್ನು ಕಾಯುತ್ತಿದ್ದಾನೆ.

ನರಹಂತಕನ ಶರಣಾಗತಿ ಕುರಿತಂತೆ ಇಲ್ಲಿ ಪ್ರತಿಷ್ಠಿತ ವ್ಯಕ್ತಿಯಾಬ್ಬರ ಮನೆಯಲ್ಲಿ ಗುರುವಾರ (ಅ.9) ರಹಸ್ಯ ಮಾತುಕತೆಯಾಂದು ನಡೆದಿದ್ದು, ಅದರಲ್ಲಿ ಸ್ವತಃ ಮುತ್ತುಲಕ್ಷ್ಮಿ ಭಾಗವಹಿಸಿದ್ದಳು ಹಾಗೂ ವೀರಪ್ಪನ್‌ ಕುರಿತು ಕೆಲ ವಿವರ ನೀಡಿದ್ದಾಳೆಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

Muttulakshmi, Better half of Bandit Veerappan !ಎಸ್‌ಟಿಎಫ್‌ ಪಡೆಗಳಿಂದ ಕಾಡುಗಳ್ಳ ವೀರಪ್ಪನ್‌ ಬಂಧನ ಅಸಾಧ್ಯ ಎಂಬುದು ಮನೆ ಮಾತಾಗಿರುವ ಬೆನ್ನಿಗೇ ಆತ ಶರಣಾಗುವಂತೆ ಯತ್ನಗಳು ನಡೆಯುತ್ತಿದೆ. ಆದರೆ, ರಹಸ್ಯ ಮಾತುಕತೆಗಳು ಮುತ್ತುಲಕ್ಷ್ಮಿಗೆ ಎಷ್ಟರಮಟ್ಟಿಗೆ ಸಹಕಾರಿಯಾಗಲಿವೆ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

ವಿಡಿಯೋ ಕ್ಯಾಸೆಟ್‌: ಕರುಣಾನಿಧಿ ಸರಕಾರ ಅಧಿಕಾರದಲ್ಲಿದ್ದಾಗಲೇ ಡಾ. ರಾಜ್‌ ಅಪಹರಣವಾಗಿತ್ತು. ವರನಟನ ಬಿಡುಗಡೆ ಬಳಿಕ ಶರಣಾಗತಿ ಸುಲಭವಾಗಿರಲಿಲ್ಲ. ಜಯಲಲಿತಾ ಆಡಳಿತಕ್ಕೆ ಬರುವ ಮುನ್ನ ಶರಣಾಗಲು ವೀರಪ್ಪನ್‌ ಯೋಚಿಸಿದ್ದ ಎಂದೂ ಮುತ್ತುಲಕ್ಷ್ಮಿ ತಿಳಿಸಿರುವುದಾಗಿ ಮೂಲಗಳಿಂದ ಗೊತ್ತಾಗಿದೆ.

ಜಯಲಲಿತಾ ಅವರ ಪಕ್ಷಕ್ಕೆ ತಾನು ಸಂಪೂರ್ಣ ಬೆಂಬಲ ನೀಡುವುದಾಗಿ ಮತ್ತು ಎಐಎಡಿಎಂಕೆ ಅಧಿಕಾರಕ್ಕೆ ಬಂದರೆ ತಾನು ಶರಣಾಗಲು ಬಯಸುವುದಾಗಿ ವೀರಪ್ಪನ್‌ ವೀಡಿಯೋ ಕ್ಯಾಸೆಟ್‌ ಕಳುಹಿಸಿದ್ದ. ಆದರೆ, ಜಯಲಲಿತಾ ಅವರು ಆ ಬಗ್ಗೆ ನಿರ್ಲಕ್ಷಿಸಿದರಲ್ಲದೆ ಅಧಿಕಾರಕ್ಕೆ ಬಂದ ತಕ್ಷಣ ವೀರಪ್ಪನ್‌ನನ್ನು ಸಾಯಿಸಿಯಾದರೂ ಆತನ ಅಟ್ಟಹಾಸ ನಿಲ್ಲಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ್ದರು.

ಅನಂತರ ಮಾಜಿ ಮಂತ್ರಿ ನಾಗಪ್ಪ ಅಪಹರಣವಾಯಿತು. ರಾಜ್‌ ಅಪಹರಣವಾಗಿದ್ದಾಗ ಸಂಧಾನಕಾರರಾಗಿದ್ದವರೆಲ್ಲರೂ ಕಾನೂನಿಗೆ ಹೆದರಿ ತೆರೆಯ ಮರೆಗೆ ಸರಿದರು. ಸರಿಯಾದ ಸಂಧಾನಕಾರರ ಕೊರತೆಯಿಂದಾಗಿ ಕೊನೆಗೂ ನಾಗಪ್ಪ ಅವರು ಹತ್ಯೆಗೊಳಗಾದರು.

ಈಗ ತಮಿಳುನಾಡು ಮತ್ತು ಕರ್ನಾಟಕ ಎಸ್‌ಟಿಎಫ್‌ ಪಡೆಗಳು ಜಂಟಿಯಾಗಿ ಕಾರ್ಯಾಚರಣೆಗೆ ತೊಡಗಿವೆ. ವೀರಪ್ಪನ್‌ ಕಾಡಿನಿಂದ ನಾಡಿಗೆ ಬರುವುದು ದುಸ್ಸಾಧ್ಯವಾಗಿದೆ.

ಆದರೂ, ತನ್ನದೇ ಆದ ಮಾಹಿತಿ ಜಾಲ ಹೊಂದಿರುವ ವೀರಪ್ಪನ್‌ ಪತ್ನಿ ಮುತ್ತುಲಕ್ಷ್ಮಿಗೆ ಕರುಣಾನಿಧಿ ಸರಕಾರ ಅಧಿಕಾರಕ್ಕೆ ಬಂದರೆ ಶರಣಾಗುವ ಬಗ್ಗೆ ಸೂಚನೆ ನೀಡಿದ್ದಾನೆ. ಪಿಎಂಕೆ ಪಕ್ಷದ ರಾಮದಾಸ್‌ ಸಂಧಾನಕಾರರಾಗಿ ಬಂದರೂ ಪರಿಗಣಿಸುವುದಾಗಿ ಆತ ತಿಳಿಸಿದ್ದಾನೆ ಎಂದು ಹೇಳಲಾಗಿದೆ.

ಮೂರು ಕೋಟಿ: ಡಾ. ರಾಜ್‌ ಅಪಹರಣ ಸಂದರ್ಭದಲ್ಲಿ ಸರಕಾರದಿಂದ ವೀರಪ್ಪನ್‌ಗೆ ಎಷ್ಟು ಮೊತ್ತದ ಹಣ ಹೋಗಿದೆ ಎಂಬುದು ವಿವಾದಾತ್ಮಕ ವಿಷಯ. ಆದರ ಆ ‘ಕೋಟಿ ರೂ.ಗಳಲ್ಲಿ’ ಮೂರು ಕೋಟಿ ರೂ. ಮಾತ್ರ ಈಗಲೂ ವೀರಪ್ಪನ್‌ ಬಳಿ ಇದೆ ಎಂದು ಮುತ್ತುಲಕ್ಷ್ಮಿ ಖಚಿತಪಡಿಸಿದ್ದಾಳೆ ಎನ್ನಲಾಗಿದೆ.

ಉಳಿದಂತೆ ಟಿಎನೆಲ್‌ಎಫ್‌ ಉಗ್ರರು ಹಣ ಒಯ್ದಿದ್ದಾರೆ. ಪೊಲೀಸರೂ ವಶಪಡಿಸಿಕೊಂಡಿದ್ದಾರೆ. ಮುತ್ತುಲಕ್ಷ್ಮಿಗೆ 50 ಲಕ್ಷ ರೂ.ಗಳನ್ನು ವೀರಪ್ಪನ್‌ ನೀಡಿದ್ದು, ತನ್ನಿಬ್ಬರು ಮಕ್ಕಳ ಶಿಕ್ಷಣಕ್ಕೆ ತಲಾ ಒಂದು ಲಕ್ಷ ರೂ.ಗಳನ್ನು ಪ್ರತಿ ವರ್ಷ ಖರ್ಚು ಮಾಡುವಂತೆ ವ್ಯವಸ್ಥೆ ಮಾಡಿದ್ದಾನೆ. ತನಗೆ ಸಿಕ್ಕ ಹಣದಲ್ಲಿ ಕಲ್ಲಿನ ಕ್ವಾರಿಯಲ್ಲಿ ಬಳಸುವ ಮೂರು ಜೆಸಿಬಿ ಯಂತ್ರಗಳನ್ನು ಮುತ್ತುಲಕ್ಷ್ಮಿ ಕೊಂಡಿದ್ದಾಳೆ.

ಆದರೆ, ಆ ಯಂತ್ರಗಳನ್ನು ತಮಿಳುನಾಡಿನ ಪೊಲೀಸರು ವಶಪಡಿಸಿಕೊಂಡಿರುವುದು ಆಕೆಗೆ ನುಂಗಲಾರದ ತುತ್ತಾಗಿದೆ. ಮೆಟ್ಟೂರಿನಲ್ಲಿ ಮನೆಯಾಂದನ್ನು ಖರೀದಿಸಲು ಮುತ್ತುಲಕ್ಷ್ಮಿ 10 ಲಕ್ಷ ರೂ. ನೀಡಿದ್ದಳು. ಆದರೆ ಪೊಲೀಸರಿಗೆ ವಿಷಯ ತಿಳಿಯುತ್ತಿದ್ದಂತೆ, ಮನೆ ದಲ್ಲಾಳಿ ಕೇವಲ ನಾಲ್ಕು ಲಕ್ಷ ಹಿಂತಿರುಗಿಸಿ ಉಳಿದ ಹಣ ‘ಗುಳುಂ’ ಮಾಡಿದ್ದಾನೆ ಎಂದು ಹೇಳಲಾಗಿದೆ.

(ಸ್ನೇಹ ಸೇತು: ವಿಜಯಕರ್ನಾಟಕ)

ಮುಖಪುಟ / ವೀರಪ್ಪನ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X