ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇರಾನ್‌ ಅಹಿಂಸಾವಾದಿ ಶಿರಿನ್‌ ಎಬಾದಿಗೆ ನೊಬೆಲ್‌ ಶಾಂತಿ ಪ್ರಶಸ್ತಿ

By Staff
|
Google Oneindia Kannada News

ಇರಾನ್‌ ಅಹಿಂಸಾವಾದಿ ಶಿರಿನ್‌ ಎಬಾದಿಗೆ ನೊಬೆಲ್‌ ಶಾಂತಿ ಪ್ರಶಸ್ತಿ
ಜಗತ್ತಿನ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗುತ್ತಿರುವ ಮೊದಲ ಇರಾನಿ ಪ್ರಜೆ

Shirin Ebadiಓಸ್ಲೋ, ನಾರ್ವೆ : 2003ನೇ ಇಸವಿಯ ನೊಬೆಲ್‌ ಶಾಂತಿ ಪ್ರಶಸ್ತಿಯನ್ನು ಇರಾನಿನ ಶಿರಿನ್‌ ಎಬಾದಿ ಅವರಿಗೆ ಕೊಡಲು ದಿ ನಾರ್ವೇಯನ್‌ ನೊಬೆಲ್‌ ಸಮಿತಿ ನಿರ್ಧರಿಸಿದೆ.

ಮಹಿಳಾ ಮತ್ತು ಮಕ್ಕಳ ಹಕ್ಕುಗಳ ವಿಷಯದಲ್ಲಿ ಹಾಗೂ ಪ್ರಜಾಪ್ರಭುತ್ವ ಬಲಗೊಳಿಸುವಲ್ಲಿ ಶಿರಿನ್‌ ಎಬಾದಿ ಕೊಡುಗೆಯನ್ನು ಪರಿಗಣಿಸಿ ನೊಬೆಲ್‌ ಶಾಂತಿ ಪ್ರಶಸ್ತಿಗೆ ಈಕೆಯನ್ನು ಆರಿಸಿರುವುದಾಗಿ ನಾರ್ವೇಯನ್‌ ನೊಬೆಲ್‌ ಸಮಿತಿ ಶುಕ್ರವಾರ (ಅ. 10) ಪ್ರಕಟಿಸಿದೆ. ಜಗತ್ತಿನ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯಾದ ನೊಬೆಲ್‌ಗೆ ಭಾಜನರಾಗುತ್ತಿರುವ ಮೊದಲ ಇರಾನಿಯನ್‌ ಎಂಬ ಅಗ್ಗಳಿಕೆ ಶಿರಿನ್‌ ಅವರದ್ದು.

ಮುಸ್ಲಿಂ ಮಹಿಳೆಯಾದ ಶಿರಿನ್‌ ತನ್ನ ದೇಶದಲ್ಲಿ ಹಿಂಸೆ ಪ್ರದಾನವಾಗಿದ್ದಾಗ ಅಹಿಂಸೆಯ ಮಾರ್ಗವನ್ನು ಹಿಡಿದ ಅಪರೂಪದ ವ್ಯಕ್ತಿ. ಇಸ್ಲಾಂ ಧರ್ಮ ಮತ್ತು ಮೂಲ ಮಾನವ ಹಕ್ಕುಗಳ ನಡುವೆ ಯಾವುದೇ ಗೊಂದಲಗಳಿಲ್ಲ ಎನ್ನುವ ಶಿರಿನ್‌, ಕಟ್ಟಾ ಮುಸ್ಲಿಂ ಸಂಪ್ರದಾಯಸ್ಥೆ. ತನ್ನ ದೇಶದ ಇತಿಗಳನ್ನು ಮೀರಿ ಯೋಚಿಸುವ ಈಕೆಗೆ ಜಗತ್ತಿನ ಬಹುತೇಕ ಸಂಸ್ಕೃತಿಗಳ ಜೊತೆ ಮುಖಾಮುಖಿಯಾಗುವ ಆಸೆಯಿದೆ.

ಇರಾನಿನಲ್ಲಿ ಮಾನವ ಹಕ್ಕುಗಳ ಬಗ್ಗೆ ಕಳಕಳಿ ಇಟ್ಟುಕೊಂಡಿರುವ ಶಕ್ತಿಗಳಿಗೆ ತಮ್ಮ ದೇಶದ ಹೆಂಗಸಿಗೆ ನೊಬೆಲ್‌ ಶಾಂತಿ ಪ್ರಶಸ್ತಿ ಸಿಗುತ್ತಿರುವುದರಿಂದ ಇನ್ನಷ್ಟು ಸ್ಫೂರ್ತಿ ಸಿಕ್ಕಂತಾಗುತ್ತದೆ. ಪ್ರಜಾಪ್ರಭುತ್ವದ ಬೇರುಗಳನ್ನು ಭದ್ರಗೊಳಿಸಲು ಇದು ದಾರಿದೀಪವಾಗುವುದಾದರೇ ಅದು ದೊಡ್ಡ ಸಂತೋಷ ಎಂದು ನಾರ್ವೇಯನ್‌ ನೊಬೆಲ್‌ ಸಮಿತಿ ಹೇಳಿದೆ.

(ಏಜೆನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X