ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಫೋಸಿಸ್‌ ಲೆಕ್ಕಪತ್ರ : ನಿವ್ವಳ ಆದಾಯದಲ್ಲಿ ಶೇ.33 ಹೆಚ್ಚಳ

By Staff
|
Google Oneindia Kannada News

ಇನ್ಫೋಸಿಸ್‌ ಲೆಕ್ಕಪತ್ರ : ನಿವ್ವಳ ಆದಾಯದಲ್ಲಿ ಶೇ.33 ಹೆಚ್ಚಳ
ಮುಂದುವರಿದ ಇನ್ಫೋಸಿಸ್‌ ನಾಗಾಲೋಟ

ಬೆಂಗಳೂರು : ಸಿಲಿಕಾನ್‌ ವ್ಯಾಲಿಯ ಪ್ರತಿಷ್ಠಿತ ಕಂಪನಿಯಾದ ಇನ್ಫೋಸಿಸ್‌ ಟಕ್ನಾಲಜಿಸ್‌ ಲಿಮಿಟೆಡ್‌ ಸೆಪ್ಟಂಬರ್‌ 30ಕ್ಕೆ ಕೊನೆಗೊಂಡ ತ್ರೆೃಮಾಸಿಕದಲ್ಲಿ ನಿವ್ವಳ ಆದಾಯದಲ್ಲಿ ಪ್ರತಿಶತ 33ರ ಹೆಚ್ಚಳ ಸಾಧಿಸಿದೆ.

ಸೆಪ್ಟಂಬರ್‌ 30ಕ್ಕೆ ಕೊನೆಗೊಂಡ ತ್ರೆೃಮಾಸಿಕದ ಲೆಕ್ಕಪತ್ರವನ್ನು ಇನ್ಫೋಸಿಸ್‌ ಟೆಕ್ನಾಲಜಿಸ್‌ ಲಿಮಿಟೆಡ್‌ ಶುಕ್ರವಾರ (ಅ.10) ಬಿಡುಗಡೆ ಮಾಡಿತು. ಈ ಲೆಕ್ಕಪತ್ರದ ಪ್ರಕಾರ, ಕಂಪನಿಯ ನಿವ್ವಳ ಆದಾಯದಲ್ಲಿ ಶೇ.33ರಷ್ಟು ಏರಿಕೆಯಾಗಿದೆ. ಈ ಏರಿಕೆಯ ಪ್ರಮಾಣ ರುಪಾಯಿ ಲೆಕ್ಕದಲ್ಲಿ 300 ಕೋಟಿ ರುಪಾಯಿಗಳು. ಕಳೆದ ವಿತ್ತ ವರ್ಷದ ಇದೇ ತ್ರೆೃಮಾಸಿಕದಲ್ಲಿ ಈ ಪ್ರಮಾಣ 225.77 ರುಪಾಯಿ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.

ಕಂಪನಿಯ ಒಟ್ಟು ಆದಾಯ ಶೇ.31 ಹೆಚ್ಚಳವಾಗಿದೆ. ರುಪಾಯಿ ಲೆಕ್ಕದಲ್ಲಿ ಹೇಳುವುದಾದರೆ- 2002ನೇ ವಿತ್ತ ಇಸವಿಯ ತ್ರೆೃಮಾಸಿಕದಲ್ಲಿ 898.79 ಕೋಟಿ ರುಪಾಯಿಗಳಿದ್ದ ಆದಾಯ ಈ ಬಾರಿ 1,194.96 ಕೋಟಿ ರುಪಾಯಿಗಳಿಗೆ ಮುಟ್ಟಿದೆ.

ಚೀನಾದಲ್ಲಿ ಸಾಫ್ಟ್‌ವೇರ್‌ ಕೇಂದ್ರ: ಚೀನಾದ ಷಾಂಘಾಯ್‌ನಲ್ಲಿ ಸಾಫ್ಟ್‌ವೇರ್‌ ಅಭಿವೃದ್ಧಿ ಕೇಂದ್ರವನ್ನು ಸ್ಥಾಪಿಸಲು ಇನ್ಫೋಸಿಸ್‌ ಉದ್ದೇಶಿಸಿದೆ. ಈ ಕೇಂದ್ರದಲ್ಲಿ 200 ಪರಿಣಿತರು ಕಾರ್ಯ ನಿರ್ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.

(ಏಜೆನ್ಸೀಸ್‌)

ಮುಖಪುಟ / ಐಟಿ - ಬಿಟಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X