ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದತ್ತಭಕ್ತರಉತ್ಸಾಹ, ಬಾಬಾ ಬುಡನ್‌ಗಿರಿ ತುಂಬ ಕೇಸರಿ ಬಾವುಟ

By Staff
|
Google Oneindia Kannada News

ದತ್ತಭಕ್ತರಉತ್ಸಾಹ, ಬಾಬಾ ಬುಡನ್‌ಗಿರಿ ತುಂಬ ಕೇಸರಿ ಬಾವುಟ
ಅಕ್ಟೋಬರ್‌12ರಂದು ದತ್ತಮಾಲೆ ಅಭಿಯಾನ ಪ್ರಾರಂಭ

ಚಿಕ್ಕಮಗಳೂರು: ಇಲ್ಲಿನ ಬಾಬಾ ಬುಡನ್‌ಗಿರಿ ದತ್ತ ಪೀಠದಲ್ಲಿ ಅಕ್ಟೋಬರ್‌12ರಂದು ಆರಂಭವಾಗಲಿರುವ ದತ್ತಮಾಲೆ ಅಭಿಯಾನಕ್ಕೆ ಭರದಿಂದ ಸಿದ್ಧತೆಗಳು ನಡೆಯುತ್ತಿವೆ.

ಈಗಾಗಲೇ ಸಾವಿರಾರು ಭಕ್ತರು ದತ್ತಮಾಲೆ ಧರಿಸಿದ್ದಾರೆ. ಈ ದತ್ತ ಭಕ್ತರು ಮಾಣಿಕ್ಯ ಧಾರಾದಲ್ಲಿ ಸ್ನಾನ ಮಾಡಿ ಗುಡ್ಡ ಬೆಟ್ಟದ ಕಿರಿದಾದ ಹಾದಿಯಲ್ಲಿ ಪಡಿ ಹಿಡಿದುಕೊಂಡು ನಡೆದು ದತ್ತಪೀಠದಲ್ಲಿ ಪೂಜೆ ಸಲ್ಲಿಸುವರು. ಈ ಹಿನ್ನೆಲೆಯಲ್ಲಿ ಹಿಂದೂ ಹಾಗೂ ಮುಸಲ್ಮಾನರ ನಡುವಿನ ಭಾವೈಕ್ಯತೆ ಕಾಪಾಡಲು ಬಿಗಿ ಪೊಲೀಸ್‌ ಪಹರೆ ಹಾಕಲಾಗಿದೆ. ಸುಮಾರು 2 ಸಾವಿರ ಮಂದಿ ಪೊಲೀಸರು ಹಾಗೂ ಕೆಎಸ್ಸಾಆರ್‌ಪಿ, ಡಿಆರ್‌ಪಿ ಘಟಕಗಳು ಮುನ್ನೆಚ್ಚರಿಕೆ ಕ್ರಮವಾಗಿ ಗಸ್ತು ತಿರುಗುತ್ತಿವೆ.

ಚಂದ್ರದ್ರೋಣ ಬೆಟ್ಟ ಪ್ರದೇಶಕ್ಕೆ ಆಗಮಿಸುವ ಸಾವಿರಾರು ಭಕ್ತರಿಗೆ ಮೂಲಭೂತ ಸೌಕರ್ಯಗಳ ಕೊರತೆ ಇರುವುದರಿಂದ ಗಿರಿ ಪ್ರದೇಶದಲ್ಲಿ ನೂಕು ನುಗ್ಗಲು ಜಾಸ್ತಿಯಾಗಿದೆ. ಗುಹಾಂತರ ದೇವಾಲಯದ ದೀಪ ಸ್ತಂಭಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ. ಕೇಸರಿ ಧ್ವಜಗಳು ಬೆಟ್ಟದ ತುಂಬ ಹಾರಾಡುತ್ತಿವೆ.

ಅಕ್ಟೋಬರ್‌ 10ರಂದು ಸಂಜೆ ದತ್ತ ಪೀಠದಲ್ಲಿ ಶೋಭಾಯಾತ್ರೆಯಾಂದಿಗೆ ಕಾರ್ಯಕ್ರಮಗಳು ಆರಂಭವಾಗಲಿವೆ. ವಿಹೆಚ್‌ಪಿ, ಭಜರಂಗದಳ ಸಂಘಟನೆಗಳು ಶೋಭಾಯಾತ್ರೆಯ ನೇತೃತ್ವ ವಹಿಸಲಿವೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X