ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಕೃಷ್ಣರ ಢೋಂಗಿ ಸರ್ಕಾರ ಬರದ ಬೇಳೆಯನ್ನೂ ಮಾರಿಕೊಳ್ಳುತ್ತಿದೆ’

By Staff
|
Google Oneindia Kannada News

‘ಕೃಷ್ಣರ ಢೋಂಗಿ ಸರ್ಕಾರ ಬರದ ಬೇಳೆಯನ್ನೂ ಮಾರಿಕೊಳ್ಳುತ್ತಿದೆ’
ತಾನೇ ಸರಿಯಿಲ್ಲದ ಸರ್ಕಾರ ಕೇಂದ್ರವನ್ನು ಬೈಯುತ್ತಿದೆ-ಅನಂತಕುಮಾರ್‌ ಟೀಕೆ

ಬೆಂಗಳೂರು : ಅಧಿಕಾರದ ಚುಕ್ಕಾಣಿ ಹಿಡಿದು 4 ವರ್ಷ ಪೂರೈಸಿರುವ ಮುಖ್ಯಮಂತ್ರಿ ಎಸ್ಸೆಂ ಕೃಷ್ಣ ಅವರ ಜನಸ್ಪಂದನ ಕಾರ್ಯಕ್ರಮ ಒಂದು ಪ್ರಶ್ನಾತೀತ ಯಾತ್ರೆಯಾಗಿ ಪರಿವರ್ತಿತವಾಗಿದೆ. ರೈತರ ಮತ್ತು ಸಾಮಾನ್ಯ ಜನರ ಆಕ್ರೋಶವನ್ನು ಇವತ್ತು ಅವರು ಎದುರಿಸಬೇಕಾಗಿದೆ ಎಂದು ಬಿಜೆಪಿ ಅಧ್ಯಕ್ಷ ಅನಂತಕುಮಾರ್‌ ಹೇಳಿದರು.

ಬೆಂಗಳೂರು ವರದಿಗಾರರ ಕೂಟ ಮತ್ತು ಪ್ರೆಸ್‌ ಕ್ಲಬ್‌ ಸಂಯುಕ್ತ ಆಶ್ರದಲ್ಲಿ ಶುಕ್ರವಾರ (ಅ. 10) ನಡೆದ ಪತ್ರಿಕಾ ಸಂವಾದ ಕಾರ್ಯಕ್ರಮದಲ್ಲಿ ಅನಂತಕುಮಾರ್‌ ಮಾತಾಡಿದರು. ಅರಾಜಕತೆಯಿಂದ ಕೂಡಿರುವ ಮುಖ್ಯಮಂತ್ರಿ ಎಸ್ಸೆಂ ಕೃಷ್ಣ ಆಡಳಿತದಲ್ಲಿ ಬಿರುಕಿದೆ. ಸಮರ್ಥನೆಯೇ ಇಲ್ಲದಂತೆ ಅಫರು ಆಡಳಿತ ನಡೆಸುತ್ತಿದ್ದಾರೆ. ಸಂಪುಟದ ಸಹೋದ್ಯೋಗಿಗಳು ಪರಿ ಪರಿಯಾದ ಹೇಳಿಕೆಗಳ ಮೂಲಕ ಪರಸ್ಪರ ರಾಡಿ ಎರಚುತ್ತಿರುವುದು ತಮಾಷೆಯ ಸಂಗತಿ ಎಂದರು.

ಕೆಪಿಸಿಸಿ ಅಧ್ಯಕ್ಷ ಜನಾರ್ದನ ಪೂಜಾರಿ ಹಾಗೂ ಸಂಸದ ಜಾಫರ್‌ ಷರೀಫ್‌ ಸರ್ಕಾರದ ಯೋಜನೆಗಳು ಮತ್ತು ಸಚಿವರ ಬಗ್ಗೆ ತರಾವರಿ ರೀತಿಯಲ್ಲಿ ಟೀಕೆ ಹೊರಹಾಕುತ್ತಿರುವುದು ಹಾಸ್ಯಾಸ್ಪದ ಸಂಗತಿ ಎಂದು ಕಟಕಿಯಾಡಿದರು.

ಬರ ಪರಿಹಾರದ ಖರ್ಚಿಗೆ ಲೆಕ್ಕ ಕೊಡಲಿ : ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗಿರುವ ಅಷ್ಟೂ ಆಹಾರ ಧಾನ್ಯವನ್ನು ಸರ್ಕಾರ ಸಮರ್ಪಕವಾಗಿ ಉಪಯೋಗಿಸುತ್ತಿಲ್ಲ. ಇಲ್ಲೂ ಭ್ರಷ್ಟಾಚಾರವಿದ್ದು, ಆಹಾರ ಧಾನ್ಯ ಕಾಳಸಂತೆಗೆ ಮಾರಾಟವಾಗುತ್ತಿದೆ. ಕೇಂದ್ರ ಸರ್ಕಾರ ಈವರೆಗೆ ಬರ ಪರಿಹಾರ ಕಾಮಗಾರಿಗಳಿಗೆ 8 ಲಕ್ಷದ 85 ಸಾವಿರ ಟನ್‌ ಆಹಾರ ಧಾನ್ಯ ಬಿಡುಗಡೆ ಮಾಡಿದೆ. ಸಾಲದ್ದಕ್ಕೆ 465 ಕೋಟಿ ರುಪಾಯಿ ಹಣ ಸಹಾಯ ಮಾಡಿದೆ. ಇದರಲ್ಲಿ ಎಷ್ಟು ಧಾನ್ಯ ಹಾಗೂ ಹಣ ಸದ್ವಿನಿಯೋಗವಾಗಿದೆ ಎಂಬುದರ ಬಗ್ಗೆ ಸರ್ಕಾರ ಪತ್ರ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಬರ ಪರಿಹಾರಕ್ಕೆ ಕೇಂದ್ರ ಸರ್ಕಾರ ಕೊಟ್ಟಿರುವ 465 ಕೋಟಿ ರುಪಾಯಿಯಲ್ಲಿ ಕೇವಲ 200 ಕೋಟಿ ರುಪಾಯಿ ಖರ್ಚಾಗಿದೆ. ಈವರೆಗೆ ತನ್ನ ಪಾಲಿನ ಹಣವಾಗಿ ರಾಜ್ಯ ಸರ್ಕಾರ ಕೇವಲ 20 ಕೋಟಿ ರುಪಾಯಿ ಖರ್ಚು ಮಾಡಿದೆ. ತಾನೇ ಸರಿಯಾಗಿರದೆ, ಎಲ್ಲದಕ್ಕೂ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುತ್ತಿರುವುದು ಸರಿಯಲ್ಲ ಎಂದು ಅನಂತಕುಮಾರ್‌ ಟೀಕಿಸಿದರು.

(ಇನ್ಫೋ ವಾರ್ತೆ)

Post your views

ಪೂರಕ ಓದಿಗೆ-
ದೊರೆ ಏರಿಗೆ ಮಂತ್ರಿಗಳು ನೀರಿಗೆ.. !

ಮುಖಪುಟ / ಕೃಷ್ಣಗಾರುಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X