ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಲಸ ಖಾಲಿ ಇಲ್ಲ ! ಅಮೆರಿಕ ಕೆಲಸದ ಕನಸು ಕಾಣೋದನ್ನ ನಿಲ್ಲಿಸಿ

By Staff
|
Google Oneindia Kannada News

ಕೆಲಸ ಖಾಲಿ ಇಲ್ಲ ! ಅಮೆರಿಕ ಕೆಲಸದ ಕನಸು ಕಾಣೋದನ್ನ ನಿಲ್ಲಿಸಿ
ಫಾರೆಸ್ಟರ್‌ ರಿಸರ್ಚ್‌ ಸಂಸ್ಥೆಯ ಜಾನ್‌ ಮೆಕ್‌ಕ್ಯಾಥಿ ಹೇಳೋದನ್ನ ಕೇಳಿ..

ಬೆಂಗಳೂರು : ಅಮೆರಿಕೆಯಲ್ಲಿ ಉದ್ಯೋಗಾವಕಾಶ ಬರಬರುತ್ತಾ ಸಾಕಷ್ಟು ತಗ್ಗಲಿದೆ. 2005ನೇ ಇಸವಿ ಹೊತ್ತಿಗೆ 0.6 ದಶಲಕ್ಷ, 2010ರ ವೇಳೆಗೆ 1.6 ದಶಲಕ್ಷ ಹಾಗೂ 2015ರ ಹೊತ್ತಿಗೆ 3.3 ದಶಲಕ್ಷ ಅಮೆರಿಕನ್‌ ಉದ್ಯೋಗಾವಕಾಶಗಳು ಕಡಿತವಾಗಲಿವೆ ಎಂದು ಫಾರೆಸ್ಟರ್‌ ರಿಸರ್ಚ್‌ ಸಂಸ್ಥೆಯ ನಿರ್ದೇಶಕ ಜಾನ್‌ ಮೆಕ್‌ಕ್ಯಾಥಿ ಅಭಿಪ್ರಾಯ ಪಟ್ಟಿದ್ದಾರೆ.

ಅ. 08ರ ಸಂಜೆ ನಗರದಲ್ಲಿ ನಾಸ್‌ಕಾಮ್‌ ಆಯೋಜಿಸಿದ್ದ ಮಾತು ಮಂಥನ ಕಾರ್ಯಕ್ರಮದಲ್ಲಿ ಮೆಕ್‌ಕ್ಯಾಥಿ ಈ ಮಹತ್ವದ ವಿಷಯ ಹೇಳಿದರು. ಎರವಲು ಸೇವೆ ಇವತ್ತು ಜನಪ್ರಿಯವಾಗುತ್ತಿರುವ ಕಾರಣ ಅಮೆರಿಕದಲ್ಲಿನ ಉದ್ಯೋಗಾವಕಾಶಗಳು ಮುಂದಿನ ವರ್ಷಗಳಲ್ಲಿ ಕ್ಷೀಣಿಸಲಿವೆ. ಅಭಿವೃದ್ಧಿ ಹೊಂದುತ್ತಿರುವ ದೇಶಗಳು, ಅದರಲ್ಲೂ ವಿಶೇಷವಾಗಿ ಭಾರತದಲ್ಲಿ ತಾಂತ್ರಿಕ ಉದ್ಯೋಗಾವಕಾಶ ಹೆಚ್ಚಲಿದೆ. ಆದರೆ ಎರವಲು ಸೇವೆಯಲ್ಲೂ ತೀರಾ ಪೋಟಿ ಇರುವುದರಿಂದ ಗಿಟ್ಟುವ ಲಾಭ ಬಲು ಕಡಿಮೆಯಾಗಲಿದೆ ಎಂದು ಮೆಕ್‌ಕ್ಯಾಥಿ ತಿಳಿಸಿದರು.

ಒಂದು ವ್ಯಾಪಾರೋದ್ದೇಶ ಎರವಲು ಸೇವೆ (ಬಿಪಿಓ) ಗೆ 2000ನೇ ಇಸವಿಯಲ್ಲಿ 100 ಡಾಲರ್‌ ಸಿಗುತ್ತದೆ ಎಂದಿಟ್ಟುಕೊಳ್ಳಿ. 2010ನೇ ಇಸವಿಯಲ್ಲಿ 43 ಡಾಲರ್‌ ಸಿಕ್ಕರೆ ಹೆಚ್ಚು ಎಂಬುದು ಮೆಕ್‌ಕ್ಯಾಥಿ ಅಭಿಪ್ರಾಯ. 1000 ಕಂಪನಿಗಳ ಕಿರ್ದಿ ಪುಸ್ತಕ ಅಧ್ಯಯನ ಮಾಡಿ, ಅವುಗಳ ಮುಂದಿನ ಯೋಚನೆಯನ್ನು ಅವಲೋಕಿಸಿ ಮೆಕ್‌ಕ್ಯಾಥಿ ಈ ಅಭಿಪ್ರಾಯಕ್ಕೆ ಬಂದಿದ್ದಾರೆ.

ತಾಂತ್ರಿಕ ಕೆಲಸಗಳಿಗೆ ಒಂದು ಕಾಲದಲ್ಲಿ ಮೆಕ್ಕಾ ಎಂದೆನಿಸಿದ್ದ ಅಮೆರಿಕದಲ್ಲೇ ಉದ್ಯೋಗಾವಕಾಶ ಸಾಕಷ್ಟು ಕಡಿತವಾಗುತ್ತದೆಯೆಂದರೆ, ಭಾವೀ ಎಂಜಿನಿಯರುಗಳು ಎರಡು ಬಾರಿ ಯೋಚಿಸಿ ಹೆಜ್ಜೆ ಇಡಬೇಕು.

(ಪಿಟಿಐ)

ಮುಖಪುಟ / ಐಟಿ - ಬಿಟಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X