ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಸವಣ್ಣ ಹುಟ್ಟಿದ್ದು ಬಾಗೇವಾಡಿ ಅಲ್ಲ , ಇಂಗಳೇಶ್ವರ -ಚಿಮೂ

By Staff
|
Google Oneindia Kannada News

ಬಸವಣ್ಣ ಹುಟ್ಟಿದ್ದು ಬಾಗೇವಾಡಿ ಅಲ್ಲ , ಇಂಗಳೇಶ್ವರ -ಚಿಮೂ
ಸಂಶೋಧಕ ಡಾ. ಎಂ.ಚಿದಾನಂದ ಮೂರ್ತಿ ಕಂಡುಕೊಂಡಿರುವ ಬಸವ ಸತ್ಯ

ಬೆಂಗಳೂರು : 12ನೆಯ ಶತಮಾನದಲ್ಲಿ ಸಾಮಾಜಿಕ ಕ್ರಾಂತಿ ಮಾಡಿದ ವಚನಕಾರ ಬಸವಣ್ಣ ಹುಟ್ಟಿದ್ದು ಬಸವನ ಬಾಗೇವಾಡಿಯಲ್ಲಿ ಅಲ್ಲ, ಇಂಗಳೇಶ್ವರದಲ್ಲಿ ಎಂದು ಹಿರಿಯ ಸಂಶೋಧಕ ಡಾ. ಎಂ.ಚಿದಾನಂದ ಮೂರ್ತಿ ಅಭಿಪ್ರಾಯ ಪಟ್ಟಿದ್ದಾರೆ.

ಗುರುವಾರ (ಅ. 09) ಸುದ್ದಿಗೋಷ್ಠಿಯಲ್ಲಿ ಚಿಮೂ ಮಾತಾಡುತ್ತಿದ್ದರು. ತಾವು ಇತ್ತೀಚೆಗೆ ನಡೆಸಿದ ಸಂಶೋಧನೆಯಲ್ಲಿ ಬಸವಣ್ಣನವರ ತಾಯಿಯ ಊರು ಇಂಗಳೇಶ್ವರವಾಗಿದ್ದು, ಆತ ಕೂಡ ಅಲ್ಲೇ ಹುಟ್ಟಿರುವ ಬಗ್ಗೆ ಮಾಹಿತಿ ಸಿಕ್ಕಿದೆ ಎಂದರು.

ಬಸವಣ್ಣನವರ ಪೂರ್ವಜರು ಈಗಲೂ ಇಂಗಳೇಶ್ವರದಲ್ಲೇ ವಾಸಿಸುತ್ತಿದ್ದು, ಅವರೆಲ್ಲ ಸ್ಮಾರ್ತ ಬ್ರಾಹ್ಮಣರಾಗಿಯೇ ಉಳಿದಿದ್ದಾರೆ. ವಿಷ್ಣುವಿನ ಜೊತೆಗೆ ಚಿಕ್ಕ ಲಿಂಗವನ್ನು ಪೂಜಿಸುವ ಅವರು ಶಿವಲಿಂಗ ಧರಿಸುತ್ತಿಲ್ಲ. ಬಾಗೇವಾಡಿಯ ಬಸವಣ್ಣನವರ ವಂಶಸ್ಥರ ಮನೆಯಲ್ಲಿ ‘ಬಸವಣ್ಣನವರು ಹುಟ್ಟಿದ ಮನೆ’ ಎಂದು ಬರೆದಿರುವುದು ತಪ್ಪು. ಬದಲಿಗೆ ‘ಬಸವಣ್ಣನವರು ವಾಸಿಸಿದ ಮನೆ’ ಎಂದೋ, ಅವರ ತಂದೆ ವಾಸಿಸಿದ ಮನೆ ಎಂದೋ ಬರೆಯಬೇಕು. ಇಂಗಳೇಶ್ವರದಲ್ಲಿ ‘ಬಸವಣ್ಣವರು ಹುಟ್ಟಿದ ಮನೆ’ ಎಂಬ ಫಲಕ ಹಾಕುವುದರ ಜೊತೆಗೆ, ಗಡಿ ಪ್ರದೇಶದ ಈ ಹಳ್ಳಿಯನ್ನು ಅಭಿವೃದ್ಧಿ ಪಡಿಸುವ ಅಗತ್ಯವಿದೆ ಎಂದು ಚಿಮೂ ಮನವಿ ಮಾಡಿದರು.

ತಮ್ಮ ಮೊದಲ ಹೆಂಡತಿ ಸಾವಪ್ಪಿದಾಗ, ಮಾದರಸ ಮಾದಲಾಂಬಿಕೆಯನ್ನು ಮದುವೆಯಾದರು. ಈಕೆ ಇಂಗಳೇಶ್ವರದ ಹೆಂಗಸು. ಬಸವಣ್ಣನವರು ಹುಟ್ಟಿದ್ದು ಮಾದಲಾಂಬಿಕೆಗೆ, ಅದೂ ಇಂಗಳೇಶ್ವರದಲ್ಲಿ. ಗುಡ್ಡ ಗಾಡಿನ ಈ ಹಳ್ಳಿಯ ಪ್ರಕೃತಿ ಸೌಂದರ್ಯದ ಜೊತೆ ಬೆಳೆದು ಶಾಂತ ಮನಸ್ಥಿತಿ ಬೆಳೆಸಿಕೊಂಡ ಬಸವಣ್ಣನವರು, ತಂದೆಯ ಊರು ಬಾಗೇವಾಡಿಯ ಅಗ್ರಹಾರದ ವಾತಾವರಣದಲ್ಲಿ ಜೀವನದ ವಾಸ್ತವ ಸತ್ಯಗಳನ್ನು ಕಂಡುಕೊಂಡರು ಎಂದು ಚಿದಾನಂದ ಮೂರ್ತಿ ಹೇಳಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X