ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋಹತ್ಯೆ ರಾಜಕೀಯ ಸಮಸ್ಯೆಯಲ್ಲ, ಆರ್ಥಿಕ ಸಂಕಷ್ಟ- ಮನೇಕ

By Staff
|
Google Oneindia Kannada News

ಗೋಹತ್ಯೆ ರಾಜಕೀಯ ಸಮಸ್ಯೆಯಲ್ಲ, ಆರ್ಥಿಕ ಸಂಕಷ್ಟ- ಮನೇಕ
ಹಸುಗಳ ಜೀವದಲ್ಲಿ ಏನೆಲ್ಲ ಜೈವಿಕ ಸಾರವಿದೆ ಓದಿ...

ಬೆಂಗಳೂರು : ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಜರೂರತ್ತಾಗಿದೆ ಎಂಬುದರಲ್ಲಿ ಅನುಮಾನವಿಲ್ಲ. ಗೋಹತ್ಯೆ ಯಃಕಶ್ಚಿತ್‌ ರಾಜಕೀಯ ಅಥವಾ ಧಾರ್ಮಿಕ ತೊಂದರೆಯಲ್ಲ. ಆರ್ಥಿಕವಾಗಿ ಗೋಹತ್ಯೆ ನಿಷೇಧ ಬಲು ಮುಖ್ಯ ಎಂದು ಕೇಂದ್ರದ ಮಾಜಿ ಸಚಿವೆ ಹಾಗೂ ಪೀಪಲ್‌ ಫಾರ್‌ ಅನಿಮಲ್‌ (ಪಿಎಫ್‌ಎ) ಸಂಘಟನೆಯ ಅಧ್ಯಕ್ಷೆ ಮನೇಕಾ ಗಾಂಧಿ ಅಭಿಪ್ರಾಯ ಪಟ್ಟಿದ್ದಾರೆ.

ಮನೇಕಾ ದೃಷ್ಟಿಕೋನ ಹೀಗಿದೆ...

Cow Slaughter is an economic issueದಕ್ಷಿಣ ಭಾರತದಿಂದ ಕೊಂಡೊಯ್ಯುವ ಹಸುಗಳನ್ನು ಕೇರಳ ಮತ್ತು ಪಶ್ಚಿಮ ಬಂಗಾಳಕ್ಕೆ ಸಾಗಿಸಲಾಗುತ್ತದೆ. ಅಲ್ಲಿ ಅವನ್ನು ಕಡಿದು, ಲಕ್ಷ ಲಕ್ಷ ಟನ್ನುಗಟ್ಟಲೆ ಮಾಂಸವನ್ನು ಬಾಂಗ್ಲಾದೇಶಕ್ಕೆ ಅಕ್ರಮವಾಗಿ ಸಾಗಿಸಲಾಗುತ್ತಿದೆ. ಬಾಂಗ್ಲಾದೇಶದಿಂದ ಒಂದೇ ಒಂದು ಹಸು ಇಲ್ಲಿಗೆ ಆಮದಾಗುವುದಿಲ್ಲ. ಬದಲಿಗೆ ಇಲ್ಲಿನ ಹಸುಗಳ ಮಾಂಸ ಸದ್ದೇ ಇಲ್ಲದೆ ಗಡಿ ದಾಟುತ್ತಿದೆ.

ಬಾಂಗ್ಲಾಗೆ ಸಾಗಿದ ಗೋಮಾಂಸ 1 ಲಕ್ಷ ಟನ್ನು : ಇದು ಮುಂದುವರೆಯುತ್ತಾ ಹೋದರೆ ಹಳ್ಳಿಗಳ ಜೈವಿಕ ಸಮತೋಲನದಲ್ಲಿ ಸಹಜ ಏರುಪೇರಾಗುತ್ತದೆ. ಹೈನು ಪದಾರ್ಥಗಳ ಉತ್ಪಾದನೆ ತಗ್ಗುತ್ತದೆ. ಗೊಬ್ಬರಕ್ಕೆ ತೀರಾ ಅಗತ್ಯವಾದ ಹಸುವಿನ ಸಗಣಿಯೇ ಇಲ್ಲವಾದರೆ, ರೈತನ ಬೆಳೆ ಹೇಗೆ ಹಸನಾದೀತು? ಹೈನುಗಾರಿಕೆಗೂ ಕೃಷಿ ಕ್ಷೇತ್ರಕ್ಕೂ ಕೊಡು- ಕೊಳ್ಳುವಿಕೆಯ ಸಂಬಂಧ ಇದೆ. ಬಾಂಗ್ಲಾದೇಶಕ್ಕೆ ಒಂದು ಲಕ್ಷ ಟನ್‌ ಗೋಮಾಂಸ ರಫ್ತಾಗಿದೆ ಅನ್ನುವುದು ಸಣ್ಣ ವಿಷಯವಲ್ಲ. ನಾಳೆ ಇದು 2 ಲಕ್ಷವಾಗುತ್ತದೆ, ನಾಳಿದ್ದು ಮೂರು ಲಕ್ಷ.

ಹಳ್ಳಿಗಳ ವಿತ್ತ ವ್ಯವಸ್ಥೆಯೇ ಹಾಳಾಗುತ್ತೆ : ದಕ್ಷಿಣ ಭಾರತದ ರಾಜ್ಯಗಳಲ್ಲಿ ಕಳೆದ ಎರಡು ಮೂರು ವರ್ಷದಿಂದ ಬರಗಾಲ ಕಾಡುತ್ತಿದೆ. ಹಸುವಿಗೆ ಮೇವಿಲ್ಲದ ಬಡವರು ಚಿಕ್ಕಾಸಿನ ಆಸೆಗೆ ಅವನ್ನು ಮಾರುತ್ತಿದ್ದಾರೆ. ಇದು ಹೀಗೇ ಮುಂದುವರೆದು, ಆಮೇಲೆ ಮಳೆ ಬೆಳೆ ಆಗುತ್ತದೆ ಅಂತಿಟ್ಟುಕೊಳ್ಳೋಣ. ಆಗ ಹಳ್ಳಿಗಳಲ್ಲಿ ಹಸುಗಳ ಸಂಖ್ಯೆ ಸಾಕಷ್ಟು ಕ್ಷೀಣಿಸಿರುತ್ತದೆ. ಹೀಗಾಗಿ ಅಗತ್ಯ ಪ್ರಮಾಣದ ಜೈವಿಕ ಗೊಬ್ಬರ ಸಿಗೋದಿಲ್ಲ. ಒಂದು ಕಡೆ ಅಕ್ರಮ ಗೋಮಾಂಸದ ಸಾಗಣೆಯಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟ. ಇನ್ನೊಂದು ಕಡೆ ಹಳ್ಳಿಗಳ ಆರ್ಥಿಕ ಏರುಪೇರು.

ತಮಿಳುನಾಡಿನಲ್ಲಿ ಮುಖ್ಯಮಂತ್ರಿ ಜಯಲಲಿತಾ ಪ್ರಾಣಿ ಬಲಿಯನ್ನು ನಿಷೇಧಿಸಿದ್ದು ಶ್ಲಾಘನೀಯ ಕೆಲಸ. ಕರ್ನಾಟಕ, ಆಂಧ್ರಪ್ರದೇಶ, ಒರಿಸ್ಸಾ ರಾಜ್ಯಗಳಲ್ಲೂ ಈ ಕೆಲಸ ಆಗಬೇಕಿದೆ. ಪಿಎಫ್‌ಎ ಪ್ರಯತ್ನದಿಂದ ಕರ್ನಾಟಕದಲ್ಲಿ ಪ್ರಾಣಿ ಬಲಿಯ ಪ್ರಮಾಣವನ್ನು ತಗ್ಗಿಸುವ ಕೆಲಸ ಸಾಕಷ್ಟು ನಡೆದಿದೆ.

ಮರ್ಸಿಡೀಸ್‌ ಬೆಂಜ್‌ ಕಾರಲ್ಲಿ ಪ್ರಾಣಿ ಚರ್ಮ : ಮರ್ಸಿಡೀಸ್‌ ಬೆಂಜ್‌ ಕಾರಲ್ಲಿ ಪ್ರಾಣಿಗಳ ಚರ್ಮವನ್ನು ಬಳಸುತ್ತಾರೆ. ಅದಕ್ಕೇ ಅಂಥ ಕಾರು ಉತ್ಪಾದನೆಯನ್ನು ವಿರೋಧಿಸಿ ಪಿಎಫ್‌ಎ ಇತ್ತೀಚೆಗೆ ಪ್ರತಿಭಟನೆ ನಡೆಸಿತ್ತು. ಕೆಲವು ಕಡಿಮೆ ಬೆಲೆಯ ಮಾದರಿ ಕಾರುಗಳಲ್ಲಿ ಚರ್ಮ ಬಳಕೆ ನಿಷೇಧಿಸುವುದಾಗಿ ಕಂಪನಿ ಹೇಳಿತು. ಆದರೆ ಅದಕ್ಕೆ ನಾವು ಒಪ್ಪಲಿಲ್ಲ ಎಂದು ಮನೇಕಾ ಹೇಳಿದರು.

ಬೆಂಗಳೂರಿನ ಹೊರ ವಲಯದಲ್ಲಿ ವನ್ಯ ಪ್ರಾಣಿಗಳನ್ನು ಸಾಕಲು ದೊಡ್ಡ ಸೂರು ನಿರ್ಮಿಸುವ ಉದ್ದೇಶದಿಂದ ಪಶ್ಮಿನ ಎಂಬ ಸಂಸ್ಥೆಯ ಸಹಯೋಗದಲ್ಲಿ ಪಿಎಫ್‌ಎ ಕೈಯಲ್ಲಿ ಮಾಡಿದ ಶಾಲುಗಳ ಪ್ರದರ್ಶನ ಮತ್ತು ಮಾರಾಟವನ್ನು ಅಕ್ಟೋಬರ್‌ 10ರಿಂದ ಆಯೋಜಿಸಿದೆ. ಕೆಂಗೇರಿಯಲ್ಲಿ 6 ಎಕರೆ ಜಾಗದಲ್ಲಿ ಪ್ರಾಣಿ ಸೂರು ಈಗ ಇದ್ದು, ಅದನ್ನು ಇನ್ನಷ್ಟು ದೊಡ್ಡದು ಮಾಡುವುದು ಮನೇಕಾ ಕನಸು.

(ಪಿಟಿಐ)

ಗೋಹತ್ಯೆ ಬಗ್ಗೆ ನಿಮ್ಮ ಚಿಂತನೆಗಳೇನು?

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X