ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರದುರ್ಗ ಜಿಲ್ಲೆ ಹಿರಿಯೂರಿನಲ್ಲಿ ಉರುವಲು ವಿದ್ಯುತ್‌ ಸ್ಥಾವರ

By Staff
|
Google Oneindia Kannada News

ಚಿತ್ರದುರ್ಗ ಜಿಲ್ಲೆ ಹಿರಿಯೂರಿನಲ್ಲಿ ಉರುವಲು ವಿದ್ಯುತ್‌ ಸ್ಥಾವರ
ವಿದ್ಯುತ್‌ ಸ್ಥಾವರಕ್ಕೆ ಸ್ಥಳೀಯರ ತೀವ್ರ ವಿರೋಧ

ಬೆಂಗಳೂರು : ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಹೊಸ ನಮೂನೆಯ ವಿದ್ಯುತ್‌ ಸ್ಥಾವರವೊಂದು ತಲೆಯೆತ್ತಿದೆ. ಉರುವಲು ಆಧಾರಿತ ವಿದ್ಯುತ್‌ ಸ್ಥಾವರವೊಂದನ್ನು ಚಳ್ಳಕೆರೆ ರಸ್ತೆಯ ಪಕ್ಕ ಆರ್‌. ಕೆ. ಪವರ್‌ಜೆನ್‌ ಕಂಪೆನಿ ನಿರ್ಮಿಸಿದೆ.

ಸ್ಥಳೀಯರ ವಿರೋಧದ ನಡುವೆಯೇ ಈ ವಿದ್ಯುತ್‌ ಸ್ಥಾವರ ತಲೆಯೆತ್ತಿದ್ದು, ಅಕ್ಟೋಬರ್‌ ಅಂತ್ಯಕ್ಕೆ ವಿದ್ಯುತ್‌ ಉತ್ಪಾದನೆ ಆರಂಭವಾಗುವ ನಿರೀಕ್ಷೆ ಇದೆ. ಈ ಸ್ಥಾವರವು ಪ್ರತಿ ದಿನ 1500 ಟನ್‌ ಕಟ್ಟಿಗೆ ಉಪಯೋಗಿಸಿ 20 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ರೈತರ ಜಮೀನಿನಲ್ಲಿ ಉಳಿಯುವ ಕಸ ಕಡ್ಡಿ, ತೋಟದಲ್ಲಿನ ಗರಿಗಳು, ಸಿಪ್ಪೆಗಳನ್ನು ವಿದ್ಯುತ್‌ ಉತ್ಪಾದನೆಗೆ ಉಪಯೋಗಿಸುವುದರಿಂದಾಗಿ ರೈತರಿಗೆ ಇದು ಅನುಕೂಲಕರವಾಗಿದೆ. ಆರ್ಥಿಕವಾಗಿಯೂ ರೈತರಿಗೆ ನೆರವಾಗಬಲ್ಲುದು. ಈ ಸ್ಥಾವರಕ್ಕೆ 3. 62 ಲಕ್ಷ ಲೀಟರ್‌ ನೀರನ್ನು ಉಪಯೋಗಿಸಲಾಗುತ್ತದೆ. ಆದರೆ ಈ ನೀರನ್ನು ಪುನರ್‌ ಬಳಕೆ ಮಾಡಲು ಅವಕಾಶವಿದೆ. ಸ್ಥಾವರದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಸುವುದರಿಂದ ಪರಿಸರಕ್ಕೇನೂ ಹಾನಿಯಾಗುವುದಿಲ್ಲ ಎಂದು ಕಂಪೆನಿ ಸ್ಥಳೀಯರ ವಿರೋಧಕ್ಕೆ ಉತ್ತರಿಸುತ್ತಿದೆ.

ಆದರೆ ಉರುವಲು ಆಧಾರಿತ ವಿದ್ಯುತ್‌ ಸ್ಥಾವರ ಎಂದ ಮೇಲೆ ಅನಿವಾರ್ಯವಾಗಿ ಮರಗಿಡಗಳನ್ನು ಕಡಿಯಬೇಕಾಗುತ್ತದೆ. ಇದರಿಂದ ಪರಿಸರಕ್ಕೆ ಹಾನಿಯಾಗುವುದೇ ಹೆಚ್ಚು ಎಂದು ಸ್ಥಳೀಯ ರೈತರು ಈ ಸ್ಥಾವರನ್ನು ವಿರೋಧಿಸುತ್ತಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X