ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಕರ್ನಾಟಕಕ್ಕೆಲೇಟ್‌ ಲತೀಫ್‌ ಮಳೆ ಬಂತು, ಕೆರೆ ತುಂಬಿತು !

By Staff
|
Google Oneindia Kannada News

ಉತ್ತರ ಕರ್ನಾಟಕಕ್ಕೆಲೇಟ್‌ ಲತೀಫ್‌ ಮಳೆ ಬಂತು, ಕೆರೆ ತುಂಬಿತು !
ರಾಜ್ಯದಲ್ಲಿ ಇನ್ನಷ್ಟು ಮಳೆಯಾಗಲಿದೆ -ಹವಾಮಾನ ಇಲಾಖೆ ಭವಿಷ್ಯ

ಹುಬ್ಬಳ್ಳಿ: ಮುಂಗಾರು ಮಳೆ ಸುರಿಯದೆಯೇ ಉತ್ತರ ಕರ್ನಾಟಕದ ರೈತರನ್ನು ಬಳಲಿಸಿದ ಮಳೆರಾಯ ಈಗ ಕೃಪೆ ತೋರಿದ್ದಾನೆ. ಹುಬ್ಬಳ್ಳಿ, ಧಾರವಾಡ ಸೇರಿದಂತೆ ಹಲವು ಪ್ರದೇಶಗಳಲ್ಲಿ ಕಳೆದ ನಾಲ್ಕಾರು ದಿನಗಳಿಂದ ಸಾಕಷ್ಟು ಮಳೆಯಾಗಿದೆ. ಸೋಮವಾರದಂದು ಸುರಿದ ಗುಡುಗು ಮಳೆಯಲ್ಲಿ ಕುಂದಗೋಳ ತಾಲ್ಲೂಕಿನ ಶಿರೂರು ಗ್ರಾಮದಲ್ಲಿ ಸಿಡಿಲು ಬಡಿದು ಮೂವರು ಸಿಡಿಲು ಬಡಿದು ಮೃತರಾಗಿದ್ದಾರೆ.

ಶಿರೂರು ಗ್ರಾಮದ ಬಸಪ್ಪ ಸಹದೇವಪ್ಪ ರೇಡಿನವರ(22), ರೊಟ್ಟಿಗವಾಡದ ನೀಲವ್ವ ಭೀಮಪ್ಪ ಕಿತ್ತೂರ(28), ಮಲ್ಲವ್ವ ಚನ್ನಪ್ಪ ಮೇಗುಂಡಿ(28) ಸಿಡಿಲಿಗೆ ಬಲಿಯಾದವರೆಂದು ಗುರುತಿಸಲಾಗಿದೆ.

ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿವೆ. ಗದಗದಲ್ಲಿ ಭಾರೀ ಮಳೆ ಸುರಿದಿದ್ದು , ಮಂಡರಗಿಯ ತಾಮ್ರದ ಗುಂಡಿ ಕೆರೆಯ ಕಟ್ಟೆ ಒಡೆದು ನೀರು ಹೊರ ಹರಿಯುತ್ತಿದೆ.

ಹುಬ್ಬಳ್ಳಿ ನಗರಕ್ಕೆ ಕುಡಿಯುವ ನೀರು ಪೂರೈಸುತ್ತಿದ್ದ ನೀರಸಾಗರ ಕೆರೆ ಈ ವರ್ಷವಿಡೀ ಒಣಗಿತ್ತು. ಕಳೆದ ದಿನಗಳಲ್ಲಿ ಸುರಿದ ಮಳೆಗೆ ನೀರಸಾಗರ ಕೆರೆಯಲ್ಲಿ ಅಲ್ಪ ಸ್ವಲ್ಪ ನೀರು ಕಾಣಿಸಿಕೊಂಡಿದೆ.

ಬೆಂಗಳೂರಿನಲ್ಲಿ ಕಳೆದ ಮೂರ್ನಾಲ್ಕು ದಿನಗಳಲ್ಲಿ ಯಥೇಷ್ಟ ಮಳೆ ಸುರಿಯುತ್ತಿದೆ. ಬತ್ತಿಹೋಗಿದ್ದ ತಿಪ್ಪಗೊಂಡನ ಹಳ್ಳಿ ಜಲಾಶಯಕ್ಕೆ ಮತ್ತೆ ನೀರು ಬಂದಿದೆ. ನಗರಕ್ಕೆ ಪ್ರತಿ ದಿನ 120 ದಶಲಕ್ಷ ಕುಡಿಯುವ ನೀರು ಪೂರೈಸುವ ಈ ಕೆರೆ ಈಗ ಮೈದುಂಬಿಕೊಂಡಿದೆ.

ಮುಂಗಾರು ಮುಗಿದು ಈಗ ಹಿಂಗಾರಿನ ಕಾಲ. ರಾಜ್ಯದ ಬಹುತೇಕ ಕಡೆಗಳಲ್ಲಿ ಸುರಿಯುತ್ತಿರುವ ಮಳೆ ಇನ್ನು ಎಂಟ್ಹತ್ತು ದಿನಗಳ ಕಾಲ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಅ. 15ರಿಂದ 20 ರ ನಡುವೆ ನೈಋತ್ಯ ಮುಂಗಾರು ಮಾರುತಗಳು ದಕ್ಷಿಣ ಭಾರತದಿಂದ ಸಂಪೂರ್ಣ ಹಿಂತೆಗೆಯಲಿದ್ದು ಈಶಾನ್ಯ ಮಾರುತಗಳು ರಾಜ್ಯವನ್ನು ಪ್ರವೇಶಿಸಲಿವೆ. ವಿಶಾಖ ಪಟ್ಟಣಕ್ಕೆ 150 ಕಿಲೋ ಮೀಟರ್‌ ದೂರದಲ್ಲಿ ವಾಯುಭಾರ ಕುಸಿತ ಉಂಟಾಗಿರುವುದೇ ಈಗ ಬೀಳುತ್ತಿರುವ ದಿಢೀರ್‌ ಮಳೆಗೆ ಕಾರಣವಾಗಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಎ. ಎಲ್‌. ಕೊಪ್ಪರ್‌ ತಿಳಿಸಿದ್ದಾರೆ.

ಕೊನೆಯದಾಗಿ: ಮುಂದಿನ 2012ನೇ ವರ್ಷದ ವೇಳೆಗೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಸಂಗ್ರಹವಾಗುವ ಎಲ್ಲ ನೀರೂ ಬೆಂಗಳೂರು ನಗರದ ಜನತೆಗೆ ಕುಡಿಯುವುದಕ್ಕೆ ಬೇಕಾಗುತ್ತದೆ ಎಂದು ಬೆಂಗಳೂರು ಜಲ ಮಂಡಳಿ ಅಂದಾಜು ಮಾಡಿದೆ.

ಅಂದರೆ ಪ್ರತಿ ವರ್ಷ ಸಾಕಷ್ಟು ಮಳೆ ಸುರಿದು ಕೆಆರ್‌ಎಸ್‌ ಭರ್ತಿಯಾದಲ್ಲಿ ಬೆಂಗಳೂರು ಜನತೆಗೆ ಕುಡಿಯುವ ನೀರು ದಕ್ಕುತ್ತದೆ.

ಮುಂದಿನ ವರ್ಷವಾದರೂ ಯಥೇಷ್ಟ ಮಳೆ ಸುರಿಯುತ್ತದೆಯೇ ?

(ಇನ್ಫೋ ವಾರ್ತೆ)

ಇನ್ನಷ್ಟು ಓದು-
ಮೇಘ ಮಲ್ಹಾರ

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X