ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಾಪ್‌-10 ಐಟಿ ಕಂಪನಿ ಸಾಲಿನಲ್ಲಿ ವಿಪ್ರೋ : ಪ್ರೇಂಜಿ ಕನಸು

By Staff
|
Google Oneindia Kannada News

ಟಾಪ್‌-10 ಐಟಿ ಕಂಪನಿ ಸಾಲಿನಲ್ಲಿ ವಿಪ್ರೋ : ಪ್ರೇಂಜಿ ಕನಸು
ಅಜೀಂ ಪ್ರೇಂಜಿ ಕನವರಿಕೆಯಂತೆ ಸಾಗುತ್ತಿರುವ ವಿಪ್ರೋ ವಿದ್ಯಮಾನಗಳು...

ನವದೆಹಲಿ : ಜಾಗತಿಕ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಮುಂಚೂಣಿಯಲ್ಲಿ ವಿಪ್ರೋ ಸಂಸ್ಥೆಯನ್ನು ತಂದು ನಿಲ್ಲಿಸುವ ತಮ್ಮ ಮಹತ್ವಾಕಾಂಕ್ಷೆಯನ್ನು ವಿಪ್ರೋ ಮುಖ್ಯಸ್ಥ ಅಜೀಂ ಪ್ರೇಂಜಿ ಹೊರಗೆಡವಿದ್ದಾರೆ.

ವಿಶ್ವದ ಟಾಪ್‌-10 ಐಟಿ ಕಂಪನಿಗಳ ಸಾಲಿನಲ್ಲಿ ವಿಪ್ರೋ ಸಂಸ್ಥೆಯನ್ನು ಕಾಣಲು ಬಯಸುತ್ತೇನೆ. ತಮ್ಮೆಲ್ಲಾ ಪ್ರಯತ್ನಗಳು ಈ ಗುರಿಯ ಸಾಕಾರದ ದಿಕ್ಕಿನಲ್ಲೇ ಇವೆ ಎಂದು ಅಮೆರಿಕ ಮೂಲದ ವಾಣಿಜ್ಯ ಸಾಪ್ತಾಹಿಕವೊಂದಕ್ಕೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಅಜೀಂ ಪ್ರೇಂಜಿ ತಿಳಿಸಿದ್ದಾರೆ.

ಅಮೆರಿಕದತ್ತ ಭಾರತದ ಮಾನವ ಸಂಪನ್ಮೂಲ ಆಮದಾಗುತ್ತಿದ್ದರೂ, ಇದರಿಂದ ವಿಚಲಿತನಾಗದೆ ವಿಪ್ರೋ ಸಂಸ್ಥೆಯನ್ನು ಮುನ್ನಡೆಸುವ ವಿಶ್ವಾಸವನ್ನು ಪ್ರೇಂಜಿ ವ್ಯಕ್ತಪಡಿಸಿದ್ದಾರೆ.

ಜಾಗತಿಕ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಸ್ತುತ ವಿಪ್ರೋದ ನಡೆಗಳು ಪ್ರೇಂಜಿ ಅವರ ಕನಸಿಗೆ ಪೂರಕವಾಗಿರುವುದನ್ನು ಸಂದರ್ಶನ ಪ್ರಕಟಿಸಿರುವ ಪತ್ರಿಕೆ ಗುರ್ತಿಸಿದೆ. ಉದಾಹರಣೆಗೆ :

  • ಮಾರ್ಚ್‌ 2003ಕ್ಕೆ ಕೊನೆಗೊಂಡ ವಿತ್ತ ವರ್ಷದಲ್ಲಿ 902 ಮಿಲಿಯನ್‌ ಡಾಲರ್‌ ಆದಾಯ ದಾಖಲಿಸಿರುವ ವಿಪ್ರೋ 23 ಸಾವಿರ ನೌಕರರನ್ನು ಹೊಂದಿದೆ.
  • 2002ನೇ ಇಸವಿಯ ನವಂಬರ್‌ನಲ್ಲಿ ಅಮೆರಿಕದ ಬೋಸ್ಟನ್‌ ಮೂಲದ tech consultant American Management Systems Inc. ಎನ್ನುವ ಸಂಸ್ಥೆಯನ್ನು 24 ಮಿಲಿಯನ್‌ ಡಾಲರ್‌ಗಳಿಗೆ ಖರೀದಿಸುವ ಮೂಲಕ ವಿಪ್ರೋ ತನ್ನ ಚಟುವಟಿಕೆಗಳನ್ನು ವಿಸ್ತರಿಸಿದೆ.
  • 2003ರ ಮೇ ತಿಂಗಳಲ್ಲಿ ಅಮೆರಿಕದ NerveWire Inc.ಎನ್ನುವ ಆರ್ಥಿಕ ಸಲಹೆಗಾರ ಕಂಪನಿಯನ್ನು ವಿಪ್ರೋ 19 ಮಿಲಿಯನ್‌ ಡಾಲರ್‌ಗಳಿಗೆ ಖರೀದಿಸಿದೆ.
ಭಾರತೀಯ ಕಂಪನಿಗಳು ಬಹುದೊಡ್ಡ ಜಾಗತಿಕ ಬಿಡ್‌ಗಳನ್ನು ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ಸು ಗಳಿಸುತ್ತಿವೆ ಎಂದು ಒರ್ಯಾಕಲ್‌ನ ಸಿಇಒ ಎಲ್‌.ಎಲಿಸನ್‌ ಹೇಳಿರುವುದನ್ನು ಪತ್ರಿಕೆ ಉಲ್ಲೇಖಿಸಿದೆ. Scandinavian telco TeliaSonera ಎನ್ನುವ ಸಂಸ್ಥೆಯಾಂದಿಗಿನ ಒಪ್ಪಂದಕ್ಕೆ ಸಂಬಂಧಿಸಿದಂತೆ ಒರ್ಯಾಕಲ್‌ ಸಂಸ್ಥೆಯನ್ನು ಹಿಂದಿಕ್ಕಿತ್ತು .

ಬೆಂಗಳೂರು ಮೂಲದ ಸಂಸ್ಥೆಯಾಂದು ಜಾಗತಿಕ ಮಟ್ಟದಲ್ಲಿ ಸಾಧಿಸುತ್ತಿರುವ ಪ್ರಗತಿ ಎಷ್ಟೊಂದು ಆಶಾದಾಯಕ, ಅಲ್ಲವೇ ?

(ಪಿಟಿಐ)

ಮುಖಪುಟ / ಐಟಿ - ಬಿಟಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X