ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಪರಂಪರೆ ನಗರ’ವಾಗಿ ಮೈಸೂರನ್ನು ರಕ್ಷಿಸಲು ಶೀಘ್ರವೇ ಮಸೂದೆ

By Staff
|
Google Oneindia Kannada News

‘ಪರಂಪರೆ ನಗರ’ವಾಗಿ ಮೈಸೂರನ್ನು ರಕ್ಷಿಸಲು ಶೀಘ್ರವೇ ಮಸೂದೆ
ಜಯಪುರ ಮಾದರಿಯಲ್ಲಿ ಮೈಸೂರಿನ ಉದ್ಧಾರಕ್ಕೆ ಕೃಷ್ಣ ಸೂತ್ರ

ಮೈಸೂರು : ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಇನ್ನು ಮುಂದೆ ‘ಪರಂಪರೆ ನಗರ’ವಾಗಲಿದೆ. ಸದ್ಯದಲ್ಲೇ ಹೀಗೆ ಘೋಷಿಸಿ, ಅದರ ಸಂಸ್ಕೃತಿ ಸಂಪತ್ತನ್ನು ಕಾಪಾಡುವಂತಹ ಮಸೂದೆಯನ್ನು ವಿಧಾನಮಂಡಲದ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ಮುಖ್ಯಮಂತ್ರಿ ಎಸ್ಸೆಂ ಕೃಷ್ಣ ಹೇಳಿದರು.

ಸೋಮವಾರ (ಅ. 06) ಸುದ್ದಿಗಾರರ ಜೊತೆ ಮಾತನಾಡಿದ ಕೃಷ್ಣ, ರಾಜಾಸ್ಥಾನದ ಜಯಪುರವನ್ನು ಪರಂಪರೆ ನಗರ ಎಂದು ಘೋಷಿಸಿ ಅಲ್ಲಿನ ಸಾಂಸ್ಕೃತಿ ತಾಣಗಳನ್ನು ರಕ್ಷಿಸಲು ಮಸೂದೆ ಮಾಡಲಾಗಿದೆ. ಕಂದಾಯ ಇಲಾಖೆ ಕಾರ್ಯದರ್ಶಿಗಳು ಜಯಪುರಕ್ಕೆ ಹೋಗಿ, ಅಲ್ಲಿನ ಸ್ಮಾರಕ- ಅರಮನೆ ಮೊದಲಾದ ಜಾಗೆಗಳನ್ನು ಅಧ್ಯಯನ ಮಾಡಿ, ಅಲ್ಲಿನ ವ್ಯವಸ್ಥೆಯ ಬಗ್ಗೆ ಕೂಲಂಕಷ ವರದಿ ನೀಡಲಿದ್ದಾರೆ. ಅದನ್ನು ಆಧರಿಸಿ ಮಸೂದೆ ಸಿದ್ಧಪಡಿಸುತ್ತೇವೆ ಎಂದರು.

ಜಗನ್ಮೋಹನ ಅರಮನೆ, ಮೈಸೂರು ಅರಮನೆ ಮೊದಲಾದ ಭವ್ಯ ಸ್ಥಳಗಳ ಸಂರಕ್ಷಣೆಗೆ ಮಸೂದೆ ಒತ್ತು ಕೊಡಲಿದೆ. ಈ ಭವ್ಯ ಕಟ್ಟಡಗಳ ಸುತ್ತ ಯಾವುದೇ ಹೊಸ ಕಟ್ಟಡ ಕಟ್ಟುವುದನ್ನು ತಪ್ಪಿಸುವ ಹಾಗೂ ಹಳೆಯ ಕಟ್ಟಡಗಳನ್ನು ಉರುಳಿಸುವುದು ಅಥವಾ ಪುನರುಜ್ಜೀವನಗೊಳಿಸುವ ಕೆಲಸವನ್ನು ಮಸೂದೆ ಬಿಡಿಸಿ ಹೇಳಲಿದೆ ಎಂದು ಕೃಷ್ಣ ತಿಳಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X