ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆಪ್ಟೆಂಬರ್‌ 3ನೇ ತಾರೀಕು ಬೆಂಗಳೂರಲ್ಲಿ ಭಾರೀ ‘ಹಿಜ್ರಾ ಹಬ್ಬ’

By Staff
|
Google Oneindia Kannada News

ಸೆಪ್ಟೆಂಬರ್‌ 3ನೇ ತಾರೀಕು ಬೆಂಗಳೂರಲ್ಲಿ ಭಾರೀ ‘ಹಿಜ್ರಾ ಹಬ್ಬ’
ಮೂಲಭೂತ ಹಕ್ಕು ಪಡೆಯುವ ಉಮೇದಿಯ ಸಾಂಸ್ಕೃತಿಕ ಹಬ್ಬವಿದು

ಬೆಂಗಳೂರು : ಹೋದ ವರ್ಷ ತಮಿಳುನಾಡಿನ ಕೂವಗಂನಲ್ಲಿ ನಡೆದ ಹಿಜ್ರಾ ಉತ್ಸವ ಇಡೀ ದೇಶದ ಗಮನ ಸೆಳೆದಿತ್ತು. ಅಂತಹುದೇ ಉತ್ಸವ ನಗರದಲ್ಲಿ ಸೆ.3ನೇ ತಾರೀಕು ನಡೆಯಲಿದೆ. ಈ ಉತ್ಸವದ ಹೆಸರು ‘ಹಿಜ್ರಾ ಹಬ್ಬ’.

ಹಿಜ್ರಾಗಳನ್ನು ಮನುಷ್ಯರಂತೆ ಕಾಣಿರಿ. ಪೊಲೀಸರೇ ಇನ್ನಾದರೂ ಸುಮ್ಮನಾಗಿರಿ.. ಮೊದಲಾದ ಮೂಲಭೂತ ಹಕ್ಕುಗಳ ಪಡೆಯುವ ಧ್ವನಿ ಎತ್ತುವುದು ‘ಹಿಜ್ರಾ ಹಬ್ಬ’ದ ಮೂಲ ಉದ್ದೇಶ. ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ಗೋವಾ ಮೊದಲಾದ ಕಡೆಯಿಂದ ಹಿಜ್ರಾಗಳು ಬಂದು ಕರ್ನಾಟಕದವರ ಜೊತೆ ಸೇರಿ ಈ ಹಬ್ಬ ನಡೆಸಲಿದ್ದಾರೆ.

ಬೆಂಗಳೂರಲ್ಲಿ ಒಟ್ಟು 2 ಸಾವಿರ ಹಿಜ್ರಾಗಳಿದ್ದಾರೆ. ಎಲ್ಲರೂ ಒಂದಲ್ಲ ಒಂದು ರೀತಿ ಶೋಷಣೆಗೆ ಈಡಾಗುತ್ತಿರುವವರೇ. ತಮ್ಮ ಹಕ್ಕು ಪಡೆಯುವ ಸಲುವಾಗಿ ಇವರು ಸಾಂಸ್ಕೃತಿಕ ಉತ್ಸವ ಮಾಡುವ ಜರೂರತ್ತು ಈಗ ಇದೆ. ಅದಕ್ಕಾಗಿ ‘ವಿವಿಧ’ ಎಂಬ ಸ್ವಾಯತ್ತ ಗುಂಪು ಹಿಜ್ರಾಗಳಿಗೆ ಆಸರೆಯಾಗಿದೆ. ಅಣಕಿಗೆ, ಪೊಲೀಸರ ತುಳಿತಕ್ಕೆ ಬಲಿಯಾಗುತ್ತಿರುವ ಈ ಮಂದಿಗೆ ಸಾಮಾಜಿಕ ಸಮಾನತೆಯ ಅಗತ್ಯವಿದೆ. ಸಾಕಷ್ಟು ಸಂಖ್ಯೆಯಲ್ಲಿ ಹಿಜ್ರಾಗಳು ಸೇರಿ, ಸಾಂಸ್ಕೃತಿಕ ಪ್ರತಿಭೆಗಳನ್ನು ತೋರುವುದಲ್ಲದೆ ತಮ್ಮ ಹಕ್ಕುಗಳ ರಕ್ಷಣೆ ಕೋರಿ ಸರ್ಕಾರಕ್ಕೆ ಮನವಿಯನ್ನೂ ಸಲ್ಲಿಸಲಿದ್ದಾರೆ.

ಕಳೆದ ವರ್ಷದಿಂದ ಈ ಹಬ್ಬ ಆಚರಿಸುತ್ತಿದ್ದೇವೆ. ಈ ವರ್ಷ ಹಬ್ಬ ಇನ್ನೂ ರಂಗೇರಲಿದೆ. ಹೀಗೆ ಮಾಡುವುದರಿಂದ ನಮಗೂ ಒಂದು ಅಸ್ತಿತ್ವ ಸಿಗುತ್ತದೆ. ಸರ್ಕಾರಕ್ಕೆ ನಮ್ಮಂಥವರ ಸಮಸ್ಯೆ ಇಂಚಿಂಚೂ ತಿಳಿಯುವಂತಾಗುತ್ತದೆ ಎನ್ನುತ್ತಾರೆ ‘ವಿವಿಧ’ ಸದಸ್ಯರಾದ ವಿದ್ಯಾ, ಚಾಂದಿನಿ, ಸುಮಾ ಮತ್ತಿತರರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X