ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ನವೆಂಬರ್‌ನಲ್ಲಿ ಬೆಂಗಳೂರು ಮೆಟ್ರೋ ರೈಲು ಕಾಮಗಾರಿ ಪ್ರಾರಂಭ’

By Staff
|
Google Oneindia Kannada News

‘ನವೆಂಬರ್‌ನಲ್ಲಿ ಬೆಂಗಳೂರು ಮೆಟ್ರೋ ರೈಲು ಕಾಮಗಾರಿ ಪ್ರಾರಂಭ’
2004ರ ಹೊತ್ತಿಗೆ ಬೆಂಗಳೂರಲ್ಲಿ ಮೆಟ್ರೋ ರೈಲು ‘ಕೂ’ಗುಟ್ಟಲಿದೆ

ಬೆಂಗಳೂರು : ವಿತ್ತ ಸಚಿವಾಲಯದ ಸಮ್ಮತಿಗೆ ಕಾಯುತ್ತಿರುವ ಬೆಂಗಳೂರು ಮೆಟ್ರೋ ರೈಲು ಯೋಜನೆಯ 33 ಕಿಲೋ ಮೀಟರ್‌ ಉದ್ದದ ಕಾಮಗಾರಿ ಬರುವ ನವೆಂಬರ್‌ ಅಥವಾ ಡಿಸೆಂಬರ್‌ನಲ್ಲಿ ಶುರುವಾಗಲಿದೆ.

ಬೆಂಗಳೂರು ಮಾಸ್‌ ರ್ಯಾಪಿಡ್‌ ಟ್ರ್ಯಾನ್ಸಿಟ್‌ ಲಿಮಿಟೆಡ್‌ನ ಅಧ್ಯಕ್ಷ ಉಮೇಶ್‌ ಭಟ್‌ ಗುರುವಾರ (ಆ.28) ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ನಗರಾಭಿವೃದ್ಧಿ ಸಚಿವಾಲಯ ಹಾಗೂ ಯೋಜನಾ ಆಯೋಗ ಸೇರಿದಂತೆ ಈ ಯೋಜನೆಗೆ ಪ್ರತಿಶತಃ 99ರಷ್ಟು ಒಪ್ಪಿಗೆ ಈಗಾಗಲೇ ಸಿಕ್ಕಿದೆ. ವಿತ್ತ ಸಚಿವಾಲಯ ಒಂದು ಹ್ಞೂಂ ಅನ್ನುವುದು ಬಾಕಿ ಇದೆ ಎಂದರು.

ಬೆಂಗಳೂರಿನ ಉತ್ತರ- ದಕ್ಷಿಣ, ಪೂರ್ವ- ಪಶ್ಚಿಮದ ಭಾಗಗಳನ್ನು ಸೇರಿಸುವ ಮೆಟ್ರೋ ರೈಲು ಯೋಜನೆ ಎರಡು ಕಾರಿಡಾರ್‌ಗಳದ್ದಾಗಿರುತ್ತದೆ. 2004ರ ಹೊತ್ತಿಗೆ ರೈಲು ಸಂಚಾರ ಶುರುಮಾಡುವ ಕನಸನ್ನು ಇಟ್ಟುಕೊಂಡಿರುವ ಈ ಯೋಜನೆಗೆ 4,989 ಕೋಟಿ ರುಪಾಯಿ ವ್ಯಯಿಸಲಾಗುತ್ತದೆ. ಮೆಟ್ರೋ ರೈಲು ವ್ಯವಸ್ಥೆಯ ಸಮರ್ಪಕ ಅನುಷ್ಟಾನ ಮತ್ತು ನಿರ್ವಹಣೆಗೆ 2004ನೇ ಇಸವಿಯ ಹೊತ್ತಿಗೆ ಬೆಂಗಳೂರು ಮೆಟ್ರೋ ರೈಲು ನಿಗಮವನ್ನು ಸ್ಥಾಪಿಸಲಾಗುವುದು ಎಂದು ಭಟ್‌ ಹೇಳಿದರು.

ಈ ಯೋಜನೆಗೆ ಕರ್ನಾಟಕ ಸರ್ಕಾರ 1,572 ಕೋಟಿ ಹಾಗೂ ಕೇಂದ್ರ ಸರ್ಕಾರ 1,079 ಕೋಟಿ ರುಪಾಯಿ ವಿನಿಯೋಗಿಸಲಿವೆ. ಬಾಕಿ 2,338 ಕೋಟಿ ರುಪಾಯಿಯನ್ನು ಬ್ಯಾಂಕ್‌ ಮತ್ತಿತರ ವಿತ್ತ ಸಂಸ್ಥೆಗಳಿಂದ ಎತ್ತಲಾಗುವುದು ಎಂದರು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X