ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅವಳಿನಗರದಲ್ಲಿ ವರಾಹ ವರಾತ! ಹಂದಿಯಾಡೆಯರಿಗೆ ಡೆಡ್‌ಲೈನು

By Staff
|
Google Oneindia Kannada News

ಅವಳಿನಗರದಲ್ಲಿ ವರಾಹ ವರಾತ! ಹಂದಿಯಾಡೆಯರಿಗೆ ಡೆಡ್‌ಲೈನು
‘ಆಗಸ್ಟ್‌ 28ರೊಳಗೆ ಹಂದಿಗಳನ್ನು ನಗರಗಳಿಂದ ಹೊರಕ್ಕೆ ಸಾಗಿಸಬೇಕು’

ಹುಬ್ಬಳ್ಳಿ : ಅವಳಿ ನಗರ (ಹುಬ್ಬಳ್ಳಿ- ಧಾರವಾಡ)ದ ನಗರಸಭೆ ಇತ್ತೀಚೆಗೆ ತುರ್ತು ಸಭೆ ಕರೆದಿತ್ತು. ಸಭೆಯಲ್ಲಿ ಬೀದಿ ಹಂದಿಗಳದ್ದೇ ಮಾತು. ಅವಳಿ ನಗರದಲ್ಲಿ ಈಗ ಹಂದಿಗಳದ್ದೊಂದು ವಿಲಕ್ಷಣ ಸಮಸ್ಯೆ ತಲೆದೋರಿದೆ.

ಅವಳಿ ನಗರದಲ್ಲಿ ಹಂದಿ ಸಾಕಣೆಯನ್ನು ವ್ಯಾಪಾರವನ್ನಾಗಿ ಇಟ್ಟುಕೊಂಡ ಅನೇಕರಿದ್ದಾರೆ. ಕೈತುಂಬಾ ಲಾಭ ತಂದುಕೊಡುವ ಈ ವ್ಯಾಪಾರ ಈಗ ಹಂದಿಗಳ ಸಂಖ್ಯೆಯನ್ನೂ ಹೆಚ್ಚಿಸಿದೆ. ಪರಿಣಾಮ ಬೀದಿ ಹಂದಿಗಳ ಕಾಟ. ಕೊಚ್ಚೆಯನ್ನು ಮೈತುಂಬಾ ಮೆತ್ತಿಕೊಂಡು ನಡುರಸ್ತೆಯಲ್ಲಿ ಟ್ರಾಫಿಕ್‌ ನಿಯಂತ್ರಕರಂತೆ ಕೆಲವು ಹಂದಿಗಳು ನಿಲ್ಲುತ್ತವೆ. ಇನ್ನು ಕೆಲವು ಮಾರುಕಟ್ಟೆಯಲ್ಲಿ ‘ಶಾಪಿಂಗ್‌’ ಮಾಡುತ್ತ ಹೆಂಗಸರ ಮೈ ಸೋಕಿ ಹಿಂಸಿಸುತ್ತವೆ. ಈ ಹಂದಿಗಳ ಮಾಲೀಕರು ಎಲ್ಲೋ ಇರುತ್ತಾರೆ. ಅವುಗಳನ್ನು ಹದ್ದುಬಸ್ತಿಗೆ ತರುವುದು ಯಾರಿಗೂ ಬೇಡವಾಗಿದೆ. ಇದು ನಗರಸಭೆಯ ಮೊಗಸಾಲೆಗೆ ದೂರಿನ ರೂಪದಲ್ಲಿ ಹೋಗಿದ್ದು, ಈ ಸಮಸ್ಯೆಯ ಗಂಭೀರ ಚರ್ಚೆ ನಡೆಯಿತು.

ಹುಬ್ಬಳ್ಳಿ- ಧಾರವಾಡದ ಹಂದಿಗಳ ಒಡೆಯರು, ಕೌನ್ಸಿಲರುಗಳು ಮತ್ತು ಕಾರ್ಪೊರೇಷನ್‌ ಅಧಿಕಾರಿಗಳು ಇತ್ತೀಚೆಗೆ ನಡೆದ ಹಂದಿ ತುರ್ತು ಸಭೆಯಲ್ಲಿ ಭಾಗವಹಿಸಿದ್ದರು. ಆಗಸ್ಟ್‌ 28ನೇ ತಾರೀಕಿನೊಳಗೆ ಹಂದಿಗಳನ್ನು ನಗರಗಳ ವ್ಯಾಪ್ತಿಯಿಂದ ಹೊರಕ್ಕೆ ಸಾಗಿಸಬೇಕೆಂದು ನಗರಸಭೆ ಸಭೆಯಲ್ಲಿ ಹಂದಿ ಮಾಲೀಕರಿಗೆ ಆದೇಶ ಕೊಟ್ಟಿತು. ಈ ಕೆಲಸ ಅಷ್ಟು ಸುಲಭವಲ್ಲ. 3 ತಿಂಗಳಾದರೂ ಟೈಂ ಕೊಡಿ ಎಂದು ಹಂದಿಯಾಡೆಯರು ಅಲವತ್ತುಕೊಂಡರು. ಆದರೆ ಮೇಯರ್‌ ಪಾಟೀಲ್‌ ಹಂದಿ ಮಾಲೀಕರ ಮನವಿಗೆ ಜಗ್ಗಲಿಲ್ಲ. ಒಂದು ವೇಳೆ ಆ. 28ರೊಳಗೆ ಹಂದಿಗಳನ್ನು ನಗರದ ಹೊರಕ್ಕೆ ಸಾಗಿಸದಿದ್ದರೆ. ಅವುಗಳನ್ನು ಹರಾಜು ಕೂಗಿ ಮಾರುತ್ತೇವೆ ಎಂದರು.

ಡೆಂಗ್ಯೂ ಜ್ವರದ ಭೀತಿ ಅವಳಿ ನಗರದಲ್ಲೂ ಇದ್ದು, ಬೀದಿ ಹಂದಿಗಳು ಕೂಡ ಈ ರೋಗಕ್ಕೆ ಕಾರಣವಾಗುವ ಆತಂಕವಿದೆ. ಹೀಗಾಗಿ ನಾಗರಿಕರ ಸಮಸ್ಯೆಯನ್ನು ತ್ವರಿತವಾಗಿ ಬಗೆಹರಿಸಬೇಕಾಗಿದೆ ಎಂದು ಪಾಟೀಲ್‌ ಹೇಳಿದರು. ಒಂದು ವೇಳೆ ಹಂದಿಗಳನ್ನು ಊರ ಹೊರಕ್ಕೆ ಸಾಗಿಸುವುದು ಕಷ್ಟವಾದರೆ, ಆ ವ್ಯಾಪಾರ ಬಿಟ್ಟು ಬೇರೆ ಕೆಲಸಕ್ಕೆ ಹಂದಿ ಮಾಲೀಕರು ಕೈಹಾಕಲಿ. ಅದಕ್ಕೆ ಬೇಕಾದ ಸಹಾಯವನ್ನು ನಗರಸಭೆ ಮಾಡಲು ಸಿದ್ಧ ಎಂದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X