ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ರಿಕೆಟ್‌ ವ್ಯಾಯಾಮ ಶಿಬಿರ ಮುಕ್ತಾಯ, ಸೆ.1ರಿಂದ ನೆಟ್‌ ಅಭ್ಯಾಸ

By Staff
|
Google Oneindia Kannada News

ಕ್ರಿಕೆಟ್‌ ವ್ಯಾಯಾಮ ಶಿಬಿರ ಮುಕ್ತಾಯ, ಸೆ.1ರಿಂದ ನೆಟ್‌ ಅಭ್ಯಾಸ
ನಾವೀಗ ಸಮರ್ಥರು, ಗೆಲುವು ನಮ್ಮದೇ- ಗಂಗೂಲಿ

ಬೆಂಗಳೂರು : ಒಂದಿಬ್ಬರು ಹೊಸಬರಿಗೆ ನ್ಯೂಜಿಲೆಂಡ್‌ ವಿರುದ್ಧದ ಕ್ರಿಕೆಟ್‌ ಪಂದ್ಯಗಳಲ್ಲಿ ಅವಕಾಶ ಸಿಗಬಹುದು. ಆದರೆ, ಚಾಲೆಂಜರ್ಸ್‌ ಟ್ರೋಫಿ ಮತ್ತು ಇರಾನಿ ಟ್ರೋಫಿ ಆಟಗಳು ಹಾಗೂ ನ್ಯೂಜಿಲೆಂಡ್‌ ವಿರುದ್ಧದ ಅಭ್ಯಾಸ ಪಂದ್ಯಗಳು ಹೊಸಬರ ಆಯ್ಕೆಗೆ ಮಾನದಂಡವಾಗುತ್ತವೆ ಎಂದು ಭಾರತ ಕ್ರಿಕೆಟ್‌ ತಂಡದ ನಾಯಕ ಸೌರವ್‌ ಗಂಗೂಲಿ ಹೇಳಿದರು.

ನಗರದಲ್ಲಿ ಮಂಗಳವಾರ (ಆ।26) ದೈಹಿಕ ವ್ಯಾಯಾಮ ಶಿಬಿರ ಮುಗಿದ ಸಂದರ್ಭದಲ್ಲಿ ಸುದ್ದಿಗಾರರ ಜೊತೆ ಗಂಗೂಲಿ ಮಾತಾಡಿದರು. ಯೋಗ ಹಾಗೂ ವ್ಯಾಯಾಮ ಶಿಬಿರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಗಂಗೂಲಿ, ನ್ಯೂಜಿಲೆಂಡ್‌ ವಿರುದ್ಧ ನಾವು ಗೆದ್ದೇ ಗೆಲ್ಲುತ್ತೇವೆ ಎಂದು ಪುನರುಚ್ಚರಿಸಿದರು.

ವೀರೇಂದ್ರ ಶೆವಾಗ್‌, ಆಶಿಶ್‌ ನೆಹ್ರಾ ಹಾಗೂ ಹರ್ಭಜನ್‌ ಸಿಂಗ್‌ ಗಾಯಾಳುಗಳಾಗಿರುವುದು ತಲೆಕೆಡಿಸಿಕೊಳ್ಳುವಂಥ ವಿಚಾರವಲ್ಲ. ಅವರು ಬೇಗ ಚೇತರಿಸಿಕೊಳ್ಳುತ್ತಿದ್ದು, ಪಂದ್ಯಗಳ ಹೊತ್ತಿಗೆ ಸಂಪೂರ್ಣ ಸಮರ್ಥರಾಗುವರು. ಕ್ರಿಕೆಟ್‌ನಲ್ಲಿ ಗಾಯ ಅನ್ನೋದು ಮಾಮೂಲಿ. ಈಗ ತಂಡ ಮಾನಸಿಕ ಹಾಗೂ ದೈಹಿಕ ಚೈತನ್ಯವನ್ನು ಹೆಚ್ಚಿಸಿಕೊಂಡಿದ್ದು, ನೆಟ್‌ ಅಭ್ಯಾಸ ಇದಿರು ನೋಡುತ್ತಿದೆ ಎಂದರು.

ತಂಡದ ಕೋಚ್‌ ಜಾನ್‌ ರೈಟ್‌, ಫಿಸಿಯೋ ಆ್ಯಂಡ್ರೂ ಲೀಪಸ್‌ ಹಾಗೂ ಹೊಸದಾಗಿ ನೇಮಕಗೊಂಡಿರುವ ತರಪೇತುದಾರ ಗ್ರೆಗರಿ ಅಲ್ಲೆನ್‌ ಕಿಂಗ್‌ ವ್ಯಾಯಾಮ ಶಿಬಿರವನ್ನು ಹಾಡಿ ಹೊಗಳಿದರು. ಸದ್ಯಕ್ಕೆ ಇಂಗ್ಲೆಂಡ್‌ ಕೌಂಟಿಗಳಲ್ಲಿ ಆಡುತ್ತಿರುವ ರಾಹುಲ್‌ ದ್ರಾವಿಡ್‌, ಮೊಹಮ್ಮದ್‌ ಕೈಫ್‌ ಹಾಗೂ ಯುವರಾಜ್‌ ಸಿಂಗ್‌ ಫಿಟ್‌ನೆಸ್‌ ಬಗ್ಗೆ ಜಾನ್‌ರೈಟ್‌ಗೆ ಭರವಸೆ ಇದೆ. ದ್ರಾವಿಡ್‌ ಅವರಿಗಂತೂ ದೈಹಿಕ ಸಾಮರ್ಥ್ಯದ ಪ್ರಜ್ಞೆ ಸದಾ ಇರುತ್ತದೆ. ಅವರು ಸಲೀಸಾಗಿ ಆಟಕ್ಕೆ ಒಗ್ಗಿಕೊಳ್ಳುವುದರಲ್ಲಿ ಯಾವ ಅನುಮಾನವೂ ಇಲ್ಲ ಎಂದರು.

ಸೆಪ್ಟೆಂಬರ್‌ 1ನೇ ತಾರೀಕಿನಿಂದ 6 ದಿನಗಳ ಕ್ರಿಕೆಟ್‌ ಪೂರ್ವ ಸಿದ್ಧತಾ ಶಿಬಿರ ಪ್ರಾರಂಭವಾಗಲಿದೆ.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X