ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬಯಿ ಸ್ಫೋಟಗಳಲ್ಲಿ ಲಷ್ಕರ್‌ ಕೈವಾಡವಿದೆ-ಅಡ್ವಾಣಿ, ಛಗನ್‌

By Staff
|
Google Oneindia Kannada News

ಮುಂಬಯಿ ಸ್ಫೋಟಗಳಲ್ಲಿ ಲಷ್ಕರ್‌ ಕೈವಾಡವಿದೆ-ಅಡ್ವಾಣಿ, ಛಗನ್‌
ಸ್ಫೋಟ ಖಂಡಿಸಿದ ಅನ್ನಾನ್‌, ಬುಷ್‌

ಮುಂಬಯಿ : ಆಗಸ್ಟ್‌ 25, ಸೋಮವಾರ ನಗರದಲ್ಲಿ ನಡೆದ ಎರಡು ಬಾಂಬ್‌ ಸ್ಫೋಟಗಳ ಹಿಂದೆ ಉಗ್ರ ಸಂಘಟನೆ ಲಷ್ಕರ್‌-ಇ- ತೊಯಿಬ (ಎಲ್‌ಇಟಿ) ಕೈವಾಡವಿದೆ ಎಂದು ಉಪ ಪ್ರಧಾನಿ ಎಲ್‌.ಕೆ.ಅಡ್ವಾಣಿ ಹಾಗೂ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಛಗನ್‌ ಭುಜ್‌ಬಲ್‌ ಅಭಿಪ್ರಾಯ ಪಟ್ಟಿದ್ದಾರೆ.

ಗುಜರಾತ್‌ ಹತ್ಯಾಕಾಂಡದ ನಂತರ ಲಷ್ಕರ್‌- ಇ- ತೊಯಿಬ ಮತ್ತಿತರ ಸಂಘಟನೆಗಳು ಒಂದಾಗಿವೆ. ಅದರ ಫಲಶೃತಿ ಮುಂಬಯಿ ಬಾಂಬ್‌ ಸ್ಫೋಟ. ಘಟ್ಕೋಪರ್‌ ಸ್ಫೋಟಗಳ ಕುರಿತ ದಾಖಲೆಗಳನ್ನು ಪರಿಶೀಲಿಸಿದ ನಂತರ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಛಗನ್‌ ಭುಜ್‌ಬಲ್‌ ಮಂಗಳವಾರ (ಆ.26) ಸುದ್ದಿಗಾರರಿಗೆ ಹೇಳಿದರು.

ಮುಂಬಯಿಗೆ ಭೇಟಿ ನೀಡಿದ ಎಲ್‌.ಕೆ.ಅಡ್ವಾಣಿ ಕೂಡ ಛಗನ್‌ ಅಭಿಪ್ರಾಯವನ್ನು ಸಮರ್ಥಿಸಿದರು. ಭಾರತದ ಮೂಲೆ ಮೂಲೆಯನ್ನೂ ಲಷ್ಕರ್‌ ಸಂಘಟನೆ ಗುರಿಯಾಗಿಟ್ಟುಕೊಂಡು ದಾಳಿ ನಡೆಸುತ್ತಿದೆ ಎಂದರು.

ಮುಂಬಯಿಯಲ್ಲಿ ಮಂಗಳವಾರವೂ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಬಾಂಬ್‌ ಸ್ಫೋಟಗಳಿಂದ ಕನಿಷ್ಠ 46 ಮಂದಿ ಸತ್ತಿದ್ದು, 141 ಮಂದಿ ಆಸ್ಪತ್ರಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಸರ ಮತ್ತು ಇಗಟ್‌ಪುರಿ ನಡುವಿನ ರೈಲೆ ಟ್ರ್ಯಾಕ್‌ ಮೇಲೆ ಕೂಡ ಸ್ಫೋಟಕ ವಸ್ತುಗಳ ಪೊಲೀಸರಿಗೆ ಸಿಕ್ಕಿವೆ. ಸ್ಫೋಟ ಸಂಭವಿಸಿದ ಒಂದು ಟ್ಯಾಕ್ಸಿಯ ಚಾಲಕನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ವಿಚಾರಣೆ ನಡೆಸಿದ್ದಾರೆ. ಆಯಕಟ್ಟಿನ ಜಾಗದಲ್ಲಿ ಬಿಗಿ ಪೊಲೀಸ್‌ ಪಹರೆ ನಿಯೋಜಿಸಲಾಗಿದೆ. ಇನ್ನಷ್ಟು ಬಾಂಬ್‌ಗಳಿರುವ ಆತಂಕವಿದ್ದು, ಶೋಧನೆ ನಡೆದಿದೆ.

ಕೋಫಿ ಅನ್ನಾನ್‌, ಬುಷ್‌ ಖಂಡನೆ
ಮುಂಬಯಿ ಸರಣಿ ಬಾಂಬ್‌ ಸ್ಫೋಟ ಅಮಾನವೀಯತೆಯ ಪರಮಾವಧಿ. ಭಯೋತ್ಪಾದನೆ ಇವತ್ತು ಜಾಗತಿಕ ಸವಾಲಾಗಿ ನಿಂತಿದೆ. ಅಂತರ ರಾಷ್ಟ್ರೀಯ ಸಮುದಾಯ ಇದನ್ನು ನಿರ್ಮೂಲನೆ ಮಾಡಬೇಕು. ಈ ಸವಾಲಿಗೆ ನಾವು ಸಿದ್ಧ. ಮುಂಬಯಿ ಸರಣಿ ಬಾಂಬ್‌ ಸ್ಫೋಟವನ್ನು ನಾವು ಖಂಡಿಸುತ್ತೇವೆ ಎಂದು ವಿಶ್ವಸಂಸ್ಥೆಯ ಮುಖ್ಯ ಕಾರ್ಯದರ್ಶಿ ಕೋಫಿ ಅನ್ನಾನ್‌ ಮತ್ತು ಅಮೆರಿಕ ಅಧ್ಯಕ್ಷ ಜಾರ್ಜ್‌ ಬುಷ್‌ ಹೇಳಿದ್ದಾರೆ. ಇಂಗ್ಲೆಂಡ್‌, ರಷ್ಯಾ, ಸಿಂಗಪೂರ್‌, ನ್ಯೂಜಿಲೆಂಡ್‌ ಮೊದಲಾದ ದೇಶಗಳು ಸ್ಫೋಟವ ಕೃತ್ಯವನ್ನು ಖಂಡಿಸಿದ್ದು, ಮೃತರ ಆತ್ಮಕ್ಕೆ ಶಾಂತಿ ಕೋರಿ ಭಾರತ ಸರ್ಕಾರಕ್ಕೆ ಸಂದೇಶ ಕಳುಹಿಸಿವೆ.

(ಏಜೆನ್ಸೀಸ್‌)

ವಾರ್ತಾ ಸಂಚಯ
ಬಾಂಬ್‌ ಸ್ಫೋಟ : ಸೂತಕದ ಮುಂಬಯಿಯಲ್ಲಿ ಆತಂಕದ ನೆರಳು

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X