ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಲ್ಯವಿವಾಹದ ಬಗ್ಗೆ ಸುಪ್ರಿಂಕೋರ್ಟ್‌ ಆತಂಕ, ಕ್ರಮಕ್ಕೆ ಸೂಚನೆ

By Staff
|
Google Oneindia Kannada News

ಬಾಲ್ಯವಿವಾಹದ ಬಗ್ಗೆ ಸುಪ್ರಿಂಕೋರ್ಟ್‌ ಆತಂಕ, ಕ್ರಮಕ್ಕೆ ಸೂಚನೆ
ವಿವಾಹ ನೋಂದಣಿ ಕಡ್ಡಾಯಕ್ಕೆ ಸುಪ್ರಿಂಕೋರ್ಟ್‌ ಒಲವು

ನವದೆಹಲಿ: ಬಾಲ್ಯ ವಿವಾಹಗಳನ್ನು ತಪ್ಪಿಸುವುದಕ್ಕೋಸ್ಕರ ವಿವಾಹ ನೋಂದಣಿಯನ್ನು ಕಡ್ಡಾಯಗೊಳಿಸುವುದು ಸಾಧ್ಯವೇ ಎಂಬುದನ್ನು ಆರು ವಾರದೊಳಗೆ ತಿಳಿಸುವಂತೆ ಸುಪ್ರೀಂಕೋರ್ಟ್‌ ಆ. 25ರ ಸೋಮವಾರ ಕೇಂದ್ರ ಸರಕಾರವನ್ನು ಕೇಳಿದೆ.

ಮೈ ನೆರೆಯುವ ಮುನ್ನವೇ ಹೆಣ್ಣು ಮಕ್ಕಳು ಬಾಲ್ಯ ವಿವಾಹಕ್ಕೊಳಗಾಗುವುದನ್ನು ವಿರೋಧಿಸಿ ಸಂಸ್ಥೆಯಾಂದು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನಂತರ ಮುಖ್ಯ ನ್ಯಾಯಮೂರ್ತಿ ವಿ. ಎನ್‌. ಖಾರೆ ಮತ್ತು ನ್ಯಾಯಮೂರ್ತಿ ಎಸ್‌. ಬಿ. ಸಿನ್ಹಾ ಕೇಂದ್ರ ಸರಕಾರವನ್ನು ಈ ಬಗ್ಗೆ ಪ್ರಶ್ನಿಸಿದ್ದಾರೆ.

ವಿವಾಹ ನೋಂದಣಿಯನ್ನು ಕಡ್ಡಾಯಗೊಳಿಸಿದರೆ, ನೋಂದಣಿ ಸಂದರ್ಭದಲ್ಲಿ ವಧು-ವರನ ವಯಸ್ಸನ್ನು ಬಹಿರಂಗಪಡಿಸುವುದು ಅನಿವಾರ್ಯವಾಗುತ್ತದೆ. ಆದ್ದರಿಂದ ವಿವಾಹ ನೋಂದಣಿಯನ್ನು ಕಡ್ಡಾಯಗೊಳಿಸುವ ಬಗ್ಗೆ ಕೋರ್ಟ್‌ ಸರಕಾರದ ಅಭಿಪ್ರಾಯವನ್ನು ಕೇಳಿದೆ.

ವಿವಾಹ ನೋಂದಣಿ ಕಾಯ್ದೆ ಅಥವಾ ವಿವಾಹಕ್ಕೆ ಸಂಬಂಧಿಸಿದ ಕಾಯ್ದೆಗಳನ್ನು ತಿದ್ದುಪಡಿ ಮಾಡುವ ಮೂಲಕ ಈ ಸಮಸ್ಯೆಯನ್ನು ಬಗೆಹರಿಸಬಹುದೇ ಎಂಬುದಾಗಿ ಅಡಿಷನಲ್‌ ಸಾಲಿಸಿಟರ್‌ ಜನರಲ್‌ ಮುಕುಲ್‌ ರೋಹ್ತಗಿ ಅವರನ್ನು ಪ್ರಶ್ನಿಸಿದ ನ್ಯಾಯಪೀಠ- ಶ್ರೀಲಂಕಾದಲ್ಲಿ ವಿವಾಹ ನೋಂದಣಿ ಕಡ್ಡಾಯಗೊಳಿಸಿದ ನಂತರ ಹೆಣ್ಣು ಮಕ್ಕಳಿಗೆ ಮದುವೆ ಮಾಡುವ ವಯಸ್ಸಿನಲ್ಲಿ ಏರಿಕೆಯಾಗಿರುವುದನ್ನು ಉದಾಹರಿಸಿದೆ.

ಅತೀ ಚಿಕ್ಕ ಪ್ರಾಯದಲ್ಲೇ ಮದುವೆಯಾಗುವುದರಿಂದ ಹೆಣ್ಣು ಶೋಷಣೆಗೊಳಗಾಗುತ್ತಾಳೆ. ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್‌ ಅಧೀಕ್ಷಕರು ಪ್ರಸ್ತುತ ಇರುವ ಕಾಯ್ದೆಗಳನ್ನೇ ಬಳಸಿಕೊಂಡು ಬಾಲ್ಯ ವಿವಾಹವನ್ನು ತಡೆಗಟ್ಟಬೇಕು ಎಂದು ಕೋರ್ಟ್‌ ಸೂಚಿಸಿದೆ.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X