ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇಷ್ಟ್ರಾಗಲು ಹೊರಟ ಅಪರೂಪದ ಸಂಸದ ಖಬ್ರಿ

By Staff
|
Google Oneindia Kannada News

ಮೇಷ್ಟ್ರಾಗಲು ಹೊರಟ ಅಪರೂಪದ ಸಂಸದ ಖಬ್ರಿ
ಒಬ್ಬ ಸಂಸದನನ್ನೂ ಜೀವನದ ಅಭದ್ರತೆ ಹೇಗೆ ಕಾಡುತ್ತಿದೆ ನೋಡಿ. ಉತ್ತರ ಪ್ರದೇಶದ ಬ್ರಿಜ್‌ಲಾಲ್‌ ಖಬ್ರಿ ಸರ್ಕಾರಿ ಸೆಕೆಂಡರಿ ಶಾಲೆಯ ಮೇಷ್ಟ್ರಾಗೋಕೆ ಪರೀಕ್ಷೆ ಬರೆದಿದ್ದಾರೆ.

*ಲಕ್ನೋ ವರದಿಗಾರ

ರಾಜಕೀಯಕ್ಕೋಸ್ಕರ ಓದು ಬಿಟ್ಟವರನ್ನು ನೋಡಿದ್ದೇವೆ. ರಾಜಕೀಯಕ್ಕೆ ಬಂದ ಮೇಲೆ ಯಾರದ್ದೋ ತಗಾದೆಗೆ ಉತ್ತರ ಕೊಡಲೋಸುಗ ರಾಜ್ಯಶಾಸ್ತ್ರ ಎಂ.ಎ. ಓದುವಂಥಾ ಕರ್ನಾಟಕದ ಡಿ.ಕೆ.ಶಿವಕುಮಾರ್‌ ಥರದ ಮಂತ್ರಿಗಳನ್ನೂ ನೋಡಿದ್ದೇವೆ. ಖಾಕಿ ಬಿಚ್ಚಿಟ್ಟು ಕೆಲವೇ ದಿನಗಳಾಗಿರುವಾಗಲೇ ರಾಜಕೀಯಕ್ಕೆ ಬರುವ ಕನಸು ಕಾಣುತ್ತಿರುವ ಮಾಜಿ ಸೂಪರ್‌ ಕಾಪ್‌ ಸಾಂಗ್ಲಿಯಾನ ಕೂಡ ಗೊತ್ತು. ಆದರೆ, ರಾಜಕೀಯ ಇವತ್ತು ಇರುತ್ತೆ, ನಾಳೆ ಹೋಗತ್ತೆ ; ಪರ್ಮನೆಂಟಾದ ಒಂದು ಕೆಲಸ ಅಂತಿದ್ದರೆ ಎಷ್ಟು ಚೆನ್ನ ಅಂತ ಸರ್ಕಾರಿ ಕೆಲಸ ಹುಡುಕುವ ಯಾರಾದರೂ ಸಂಸದರನ್ನು ಬಲ್ಲಿರಾ? ಇದೋ ಇಲ್ಲೊಬ್ಬ ಅಂಥ ಅಪರೂಪದ ಸಂಸದ ಇದ್ದಾರೆ...

ಬಹುಜನ ಸಮಾಜ ಪಕ್ಷದ ಬ್ರಿಜ್‌ಲಾಲ್‌ ಖಬ್ರಿ ಉತ್ತರ ಪ್ರದೇಶದ ಜಲೌನ್‌ ಕ್ಷೇತ್ರದಿಂದ ಚುನಾಯಿತರಾದ ಸಂಸದ. ಇತ್ತೀಚೆಗೆ ಆ ರಾಜ್ಯದ ಪ್ರೌಢ ಶಿಕ್ಷಣ ಸೇವಾ ಆಯ್ಕೆ ಮಂಡಳಿ ಹಿಂದಿ, ಸಂಸ್ಕೃತ, ರಾಜಕೀಯ ವಿಜ್ಞಾನ, ಸಮಾಜಶಾಸ್ತ್ರ, ಮನೋ ವಿಜ್ಞಾನ, ಭೌತಶಾಸ್ತ್ರ, Brijlal Khabri ರಾಸಾಯನ ಶಾಸ್ತ್ರ ಮತ್ತು ಕಂಪ್ಯೂಟರ್‌ ಸೈನ್ಸ್‌ ಮೇಷ್ಟ್ರು/ಮೇಡಂಗಳನ್ನು ಆರಿಸಲು ಪರೀಕ್ಷೆಯಾಂದನ್ನು ನಡೆಸಿತು. ಕೂತು ಪರೀಕ್ಷೆ ಬರೆದವರ ಸಾಲಿನಲ್ಲಿ ಖಬ್ರಿ ಕೂಡ ಇದ್ದರು ! ಸರ್ಕಾರಿ ಸೆಕೆಂಡರಿ ಶಾಲೆಯಲ್ಲಿ ಉಪನ್ಯಾಸಕರಾಗೋದು ಖಬ್ರಿ ಬಯಕೆ. ರಾಜಕೀಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಖಬ್ರಿ ಅದೇ ವಿಷಯದ ಮೇಷ್ಟ್ರಾಗಲು ಪರೀಕ್ಷೆ ಬರೆದರು.

ಯಾರಿಗೂ ಗೊತ್ತಾಗಕೂಡದು ಎಂಬಂತೆ ತಣ್ಣಗೆ ಕೂತಿದ್ದ ಖಬ್ರಿಯವರನ್ನು ಒಬ್ಬಾತ ಪತ್ತೆ ಹಚ್ಚಿದ್ದೇ ಪೀಕಲಾಟಕ್ಕೆ ಬಂತು. ಪತ್ರಿಕೆಯವರ ಕಣ್ಣಿಗೂ ಕಬ್ರಿ ಸಿಕ್ಕಿಬಿಟ್ಟರು. ‘ಇದೇನು ಸ್ವಾಮಿ ನೀವು ಸಂಸದರಾಗಿ, ಮೇಷ್ಟ್ರಾಗಲು ಪರೀಕ್ಷೆ ಬರೆಯುತ್ತಿದ್ದೀರಲ್ಲಾ ’ ಪ್ರಶ್ನೆಗೆ ಖಬ್ರಿ ಉತ್ತರ ಕೊಡಲೇಬೇಕಾಯಿತು.

‘ಮೇಷ್ಟ್ರಾಗಿದ್ದುಕೊಂಡೂ ರಾಜಕಾರಣಿಯಾಗಿ ಬೆಳೆಯೋದು ಸಾಧ್ಯ ಇದೆ. ಬಿಜೆಪಿ ನಾಯಕ ಮುರಳಿ ಮನೋಹರ ಜೋಷಿ ಅಲಹಾಬಾದ್‌ ವಿಶ್ವವಿದ್ಯಾಲಯದಲ್ಲಿ ಪಾಠ ಹೇಳುತ್ತಲೇ, ರಾಜಕಾರಣಿಯೂ ಆಗಲಿಲ್ಲವೇ? ರಾಜಕೀಯಾನೇ ನೆಚ್ಚಿಕೊಂಡು ಜೀವನ ಮಾಡೋರೂ ಇದ್ದಾರೆ. ನನ್ನ ಹೆಂಡತಿ ಪಿಸಿಎಸ್‌ ಆಫೀಸರ್ರು. ಹಾಗಂತ ಆಕೆಯ ಸಂಬಳದಲ್ಲಿ ಕೂತು ತಿನ್ನುವ ಆಸಾಮಿ ನಾನಲ್ಲ. ಒಳ್ಳೆಯ ಮೇಷ್ಟ್ರಾಗಿ ಬೆಳೆಯೋದು ನನ್ನ ಕನಸು. ರಾಜಕೀಯವೂ ಜೊತೆಗೆ ಇದ್ದೇ ಇರುತ್ತೆ’ ಅಂತಾರೆ ಖಬ್ರಿ.

ಆದರೆ, ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ಭಟ್ಟಂಗಿಗಳು ಬೇರೆಯದೇ ಮಾತಾಡುತ್ತಾರೆ. ಸಂಸದರಾಗಿ ಖಬ್ರಿ ಪರ್ಫಾರ್ಮೆನ್ಸು ಅಷ್ಟಕ್ಕಷ್ಟೆ. ಮಾಯಾವತಿ ಮೇಡಂಗೂ ಅವರ ಬಗ್ಗೆ ಈಗ ನಂಬಿಕೆ ಇಲ್ಲ. ಮುಂದಿನ ಚುನಾವಣೆಗೆ ಖಬ್ರಿಗೆ ಟಿಕೇಟು ಸಿಗೋದಿಲ್ಲ. ಅದಕ್ಕೇ ಜೀವನೋಪಾಯಕ್ಕೆ ಅಂತ ಮೇಷ್ಟ್ರು ಕೆಲಸ ಹೊಂಚಿಕೊಳ್ಳೋಕೆ ಹೊರಟಿದ್ದಾರೆ ಅನ್ನೋದು ಬಹುಜನ ಸಮಾಜ ಪಕ್ಷದ ಕೆಲವರ ವ್ಯಂಗ್ಯ.

ಯಾರು ಏನೇ ಆಡಿಕೊಳ್ಳಲಿ, ನಾನು ಮೇಷ್ಟ್ರಾಗೇ ತೀರುವೆ ಅನ್ನೋದು ಖಬ್ರಿ ಸಂಕಲ್ಪ. ರಾಜಕೀಯದಲ್ಲಿ ಎಂತೆಂಥವರು ಇರುತ್ತಾರೆ ನೋಡಿ.

Post your views

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X