ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಂಬ್‌ ಸ್ಫೋಟ : ಸೂತಕದ ಮುಂಬಯಿಯಲ್ಲಿ ಆತಂಕದ ನೆರಳು

By Staff
|
Google Oneindia Kannada News

ಬಾಂಬ್‌ ಸ್ಫೋಟ : ಸೂತಕದ ಮುಂಬಯಿಯಲ್ಲಿ ಆತಂಕದ ನೆರಳು
ಜ್ವರದಂತೆ ಏರುತ್ತಿರುವ ಸಾವುನೋವು, ಮುಂಬಯಿ-ದೆಹಲಿ-ಅಹಮದಾಬಾದ್‌ನಲ್ಲಿ ಕಟ್ಟೆಚ್ಚರ.

ಮುಂಬಯಿ /ನವದೆಹಲಿ : ಮುಂಬಯಿಯಲ್ಲಿನ ಸರಣಿ ಬಾಂಬ್‌ ಸ್ಫೋಟಗಳ ಸದ್ದು ದೆಹಲಿಯಲ್ಲೂ ಪ್ರತಿಧ್ವನಿಸಿದ್ದು - ರಾಜಧಾನಿ ದೆಹಲಿಯಲ್ಲಿ ಕಟ್ಟೆಚ್ಚರದ ಭದ್ರತೆ ಕಲ್ಪಿಸಲಾಗಿದೆ.

ಮುಂಬಯಿಯ ಝವೇರಿ ಬಜಾರ್‌ ಹಾಗೂ ಗೇಟ್‌ವೇ ಆಫ್‌ ಇಂಡಿಯಾ ಬಳಿ ಸೋಮವಾರ (ಆ.25) ಮಧ್ಯಾಹ್ನ ಸಂಭವಿಸಿದ ಎರಡು ಬಾಂಬ್‌ ಸ್ಫೋಟಗಳಲ್ಲಿ ಅಪಾರ ಸಾವು ನೋವು ಸಂಭವಿಸಿದ್ದು - ಕನಿಷ್ಠ 43 ಮಂದಿ ಸಾವನ್ನಪ್ಪಿದ್ದು , 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಕ್ಷಣದಿಂದ ಕ್ಷಣಕ್ಕೆ ಏರುತ್ತಿದೆ. ಬಾಂಬ್‌ ಸ್ಫೋಟದ ಸಾವು ನೋವು ಹಾಗೂ ಆಯಾಯ ಕ್ಷಣದ ತಾಜಾ ವಿವರಗಳಿಗೆ- ಗೆಭೇಟಿಕೊಡಿ.

ಗಣೇಶನ ಹಬ್ಬ ಸಮೀಪಿಸುತ್ತಿರುವ ಸಂದರ್ಭದಲ್ಲಿ ಬಾಂಬ್‌ ಸ್ಫೋಟ ಸಂಭವಿಸಿರುವುದು ಮುಂಬಯಿ ನಾಗರಿಕರಿಗೆ ಆತಂಕ ಉಂಟು ಮಾಡಿದೆ. ಬಾಂಬ್‌ ಸ್ಫೋಟದಿಂದಾಗಿ ಮುಂಬಯಿ ನಗರ ತತ್ತರಿಸಿದ್ದು , ಇಡೀ ನಗರದಲ್ಲಿ ಪೊಲೀಸರ ಕಟ್ಟೆಚ್ಚರದ ಕಾವಲು ನಿಯೋಜಿಸಲಾಗಿದೆ. ಉಪ ಮುಖ್ಯಮಂತ್ರಿ ಛಗನ್‌ ಭುಜಬಲ್‌ ಅವರು ಉನ್ನತ ಮಟ್ಟದ ಸಭೆ ಕರೆದು ರಕ್ಷಣಾ ಕಾರ್ಯದ ನಿಗಾ ವಹಿಸಿದ್ದಾರೆ. ಮಹಾರಾಷ್ಟ್ರ ಸರ್ಕಾರ ರಾಜ್ಯಾದ್ಯಂತ ಕಟ್ಟೆಚ್ಚರದ ಘೋಷಣೆಯನ್ನು ಹೊರಡಿಸಿದೆ. ದೆಹಲಿ ಹಾಗೂ ಅಹಮಾದಾಬಾದ್‌ಗಳಲ್ಲೂ ಬಿಗಿ ಭದ್ರತೆ ಕಲ್ಪಿಸಲಾಗಿದೆ.

ಕಾರ್ಯಪಡೆ ರಚನೆ : ಸರಣಿ ಸ್ಫೋಟಗಳ ಕುರಿತು ಈವರೆಗೂ ಯಾರೂ ಹೊಣೆ ಹೊತ್ತುಕೊಂಡಿಲ್ಲ . ಈ ಬಗ್ಗೆ ತನಿಖೆ ನಡೆಯುತ್ತಿದೆ. ಮುಂಬಯಿಯಲ್ಲಿನ ಕಾನೂನು ಹಾಗೂ ಸುವ್ಯವಸ್ಥೆಯನ್ನು ಇನ್ನಷ್ಟು ಬಿಗಿಗೊಳಿಸುತ್ತಿದ್ದು , ಇನ್ನೊಂದು ತಿಂಗಳಲ್ಲಿ ಭಯೋತ್ಪಾದನೆ ನಿರೋಧಕ ಕಾರ್ಯಪಡೆಯನ್ನು ರಚಿಸಲಾಗುವುದು ಎಂದು ಮುಂಬಯಿ ನಗರ ಪೊಲೀಸ್‌ ಆಯುಕ್ತ ಆರ್‌.ಎಸ್‌.ಶರ್ಮ ತಿಳಿಸಿದ್ದಾರೆ.

ಉಗ್ರಗಾಮಿಗಳು ಸ್ಫೋಟಕ್ಕೆ ಆರ್‌ಡಿಎಕ್ಸ್‌ ಸ್ಫೋಟಕಗಳನ್ನು ಬಳಸಿರಬಹುದೆಂದು ಶಂಕಿಸಲಾಗಿದೆ. ಮುಂಬಯಿ ಸರಣಿ ಸ್ಫೋಟದ ಬಗ್ಗೆ ಸೇನೆಯ ನೆರವನ್ನು ಪಡೆಯುವ ಕುರಿತು ಯೋಚಿಸಲಾಗುತ್ತಿದೆ ಎಂದು ನವದೆಹಲಿ ಮೂಲಗಳು ತಿಳಿಸಿವೆ.

ಸ್ಫೋಟಕ್ಕೆ ಕಾರಣ ಅಯೋಧ್ಯೆ ವಿದ್ಯಮಾನ ?

ಅಯೋಧ್ಯೆಯ ವಿವಾದಾತ್ಮಕ ನಿವೇಶನದಲ್ಲಿ ಹಿಂದೂ ದೇವಾಲಯ ಇತ್ತೆಂಬ ಎಎಸ್‌ಐ ವರದಿಯಿಂದ ಪ್ರೇರಿತರಾದ ಉಗ್ರರು ಮುಂಬಯಿಯ ಬಾಂಬ್‌ ಸ್ಫೋಟಕ್ಕೆ ಕೈ ಹಾಕಿರಬಹುದೆಂದು ಶಂಕಿಸಲಾಗಿದೆ. ಭಾರತೀಯ ಪ್ರಾಚೀನ ವಸ್ತು ಸರ್ವೇಕ್ಷಣ ಇಲಾಖೆ (ಎಎಸ್‌ಐ) ಅಯೋಧ್ಯೆಯಲ್ಲಿ ನಡೆಸಿದ ಉತ್ಖನನದ ವರದಿಯನ್ನು ಅಲಹಾಬಾದ್‌ ಹೈಕೋರ್ಟಿಗೆ ಸೋಮವಾರ ಸಲ್ಲಿಸಿದ್ದು - ಈ ವರದಿಯಲ್ಲಿ ಅಯೋಧ್ಯೆಯ ಬಾಬ್ರಿ ಮಸೀದಿ ಭೂಪ್ರದೇಶದಲ್ಲಿ 10ನೇ ಶತಮಾನದ ಹಿಂದೂ ದೇವಾಲಯ ಇದ್ದ ಪಳೆಯುಳಿಕೆ ಸಿಕ್ಕಿದೆ ಎಂದು ಹೇಳಿದೆ.

ಅಯೋಧ್ಯೆಯ ವಿವಾದಾತ್ಮಕ ಭೂಮಿಯಲ್ಲಿ ಉತ್ಖನನ ನಡೆಸುವಂತೆ ಅಲಹಾಬಾದ್‌ ಕೋರ್ಟು ಎಎಸ್‌ಐಗೆ ಮಾರ್ಚ್‌ 5ರಂದು ಆದೇಶ ಕೊಟ್ಟಿತ್ತು. ಉತ್ಖನನದ ನಂತರ ಸಿದ್ಧಪಡಿಸಿದ ವರದಿಯನ್ನು ಎಎಸ್‌ಐ ಆಗಸ್ಟ್‌ 22ರಂದು ಕೋರ್ಟಿಗೆ ಸಲ್ಲಿಸಿತ್ತು. ಸದ್ಯದಲ್ಲೇ ವರದಿಯನ್ನು ಲಕೋಟೆಯಿಂದ ಹೊರಕ್ಕೆ ತೆಗೆದು, ಕಕ್ಷೀದಾರರಿಗೆ ಅದರ ಪ್ರತಿಗಳನ್ನು ಕೋರ್ಟು ನೀಡಲಿದೆ.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X