ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೂರು ಕನಸಿನೊಂದಿಗೆ ಬಿಜಾಪುರದಲ್ಲಿ ಪ್ರಮೀಳಾ ವಿವಿ ಪ್ರಾರಂಭ

By Staff
|
Google Oneindia Kannada News

ನೂರು ಕನಸಿನೊಂದಿಗೆ ಬಿಜಾಪುರದಲ್ಲಿ ಪ್ರಮೀಳಾ ವಿವಿ ಪ್ರಾರಂಭ
ಮೂಲಭೂತ ಸೌಕರ್ಯಗಳ ಕೊರತೆ, ಎಲ್ಲವೂ ಸರಿಯಾಗುವ ನಿರೀಕ್ಷೆ

ಬಿಜಾಪುರ : ಹತ್ತರಲ್ಲಿ ಹನ್ನೊಂದಾಗದ, ದೇಶದ ವಿಶ್ವವಿದ್ಯಾನಿಲಯಗಳಲ್ಲೇ ಅತ್ಯಂತ ಭಿನ್ನವಾದುದು ಎನ್ನಲಾದ ಮಹಿಳಾ ವಿಶ್ವವಿದ್ಯಾಲಯ ಈಗ ಬಿಜಾಪುರದಲ್ಲಿ ಪ್ರಾರಂಭ.

ಬಿಜಾಪುರದ ಮಹಿಳಾ ವಿಶ್ವ ವಿದ್ಯಾಲಯವನ್ನು ದೇಶದ ಇತರ ವಿಶ್ವವಿದ್ಯಾಲಯಗಳಿಗಿಂತ ಭಿನ್ನವಾಗಿ ರೂಪಿಸುವ ಕುರಿತು ವಿವಿ ಕುಲ ಸಚಿವ ಕೆ.ಆರ್‌. ನರೇಂದ್ರಬಾಬು ಅವರಿಗೆ ಅಪರಿಮಿತ ವಿಶ್ವಾಸ. ಅಂದಹಾಗೆ, ಬಹುದಿನದಿಂದ ನಾಮಕರಣ ಗೊಂದಲದಿಂದ ವಿವಾದಕ್ಕೆ ಕಾರಣವಾಗಿದ್ದ ವಿವಿ ಚಾಲನೆಗೊಂಡಿದ್ದು - ಆಗಸ್ಟ್‌ 22ರ ಶುಕ್ರವಾರ. ಸದ್ಯಕ್ಕೆ ವಿಶ್ವವಿದ್ಯಾಲಯವನ್ನು ಮಹಿಳಾ ವಿಶ್ವವಿದ್ಯಾಲಯ ಎಂದೇ ಕರೆಯಲಾಗುತ್ತಿದೆ.

ದಕ್ಷ ಅಧಿಕಾರಿ ಎಂದು ಹೆಸರಾದ ಎಸ್‌.ಎಂ.ಜಾಮದಾರ್‌ ಮಹಿಳಾ ವಿವಿ ವಿಶೇಷಾಧಿಕಾರಿಯಾಗಿ ನೇಮಕ ಹೊಂದಿದ್ದಾರೆ. ಮಹತ್ತರ ಉದ್ದೇಶದ ಮಹಿಳಾ ವಿವಿ ತನ್ನ ಉದ್ದೇಶಿತ ಗುರಿಗಳನ್ನು ಸಾಧಿಸುವುದರಲ್ಲಿ ಅನುಮಾನವೇ ಇಲ್ಲ . ಈ ವಿಶ್ವವಿದ್ಯಾಲಯ ಯಾವಾಗಲೋ ಪ್ರಾರಂಭವಾಗಬೇಕಿತ್ತು . ತಡವಾಗಿಯಾದರೂ ಮಹಿಳಾ ವಿವಿಯನ್ನು ಸರ್ಕಾರ ಪ್ರಾರಂಭಿಸಿರುವುದು ಪ್ರಶಂಸನೀಯ ಎಂದು ವಿವಿಯ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಆರ್‌.ಎನ್‌. ಹಾದಿಮನಿ ಅಭಿಪ್ರಾಯಪಡುತ್ತಾರೆ.

ಮಹಿಳಾ ವಿಶ್ವವಿದ್ಯಾಲಯದಲ್ಲಿ ಸದ್ಯಕ್ಕೆ ಸಕಲ ಮೂಲಭೂತ ಸೌಕರ್ಯಗಳು ಪೂರ್ಣ ಪ್ರಮಾಣದಲ್ಲಿ ಲಭ್ಯವಿಲ್ಲ . ಗ್ರಂಥಾಲಯದಲ್ಲಿ ಲಭ್ಯವಿರುವುದು 1200 ಪುಸ್ತಕ ಮಾತ್ರ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿಯಾಗುವ ನಿರೀಕ್ಷೆ .

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X