ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಅಣುಶಕ್ತಿಯಾಂದಿಗೆ ಹಾರ್ಡ್‌ವೇರ್‌ ಶಕ್ತಿ ಸೇರೆ ದೇಶ ಬಲಾಢ್ಯವು’

By Staff
|
Google Oneindia Kannada News

‘ಅಣುಶಕ್ತಿಯಾಂದಿಗೆ ಹಾರ್ಡ್‌ವೇರ್‌ ಶಕ್ತಿ ಸೇರೆ ದೇಶ ಬಲಾಢ್ಯವು’
ಚೀನಾವನ್ನು ಹಿಮ್ಮೆಟ್ಟೆಸಿ ಹಾರ್ಡ್‌ವೇರ್‌ ಕ್ಷೇತ್ರದಲ್ಲಿ ಮುನ್ನಡೆಯಲು ಪ್ರೇಂಜಿ ಕರೆ

ಬೆಂಗಳೂರು : ಭದ್ರತೆ, ಅಣುಶಕ್ತಿ ಮತ್ತು ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ನಮ್ಮ ದೇಶ ತನ್ನ ಕಾಲ ಮೇಲೆ ತಾನು ಪೂರ್ಣವಾಗಿ ನಿಲ್ಲಬೇಕಾದರೆ ಹಾರ್ಡ್‌ವೇರ್‌ ಉತ್ಪಾದನೆ ತೀವ್ರವಾಗಬೇಕು ಎಂದು ವಿಪ್ರೋ ಅಧ್ಯಕ್ಷ ಅಜೀಂ ಪ್ರೇಂಜಿ ಅಭಿಪ್ರಾಯ ಪಟ್ಟಿದ್ದಾರೆ.

ಚಾರ್ಟರ್ಡ್‌ ಅಕೌಂಟೆಂಟ್ಸ್‌ ಸಂಸ್ಥೆ ಆಯೋಜಿಸಿದ್ದ ಐಟಿ ಶಕ್ತಿಯ ಸೌಹಾರ್ದ ಸ್ಥಾಪನೆ ಎಂಬ ವಿಷಯ ಕುರಿತ ತಾಂತ್ರಿಕ ವಿಚಾರ ಸಂಕಿರಣದಲ್ಲಿ ಶುಕ್ರವಾರ (ಆ.22) ಪ್ರೇಂಜಿ ಮಾತಾಡುತ್ತಿದ್ದರು. ಭದ್ರತೆ ಮತ್ತು ಬಾಹ್ಯಾಕಾಶ ತಂತ್ರಜ್ಞಾನಕ್ಕೆ ಸಂಬಂಧಿಸಿದ ಹಾರ್ಡ್‌ವೇರ್‌ಗೆ ನಾವು ಇವತ್ತೂ ಅಮೆರಿಕವನ್ನೇ ಹೆಚ್ಚಾಗಿ ಅವಲಂಬಿಸಿದ್ದೇವೆ. ಇದರಿಂದ ಹೊರಬರುವ ಯತ್ನ ನಡೆಯಬೇಕು ಎಂದು ಪ್ರೇಂಜಿ ಕರೆಕೊಟ್ಟರು.

ಜಾಗತಿಕ ಎಲೆಕ್ಟ್ರಾನಿಕ್‌ ಹಾರ್ಡ್‌ವೇರ್‌ ಉತ್ಪಾದಕನಾಗಿ ಗುರುತಿಸಿಕೊಳ್ಳಬಲ್ಲ ತಾಕತ್ತು ಭಾರತಕ್ಕಿದೆ. ದೇಶವನ್ನು ಅಭಿವೃದ್ಧಿಗೊಳಿಸಲು ಮಾಹಿತಿ ತಂತ್ರಜ್ಞಾನ ಜೀವನದಲ್ಲಿ ಒಂದೇ ಒಂದು ಅವಕಾಶ ಕಲ್ಪಿಸಿಕೊಟ್ಟಿದೆ. ಅದನ್ನು ಸಮರ್ಥವಾಗಿ ಉಪಯೋಗಿಸಿಕೊಳ್ಳಬೇಕು.

ಚೀನಾ ಆರ್ಥಿಕವಾಗಿ ಇವತ್ತು ಸಾಕಷ್ಟು ಪ್ರಗತಿ ಸಾಧಿಸಲು ಕಾರಣ ಅದರ ಹಾರ್ಡ್‌ವೇರ್‌ ಉತ್ಪಾದನೆ. 2001ರಲ್ಲಿ 36 ಶತಕೋಟಿ ಡಾಲರ್‌ ಬೆಲೆಯ ಹಾರ್ಡ್‌ವೇರ್‌ ಉತ್ಪನ್ನವನ್ನು ಚೀನಾ ರಫ್ತು ಮಾಡಿತ್ತು. ಚೀನಾ 1000 ಹಾರ್ಡ್‌ವೇರ್‌ ಉತ್ಪನ್ನ ತಯಾರಿಸಿದರೆ, ಭಾರತ ಕೇವಲ 9 ಹಾರ್ಡ್‌ವೇರ್‌ ತಯಾರಿಸಿತ್ತು. ಈ ಹೋಲಿಕೆ ಹಾರ್ಡ್‌ವೇರ್‌ ಕ್ಷೇತ್ರದಲ್ಲಿ ನಮ್ಮ ಹಿನ್ನಡೆಯನ್ನು ಸ್ಪಷ್ಟಪಡಿಸುತ್ತದೆ ಎಂದು ಪ್ರೇಂಜಿ ಹೇಳಿದರು.

ಪ್ರಸಕ್ತ ದಶಕದ ಅಂತ್ಯದ ವೇಳೆಗೆ ಭಾರತದಲ್ಲಿ 12 ಲಕ್ಷ ಉದ್ಯೋಗಾವಕಾಶಗಳನ್ನು ಹಾರ್ಡ್‌ವೇರ್‌ ಕ್ಷೇತ್ರ ಸೃಷ್ಟಿಸುವ ಕುರಿತು ಪ್ರೇಂಜಿ ವಿಶ್ವಾಸ ವ್ಯಕ್ತಪಡಿಸಿದರು. ಅಂದಹಾಗೆ, ಅಜೀಂ ಪ್ರೇಂಜಿ ರಾಷ್ಟ್ರೀಯ ಹಾರ್ಡ್‌ವೇರ್‌ ಕಾರ್ಯಪಡೆಯ ಅಧ್ಯಕ್ಷರೂ ಹೌದು.

(ಪಿಟಿಐ)

ಮುಖಪುಟ / ಐಟಿ - ಬಿಟಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X