ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುರಿತು ‘ವೀರ’ಪ್ಪ ಮೊಯಿಲಿ ಸ್ಪಷ್ಟನೆ

By Staff
|
Google Oneindia Kannada News

ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುರಿತು ‘ವೀರ’ಪ್ಪ ಮೊಯಿಲಿ ಸ್ಪಷ್ಟನೆ
ಮೊಯಿಲಿ ಹೇಳಿದ್ದು ಹಾಗಲ್ಲ , ಅದು ಹೇಗೆ ಎಂದರೆ...

ಹಾಸನ : ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಕುರಿತು ತಮ್ಮ ಹೇಳಿಕೆಯನ್ನು ತಪ್ಪಾಗಿ ಗ್ರಹಿಸಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸ್ವತಃ ಲೇಖಕರೂ ಆದ ವೀರಪ್ಪ ಮೊಯಿಲಿ ಸ್ಪಷ್ಟನೆ ನೀಡಿದ್ದಾರೆ.

ಹಂಪಿ ವಿಶ್ವ ವಿದ್ಯಾಲಯದ ಕಾರ್ಯ ವೈಖರಿ ತನ್ನ ಉದ್ದೇಶಿತ ಗುರಿ ಸಾಧನೆಗಳಿಗೆ ಅನುಗುಣವಾಗಿಲ್ಲ . ಅದೇ ರೀತಿ ಕನ್ನಡ ಪುಸ್ತಕ ಪ್ರಾಧಿಕಾರ ಸಾಗುತ್ತಿರುವ ಹಾದಿಯೂ ಸರಿಯಾದುದಲ್ಲ . ಆ ಕಾರಣದಿಂದಾಗಿ ಅವುಗಳ ಕಾರ್ಯ ವೈಖರಿ ಸರಿಯಾಗಬೇಕು ಎನ್ನುವ ಅರ್ಥದಲ್ಲಿ ಮಾತನಾಡಿದೆನೇ ವಿನಃ, ಅವುಗಳನ್ನು ಮುಚ್ಚಬೇಕು ಎನ್ನುವುದು ತಮ್ಮ ಮಾತಿನ ಅರ್ಥವಲ್ಲ ಎಂದು ಹಾಸನದಲ್ಲಿ ತಮ್ಮನ್ನು ಭೇಟಿಯಾದ ಪತ್ರಕರ್ತರಿಗೆ ವೀರಪ್ಪ ಮೊಯಿಲಿ ತಿಳಿ ಹೇಳಿದ್ದಾರೆ.

ಆ.15ರಂದು ಧಾರವಾಡದಲ್ಲಿ ಜರುಗಿದ ಮನೋಹರ ಗ್ರಂಥಮಾಲೆಯ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮೊಯಿಲಿ- ಹಂಪಿ ವಿವಿ ಹಾಗೂ ಪುಸ್ತಕ ಪ್ರಾಧಿಕಾರ ಮುಚ್ಚುವಂತೆ ಫರ್ಮಾನು ಹೊರಡಿಸಿದ್ದಾಗಿ ಈವರೆಗಿನ ಸುದ್ದಿ . ಪ್ರಸ್ತುತ ಮೊಯಿಲಿ ಸಾಹೇಬರು ಸ್ಪಷ್ಟಪಡಿಸಿರುವ ಅವರವೇ ಆದ ಅಭಿಪ್ರಾಯಗಳು :

  • ಕನ್ನಡ ಸಂಸ್ಕೃತಿಯನ್ನು ಬಿಂಬಿಸುವ ಕೆಲಸವನ್ನು ಕನ್ನಡ ವಿಶ್ವವಿದ್ಯಾಲಯ ಮಾಡಬೇಕು.
  • ವಿಶ್ವ ಪರಂಪರೆಯನ್ನು ಮುಂದುವರಿಸುವ ಕಾರ್ಯವಾಗಬೇಕು.
  • ಇತರ ವಿಶ್ವವಿದ್ಯಾಲಯಗಳೊಂದಿಗೆ ಹಂಪಿ ವಿವಿ ಸ್ಪರ್ಧೆಗಿಳಿಯಬಾರದು. ಅದು ತನ್ನ ಪ್ರತ್ಯೇಕ ಅಸ್ತಿತ್ವ ಉಳಿಸಿಕೊಳ್ಳಬೇಕು.
  • ಕನ್ನಡ ಸಂಸ್ಕೃತಿ, ಇತಿಹಾಸ, ಶಿಲ್ಪಕಲೆಗಳ ಕುರಿತು ವಿವಿ ಸಂಶೋಧನೆ ನಡೆಸಬೇಕು.
  • ಮೇಲಿನ ಪ್ರಕಾರ ವಿಶ್ವವಿದ್ಯಾಲಯ ಕಾರ್ಯ ನಿರ್ವಹಿಸಬೇಕೇ ಹೊರತು- ಪದವಿ-ಡಿಪ್ಲೊಮ ನೀಡುವುದು ಅಥವಾ ಪುಸ್ತಕ ಪ್ರಕಟಿಸುವುದರಲ್ಲೇ ಕಾಲ ಕಳೆಯುವುದು ಸಲ್ಲದು.
ಇನ್ನು ಪುಸ್ತಕ ಪ್ರಾಧಿಕಾರದ ಸಮಾಚಾರ-
  • 1995ರಿಂದ ಕನ್ನಡ ಪುಸ್ತಕ ಪ್ರಾಧಿಕಾರ ದಾರಿ ತಪ್ಪಿದೆ.
  • ಪುಸ್ತಕ ಪ್ರಾಧಿಕಾರ ಪುಸ್ತಕ ಪ್ರಕಾಶಿಸುವ ಕೆಲಸ ಮಾಡಬೇಕಾಗಿಲ್ಲ . ಪುಸ್ತಕ ಪ್ರಕಟಿಸಲು ಬೇರೆ ಪ್ರಕಾಶನ ಸಂಸ್ಥೆಗಳಿವೆ.
  • ಪುಸ್ತಕ ಮಾರಾಟದತ್ತ ಹಾಗೂ ಗ್ರಂಥಾಲಯಗಳು ಮಾಡುವ ಕೆಲಸವನ್ನು ಪುಸ್ತಕ ಪ್ರಾಧಿಕಾರ ಮಾಡಬೇಕು.
ಮೊಯಿಲಿ ಅವರ ಅಭಿಪ್ರಾಯಗಳ ಕುರಿತು ನಿಮ್ಮ ಅಭಿಪ್ರಾಯ ?

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X