ದೇವಸ್ಥಾನಗಳ ಏಕರೂಪ ಶಾಸನ ತಿದ್ದುಪಡಿಗೆ ಅರ್ಚಕರ ಆಗ್ರಹ
ದೇವಸ್ಥಾನಗಳ ಏಕರೂಪ ಶಾಸನ ತಿದ್ದುಪಡಿಗೆ ಅರ್ಚಕರ ಆಗ್ರಹ
‘ಗ್ರಾಮಾಂತರ ದೇವಳದ ಅರ್ಚಕರಿಗೆ ತಿಂಗಳಿಗೆ 1 ಸಾವಿರ ರು. ವೇತನ ನೀಡಬೇಕು’
ಹೊಸದಾಗಿ ರೂಪಿಸಲಾಗಿರುವ ಈ ಏಕ ರೂಪ ಶಾಸನದಲ್ಲಿರುವ ಲೋಪಗಳ ಸಂಬಂಧ ಮುಜರಾಯಿ ಮತ್ತು ಕಾನೂನು ಸಚಿವರು, ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ತಮ್ಮೊಡನೆ ಸಮಾಲೋಚನೆ ನಡೆಸಿ ಶಾಸನವನ್ನು ಪರಿಷ್ಕರಿಸಬೇಕು ಎಂದು ಒಕ್ಕೂಟ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರ ಬಳಿ ಮನವಿ ಮಾಡಿಕೊಂಡಿದೆ.
ಒಕ್ಕೂಟದ ಮುಖ್ಯ ಆಗ್ರಹಗಳು :
- ಈ ಶಾಸನದಲ್ಲಿ ತಪ್ಪು ಮಾಡಿದ ಅರ್ಚಕರು ಮತ್ತು ಆಗಮಿಕರ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರವನ್ನು ದೇವಸ್ಥಾನದ ಧರ್ಮ ದರ್ಶಿಗಳಿಗೆ ನೀಡಲಾಗಿದೆ. ಇದರಿಂದ ಗೌರವಯುತ ಸ್ಥಾನದಲ್ಲಿರುವ ಅರ್ಚಕರ ಮೇಲೆ ಅಧಿಕಾರ ಚಲಾಯಿಸುವ ಅಧಿಕಾರವನ್ನು ಕೇವಲ ಮೂರು ವರ್ಷಗಳ ಅವಧಿಗೆ ನೇಮಕಗೊಳ್ಳುವ ಧರ್ಮದರ್ಶಿಗಳಿಗೆ ನೀಡುವುದು ಸರಿಯಲ್ಲ.
- ಗ್ರಾಮಾಂತರ ದೇವಳದ ಅರ್ಚಕರಿಗೆ ಮಾಹೆಯಾನ ಕನಿಷ್ಠ 1 ಸಾವಿರ ರುಪಾಯಿ ವೇತನ ನಿಗದಿ ಪಡಿಸಬೇಕು.
- ಗ್ರಾಮೀಣ ಮತ್ತು ಪಟ್ಟಣ ವ್ಯಾಪ್ತಿ ಹಿರಿಯ ಮತ್ತು ಅತಿ ಹಿರಿಯ ಅರ್ಚಕರಿಗೆ ನಿವೇಶನ ನೀಡಬೇಕು ಎಂದು ಒಕ್ಕೂಟದ ಅಧ್ಯಕ್ಷ ಮಳ್ಳೂರು ಆನಂದ ರಾವ್ ನೇತೃತ್ವದ ನಿಯೋಗ ಗುರುವಾರ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಆಗ್ರಹಿಸಿದೆ.
ಮುಖಪುಟ / ವಾರ್ತೆಗಳು












Click it and Unblock the Notifications