ಸಾಂಪ್ರಾಸ್ ಇನ್ನೊಂದೇ ಸಲ ಕಣಕ್ಕೆ ಬರ್ತಾರೆ ; ಗುಡ್‌ಬೈ ಹೇಳೋಕೆ
ಸಾಂಪ್ರಾಸ್ ಇನ್ನೊಂದೇ ಸಲ ಕಣಕ್ಕೆ ಬರ್ತಾರೆ ; ಗುಡ್‌ಬೈ ಹೇಳೋಕೆ
ಟೆನಿಸ್ ಇತಿಹಾಸದ ಪುಟಗಳಲ್ಲಿ ದಾಖಲೆ ಬರೆದ ಸಾಂಪ್ರಾಸ್ ಇನ್ನು ಆಡೋದಿಲ್ಲ
2002ನೇ ಇಸವಿಯಲ್ಲಿ ಯುಎಸ್ ಓಪನ್ ಪ್ರಶಸ್ತಿ ಗೆದ್ದ ನಂತರ ಒಂದೇ ಒಂದು ಪಂದ್ಯವನ್ನೂ ಸಾಂಪ್ರಾಸ್ ಆಡಿಲ್ಲ.
ಬರುವ ಸೋಮವಾರ (ಆ.25) ಆರ್ಥರ್ ಆ್ಯಷೆ ಕ್ರೀಡಾಂಗಣದಲ್ಲಿ ಈ ವರ್ಷದ ಯೂಎಸ್ ಓಪನ್ ಟೆನಿಸ್ ಪಂದ್ಯಗಳು ಶುರುವಾಗೋದು ಸಾಂಪ್ರಾಸ್ ಬೀಳ್ಕೊಡುಗೆಯಾಟ್ಟಿಗೆ. ಕಡಿಮೆ ಮಾತಾಡುವ ಸಾಂಪ್ರಾಸ್ ನಿವೃತ್ತಿಯ ಸುದ್ದಿಯನ್ನು ಆತನ ಪ್ರತಿನಿಧಿಗಳು ಈ-ಮೇಲ್ ಮೂಲಕ ತಿಳಿಸಿದ್ದಾರೆ.
‘ಎದೆಯಲ್ಲಿ ಮಾರ್ದ್ರವತೆ ತುಂಬುವಂಥಾ ಕೆಲವೇ ಕೆಲವು ಸರ್ವಕಾಲಿಕ ಟೆನಿಸ್ ಆಟಗಾರರ ಪೈಕಿ ಸಾಂಪ್ರಾಸ್ ಕೂಡ ಒಬ್ಬ. ಒತ್ತಡದಲ್ಲಿ ಆತ ಆಡುತ್ತಿದ್ದ ಪರಿಯನ್ನು ನೋಡುವುದು ಕಣ್ಣಿಗೆ ಹಬ್ಬವಾಗಿತ್ತು ’ ಎಂದು ಈಗ 4ನೇ ಶ್ರೇಯಾಂಕದ ಆಟಗಾರನಾಗಿರುವ ಆ್ಯಂಡಿ ರಾಡಿಕ್ ಬಣ್ಣಿಸುತ್ತಾರೆ.
ಸಾಂಪ್ರಾಸ್‌ಗೆ ಈಗ 32ರ ಹರೆಯ. ಈವರೆಗೆ 64 ಸಿಂಗಲ್ಸ್ ಟೈಟಲ್‌ಗಳು ಅವರ ಬುಟ್ಟಿಯಲ್ಲಿವೆ. 1993ರಿಂದ 98ರವರೆಗೆ ಆರು ವರ್ಷಗಳ ದಾಖಲೆ ಅವಧಿಯಲ್ಲಿ ವಿಶ್ವ ರ್ಯಾಂಕಿಂಗ್‌ನಲ್ಲಿ ನಂಬರ್ 1 ಸ್ಥಾನದಲ್ಲಿದ್ದ ಸಾಂಪ್ರಾಸ್ ಏಳು ವಿಂಬಲ್ಡನ್, 5 ಯುಎಸ್ ಓಪನ್ ಹಾಗೂ 2 ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಇದೂ ಕೂಡ ದಾಖಲೆ.
ಈವರೆಗೆ ಆತ ಬೆಳೆಯಲು ಕಾರಣವಾದ ಆಲ್ ಇಂಗ್ಲೆಂಡ್ ಕ್ಲಬ್ ಜೊತೆಗೆ ಸಾಂಪ್ರಾಸ್ ಸದಾ ಕಾಲ ಸಂಪರ್ಕ ಇಟ್ಟುಕೊಳ್ಳಲಿದ್ದಾರೆ. ಗುಡ್ ಬೈ ಸಾಂಪ್ರಾಸ್.
(ಏಜೆನ್ಸೀಸ್)
ಮುಖಪುಟ / ವಾರ್ತೆಗಳು












Click it and Unblock the Notifications