ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಪಜಾತಿ ಪ್ರೇಮ ದೇಶಕ್ಕೆ ಅಪಾಯಕಾರಿ- ನಿಡುಮಾಮಿಡಿ ಸ್ವಾಮಿ

By Staff
|
Google Oneindia Kannada News

ಉಪಜಾತಿ ಪ್ರೇಮ ದೇಶಕ್ಕೆ ಅಪಾಯಕಾರಿ- ನಿಡುಮಾಮಿಡಿ ಸ್ವಾಮಿ
‘ಹಿಂದುಳಿದ ವರ್ಗಗಳ ಸಂಘಟನೆ ವೈಫಲ್ಯಕ್ಕೆ ಜಾತಿ ಪ್ರೇಮ, ಸ್ವಾರ್ಥವೇ ಕಾರಣ’

ಬೆಂಗಳೂರು : ಹಿಂದುಳಿದ ವರ್ಗಗಳ ಸಂಘಟನೆ ಸಮಸ್ತ ಸಮುದಾಯದ ಬಗ್ಗೆ ಚಿಂತಿಸದೆ, ಕೇವಲ ತಮ್ಮ ಜಾತಿ ಹಾಗೂ ವೈಯಕ್ತಿಕ ಹಿತಾಸಕ್ತಿಗೆ ಗಮನ ಕೊಡುತ್ತಿರುವುದರಿಂದ ಅದು ವಿಫಲವಾಗಿದೆ ಎಂದು ವೀರಭದ್ರ ಚನ್ನಮಲ್ಲ ಸ್ವಾಮೀಜಿ ಅಭಿಪ್ರಾಯಪಟ್ಟರು.

ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಜನ್ಮ ದಿನೋತ್ಸವದ ಅಂಗವಾಗಿ ಅರಸು ವಿಚಾರ ವೇದಿಕೆ ಬುಧವಾರ (ಆ.20) ಹಮ್ಮಿಕೊಂಡಿದ್ದ ಹಿಂದುಳಿದ ವರ್ಗಗಳ ಜಾಗೃತಿ ದಿನಾಚರಣೆ ಸಮಾರಂಭದಲ್ಲಿ ಸ್ವಾಮೀಜಿ ಮಾತನಾಡಿದರು.

ಇವತ್ತು ಪ್ರತಿಯಾಬ್ಬರಿಗೂ ಜಾತಿ, ಪಂಗಡ ಬೇಕಾಗಿದೆ. ಇದರ ಮೂಲಕ ತಮ್ಮ ಸ್ವಾರ್ಥದ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಎಲ್ಲಿಯವರೆಗೆ ಜಾತಿ ವ್ಯವಸ್ಥೆ ಹೀಗೇ ಇರುತ್ತದೋ ಅಲ್ಲಿಯವರೆಗೆ ಸಮಾನತೆ ಸಾಧಿಸಲು ಸಾಧ್ಯವಿಲ್ಲ. ಜನರಲ್ಲಿ ಉಪಜಾತಿ ಪ್ರಜ್ಞೆ ತೀವ್ರವಾಗುತ್ತಿರುವುದು ದೇಶಕ್ಕೆ ಅಪಾಯಕಾರಿ ಎಂದು ವಿಷಾದದಿಂದ ಹೇಳಿದರು.

ಕೆಳವರ್ಗಗಳಿಗೆ ಅನುಕೂಲವಾಗುವಂಥ ಕಾನೂನು ದೇಶದಲ್ಲಿ ಜಾರಿ ಬಂದರೆ ಮಾತ್ರ ಬಡತನ ನಿರ್ಮೂಲನೆ ಸಾಧ್ಯ. ಅದು ಬಿಟ್ಟು ಐಟಿ, ಬಿಟಿ ಮಂತ್ರ ಪಠಿಸಿದರೆ ಉದ್ಧಾರ ಸಾಧ್ಯವಿಲ್ಲ ಎಂದು ಸಮಾರಂಭದಲ್ಲಿ ಮಾತಾಡಿದ ಮಾಜಿ ಮೇಯರ್‌ ಕೆ.ನಾರಾಯಣ ಸ್ವಾಮಿ ಅಭಿಪ್ರಾಯಪಟ್ಟರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X