ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಬಿಎಂನ ಚಿಪ್‌ ಮೇಕಿಂಗ್‌ ಘಟಕದ 600 ಕೆಲಸಗಾರರು ಮನೆಗೆ

By Staff
|
Google Oneindia Kannada News

ಐಬಿಎಂನ ಚಿಪ್‌ ಮೇಕಿಂಗ್‌ ಘಟಕದ 600 ಕೆಲಸಗಾರರು ಮನೆಗೆ
3 ಸಾವಿರ ನೌಕರರಿಗೆ 1 ವಾರ ಸಂಬಳ ರಹಿತ ರಜೆ

ನ್ಯೂಯಾರ್ಕ್‌ : ಮಾಹಿತಿ ತಂತ್ರಜ್ಞಾನದ ಮುಂಚೂಣಿ ಕಂಪನಿಗಳಲ್ಲೊಂದಾದ ಐಬಿಎಂ ನಷ್ಟದಲ್ಲಿರುವ ತನ್ನ ಚಿಪ್‌ ಮೇಕಿಂಗ್‌ ಘಟಕದ 600 ನೌಕರರನ್ನು ಮಂಗಳವಾರ (ಆ.19) ಕೆಲಸದಿಂದ ತೆಗೆದಿದ್ದು, 3000 ಕೆಲಸಗಾರರಿಗೆ ಒಂದು ವಾರ ಸಂಬಳ ರಹಿತ ರಜೆ ಕೊಟ್ಟಿದೆ.

ನ್ಯೂಯಾರ್ಕ್‌ ಮೂಲದ ಐಬಿಎಂನ 3 ಶತಕೋಟಿ ಮೌಲ್ಯದ ಚಿಪ್‌ ಮೇಕಿಂಗ್‌ ಘಟಕ ತುಂಬಾ ನಷ್ಟದಲ್ಲಿದೆ. ಮೈಕ್ರೋ ಎಲೆಕ್ಟ್ರಾನಿಕ್ಸ್‌ ಮತ್ತು ಎಂಜಿನಿಯರಿಂಗ್‌ ಡಿಸೈನ್‌ ಸರ್ವಿಸಸ್‌ ಒಳಗೊಂಡ ಐಬಿಎಂನ ತಾಂತ್ರಿಕ ವಿಭಾಗ ಪ್ರಸಕ್ತ ವಿತ್ತ ವರ್ಷದ ಎರಡನೇ ತ್ರೆೃಮಾಸಿಕದಲ್ಲಿ 110 ದಶಲಕ್ಷ ಡಾಲರ್‌ ಲುಕಸಾನು ಅವನುಭವಿಸಿತ್ತು. 2003ನೇ ಇಸವಿಯ ವಿತ್ತ ವರ್ಷದಲ್ಲಿ ಕಂಪನಿ ಇನ್ನೂ ನಷ್ಟ ಅನುಭವಿಸುವ ಆತಂಕದಲ್ಲಿದೆ. ಐಬಿಎಂನಲ್ಲಿ ಒಟ್ಟು 3 ಲಕ್ಷದ 16 ಸಾವಿರ ನೌಕರರು ಕೆಲಸ ಮಾಡುತ್ತಿದ್ದು, ಈಗ ಕೆಲಸ ಕಳೆದುಕೊಂಡಿರುವ ನೌಕರರ ಸಂಖ್ಯೆ ಕೇವಲ 0.2 ಪ್ರತಿಶತ ಅಷ್ಟೆ. ಇದು ಆತಂಕ ಪಡುವ ವಿಷಯವಲ್ಲ ಎಂದು ಕಂಪನಿ ಹೇಳಿದೆ.

ಒಂದು ವಾರ ಸಂಬಳವಿಲ್ಲದೆ ರಜೆ ಕೊಟ್ಟು ಕಳಿಸಿರುವ ನೌಕರರು ಬೇರೆ ಕೆಲಸದ ಬೇಟೆಯಲ್ಲಿರುವ ಸುದ್ದಿಯೂ ಇದೆ.

(ಏಜೆನ್ಸೀಸ್‌)

ಮುಖಪುಟ / ಐಟಿ - ಬಿಟಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X