ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಿ.ಎ.ಎಸ್‌.ಮಣಿ ಅಧ್ಯಕ್ಷತೆಯ ಸರಿಗಮ ಸಮ್ಮೇಳನಕ್ಕೆ ವೇದಿಕೆ ಸಿದ್ಧ

By Staff
|
Google Oneindia Kannada News

ಟಿ.ಎ.ಎಸ್‌.ಮಣಿ ಅಧ್ಯಕ್ಷತೆಯ ಸರಿಗಮ ಸಮ್ಮೇಳನಕ್ಕೆ ವೇದಿಕೆ ಸಿದ್ಧ
ಯುವ ಕಲಾವಿದರ ಸಂಗೀತ ಸಮ್ಮೇಳನಾಧ್ಯಕ್ಷ ಗೌರವ ನಳಿನಾ ಮೋಹನ್‌ಗೆ

ಬೆಂಗಳೂರು : ಆಗಸ್ಟ್‌ 17ರಿಂದ ನಗರದಲ್ಲಿ ನಡೆಯಲಿರುವ ಐದು ದಿನಗಳ ಅವಧಿಯ ಸಂಗೀತ ವಿದ್ವಾಂಸರ ಸಮ್ಮೇಳನಾಧ್ಯಕ್ಷರಾಗಿ ಮೃದಂಗ ವಾದಕ ಟಿ.ಎ.ಎಸ್‌.ಮಣಿ ಆಯ್ಕೆಯಾಗಿದ್ದಾರೆ.

ಸಮ್ಮೇಳನದ ಮೊದಲ ದಿನದ ಸಮಾರಂಭದಲ್ಲಿ ಮಣಿ ಅವರಿಗೆ ರಾಜ್ಯಪಾಲ ಟಿ.ಎನ್‌.ಚತುರ್ವೇದಿ ‘ಗಾನಕಲಾ ಭೂಷಣ’ ಬಿರುದು ನೀಡಿ ಗೌರವಿಸಲಿದ್ದಾರೆ. ಇದೇ ವೇಳೆ ನಡೆಯಲಿರುವ ಯುವ ಸಂಗೀತ ಕಲಾವಿದರ ಸಮ್ಮೇಳನದ ಅಧ್ಯಕ್ಷೆಯಾಗಿ ನಳಿನಾ ಮೋಹನ್‌ ಆಯ್ಕೆಯಾಗಿದ್ದು, ಅವರಿಗೆ ಕನ್ನಡ ಮತ್ತು ಸಂಸ್ಕೃತಿ ಸಚಿವೆ ರಾಣಿ ಸತೀಶ್‌ ಗಾನಕಲಾ ್ಫಶ್ರೀ ಬಿರುದು ನೀಡಿ ಗೌರವಿಸುವರು.

ಜಯನಗರದ ಎಚ್‌.ಎನ್‌.ಕಲಾಕ್ಷೇತ್ರದಲ್ಲಿ ಐದು ದಿನಗಳ ಸಂಗೀತ ಸಮ್ಮೇಳನ ನಡೆಯಲಿದ್ದು, ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಉದ್ಘಾಟಿಸುವರು. ನ್ಯಾಯಮೂರ್ತಿ ಮಂಜುಳಾ ಚೆಲ್ಲೂರ್‌ ಪ್ರತಿಭಾವಂತ ಹಿರಿಯ ಕಲಾವಿದರಿಗೆ ಇದೇ ಸಂದರ್ಭದಲ್ಲಿ ಸನ್ಮಾನ ಮಾಡಲಿದ್ದಾರೆ. ಸನ್ಮಾನಕ್ಕೆ ಪಾತ್ರರಾಗಲಿರುವ ಕಲಾವಿದರು-

ಪ್ರೊ. ವಿ.ರಾಮರತ್ನಂ (ಗಾಯನ), ಕೇಶವ ಭಾಗವತರು (ಹಾಡುಗಾರಿಕೆ), ಡಾ.ಪ್ರಪಂಚಂ ಸೀತಾರಾಂ (ಕೊಳಲು), ಎಂ.ಎ.ಕೃಷ್ಣಮೂರ್ತಿ (ಲಯವಾದ್ಯ), ಮಾಯಾರಾವ್‌ (ನೃತ್ಯ), ಸಿ.ಅಶ್ವಥ್‌ (ಸುಗಮ ಸಂಗೀತ), ಡಾ.ಎನ್‌.ಎಸ್‌.ಲಕ್ಷ್ಮೀನಾರಾಯಣ ಭಟ್ಟ (ಕವಿ- ವಿಮರ್ಶಕ) ಮತ್ತು ಎಂ.ಎಚ್‌.ರಾಜಾರಾವ್‌ (ವ್ಯವಸ್ಥಾಪನೆ).

ಆರ್‌.ಕೆ.ಶ್ರೀಕಂಠನ್‌, ವಿದ್ಯಾಭೂಷಣ, ಕುನ್ನಕ್ಕುಡಿ ವೈದ್ಯನಾಥನ್‌, ಎಂ.ಎಸ್‌.ಶೀಲಾ, ವಿನಾಯಕ ತೊರವಿ, ಎಸ್‌.ಶಂಕರ್‌ ಮೊದಲಾದ ಪ್ರಸಿದ್ಧ ಕಲಾವಿದರು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X