ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಷ್ಟ್ರಪತಿ ಮೇಲ್ಪಂಕ್ತಿ : ಹುತಾತ್ಮ ಯೋಧರಿಗೆ ಗೌರವ ಸಮರ್ಪಣೆ

By Staff
|
Google Oneindia Kannada News

ರಾಷ್ಟ್ರಪತಿ ಮೇಲ್ಪಂಕ್ತಿ : ಹುತಾತ್ಮ ಯೋಧರಿಗೆ ಗೌರವ ಸಮರ್ಪಣೆ
ಕಲಾಂ ಅವರಿಂದ ಹೊಸ ಸಂಪ್ರದಾಯಕ್ಕೆ ನಾಂದಿ

ನವದೆಹಲಿ : ಭಾರತೀಯ ಜಲ ನೆಲ ಹಾಗೂ ವಾಯುಸೈನ್ಯದ ಮುಖ್ಯಸ್ಥ ಹಾಗೂ ರಾಷ್ಟ್ರಪತಿ ಎ.ಪಿ. ಜೆ. ಅಬ್ದುಲ್‌ ಕಲಮ್‌ ಸ್ವಾತಂತ್ರ್ಯೋತ್ಸವದ ಮುನ್ನಾದಿನ ದೇಶದ ರಕ್ಷಣೆಗಾಗಿ ವಿವಿಧ ಯುದ್ಧಗಳಲ್ಲಿ ಪ್ರಾಣತೆತ್ತ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಹೊಸ ಪದ್ಧತಿಯಾಂದಕ್ಕೆ ನಾಂದಿ ಹಾಡಿದರು.

ಸಾಮಾನ್ಯವಾಗಿ ಗಣರಾಜ್ಯ ದಿನದಂದು ಯೋಧರ ಸ್ಮಾರಕಕ್ಕೆ ಪ್ರಧಾನ ಮಂತ್ರಿ ಪುಷ್ಪ ಗುಚ್ಛ ಅರ್ಪಿಸುವುದು ಈವರೆಗಿನ ಪದ್ಧತಿ. ಆದರೆ ಕಲಮ್‌ ಈ ಸಂಪ್ರದಾಯವನ್ನು ಮುರಿದು, ಸ್ವತಃ ತಾವೇ ಹುತಾತ್ಮ ಯೋಧರ ಸ್ಮಾರಕಕ್ಕೆ ಪುಷ್ಪಗುಚ್ಛ ಅರ್ಪಿಸುವ ಮೂಲಕ ನೂತನ ಸಂಪ್ರದಾಯಕ್ಕೆ ನಾಂದಿ ಹಾಡಿದರು. ಆಗಸ್ಟ್‌ 14ರ ಗುರುವಾರ ವಿಶೇಷ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಪತಿ ಕಲಾಂ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ಅಂದಹಾಗೆ, ಭಾರತದ ಹೆಬ್ಬಾಗಿಲಿನಲ್ಲಿರುವ ಅಮರಜವಾನ್‌ ಜ್ಯೋತಿಗೆ ಪುಷ್ಪಗುಚ್ಛ ಸಮರ್ಪಿಸುವ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸ್ವಾತಂತ್ರಾ ್ಯ ನಂತರದ ಪ್ರಪ್ರಥಮ ರಾಷ್ಟ್ರಪತಿ ಕಲಮ್‌.

ರಾಷ್ಟ್ರಪತಿ ಕಲಾಂ ಅವರೊಂದಿಗೆ ರಕ್ಷಣಾ ಸಚಿವ ಜಾರ್ಜ್‌ ಫರ್ನಾಂಡಿಸ್‌, ಅಡ್ಮಿರಲ್‌ ಮಾಧವೇಂದ್ರ ಸಿಂಗ್‌, ಏರ್‌ ಮಾರ್ಶಲ್‌ ಎಸ್‌. ಕೃಷ್ಣಸ್ವಾಮಿ, ಜನರಲ್‌ ಎನ್‌. ಸಿ. ವಿಜ್‌ ಅವರು ಅಗಲಿದ ಯೋಧರ ಸ್ಮಾರಕಕ್ಕೆ ಪುಷ್ಪಗುಚ್ಛ ಇರಿಸಿ ಗೌರವ ಸಲ್ಲಿಸಿದರು. ರಾಷ್ಟ್ರಪತಿಯವರು ಸ್ವಇಚ್ಛೆಯಿಂದ ಶ್ರದ್ಧಾಂಜಲಿ ಅರ್ಪಿಸುವ ಕಾರ್ಯಕ್ರಮವನ್ನು ಇದೇ ಪ್ರಥಮ ಬಾರಿಗೆ ಆಯೋಜಿಸಿದ್ದು, ಮುಂದಿನ ವರ್ಷಗಳಲ್ಲಿ ಈ ಹೊಸ ಸಂಪ್ರದಾಯ ಮುಂದುವರೆಯಲಿದೆ ಎಂದು ಸೈನ್ಯದ ಮೂಲಗಳು ತಿಳಿಸಿವೆ.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X