ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಷ್ಣ ಗಾರುಡಿ: ಬಿಸ್ಮಿಲ್ಲಾ ಖಾನ್‌ ಮೊಮ್ಮಗಳಿಗೆ ಫ್ರೀ ಮೆಡಿಕಲ್‌ಸೀಟು

By Staff
|
Google Oneindia Kannada News

ಕೃಷ್ಣ ಗಾರುಡಿ: ಬಿಸ್ಮಿಲ್ಲಾ ಖಾನ್‌ ಮೊಮ್ಮಗಳಿಗೆ ಫ್ರೀ ಮೆಡಿಕಲ್‌ಸೀಟು
ಸಂಸತ್‌ ಭವನದಲ್ಲಿ ಸನಾದಿ ಹೊಳೆಯಾ ಸಂಗೀತದ ಮಳೆಯಾ..

ಬೆಂಗಳೂರು : ಪ್ರಸಿದ್ಧ ಶಹನಾಯಿ ವಾದಕ ಹಾಗೂ ಭಾರತ ರತ್ನ ಪ್ರಶಸ್ತಿ ವಿಜೇತ ಬಿಸ್ಮಿಲ್ಲಾ ಖಾನ್‌ ಅವರಿಗೆ ಸಲ್ಲಬೇಕಾದ ಗೌರವ ಕೊನೆಗೂ ಸಲ್ಲುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಿಸ್ಮಿಲ್ಲಾ ಖಾನ್‌ ಅವರ ಕಲೆಯನ್ನು ವಿಭಿನ್ನ ರೂಪದಲ್ಲಿ ಗೌರವಿಸಿವೆ.

ಸಂಸತ್‌ ಭವನದಲ್ಲಿ ಶಹನಾಯಿ ನುಡಿಸಲು ಅವಕಾಶ ಕಲ್ಪಿಸುವ ಮೂಲಕ ಕೇಂದ್ರ ಸರ್ಕಾರ ಬಿಸ್ಮಿಲ್ಲಾ ಖಾನ್‌ ಅವರ ಕಲೆಗೆ ಗೌರವ ಸಲ್ಲಿಸಿದರೆ, ಹಿರಿಯ ಕಲಾವಿದನ ಮೊಮ್ಮಗಳಿಗೆ ಉಚಿತ ಎಂಬಿಬಿಎಸ್‌ ಸೀಟು ನೀಡುವ ಮೂಲಕ ಕರ್ನಾಟಕ ಸರ್ಕಾರ ತನ್ನ ಕಲಾಪ್ರಿಯತೆಯನ್ನು ತೋರಿದೆ.

ಬಿಸ್ಮಿಲ್ಲಾ ಖಾನ್‌ ಅವರ ಮೊಮ್ಮಗಳು ಮನಿಶಾ ರಾಜಾ ಅವರಿಗೆ ಬೆಂಗಳೂರಿನ ವೈದೇಹಿ ವೈದ್ಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದಲ್ಲಿ ಮೊದಲ ವರ್ಷದ ಎಂಬಿಬಿಎಸ್‌ ಕೋರ್ಸಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಮುಖ್ಯಮಂತ್ರಿಗಳ ಬಯಕೆಯ ಮೇರೆಗೆ ಈ ಸೀಟನ್ನು ಉಚಿತವಾಗಿ ನೀಡಲಾಗಿದೆ ಎಂದು ಸಂಸ್ಥೆಯ ನಿರ್ದೇಶಕಿ ಎಸ್‌.ಕಾಂತಾ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆಗಸ್ಟ್‌ 7ರ ಗುರುವಾರ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಹಾಗೂ ವೈದೇಹಿ ವೈದ್ಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಡಿ.ಕೆ.ಆದಿಕೇಶವಲು ಮನಿಶಾ ರಾಜಾ ಅವರಿಗೆ ಉಚಿತ ಪ್ರವೇಶ ಪತ್ರವನ್ನು ನೀಡಿದರು. ಈ ಮುನ್ನ ಅನಾರೋಗ್ಯದಿಂದ ನರಳುತ್ತಿದ್ದ ಬಿಸ್ಮಿಲ್ಲಾ ಖಾನ್‌ ಅವರಿಗೆ ಕರ್ನಾಟಕ ಸರ್ಕಾರ 2 ಲಕ್ಷ ರುಪಾಯಿ ಧನ ಸಹಾಯ ನೀಡಿತ್ತು .

ಸಂಸತ್‌ನಲ್ಲಿ ಸನಾದಿಯ ಅಲೆ : ಭಾರತ ರತ್ನ ಪ್ರಶಸ್ತಿ ವಿಜೇತ ಬಿಸ್ಮಿಲ್ಲಾ ಖಾನ್‌ ಹಾಗೂ ಅವರ ದತ್ತು ಪುತ್ರಿ ಸೋಮಾ ಘೋಷ್‌ ಅವರ ಜುಗಲ್‌ಬಂದಿ ಸಂಗೀತ ಕಾರ್ಯಕ್ರಮ ಗುರುವಾರ ಸಂಸತ್‌ನ ಬಾಲಯೋಗಿ ಭವನದಲ್ಲಿ ನಡೆಯಿತು. ರಾಷ್ಟ್ರಪತಿ ಅಬ್ದುಲ್‌ ಕಲಾಂ, ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತಿತರರು ಈ ಸಂಗೀತ ಸಂಭ್ರಮ ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ನಂತರ ಗೌರವ ರೂಪವಾಗಿ ಬಿಸ್ಮಿಲ್ಲಾ ಖಾನ್‌ರಿಗೆ ಚೆಕ್‌ ಅರ್ಪಿಸಲಾಯಿತು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X