ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಗತ್ತಿನ ನಂ.2 ಸಾಫ್ಟ್‌ವೇರ್‌ ಕಂಪನಿ ನಮ್ಮದು-ನಾರಾಯಣಮೂರ್ತಿ

By Staff
|
Google Oneindia Kannada News

ಜಗತ್ತಿನ ನಂ.2 ಸಾಫ್ಟ್‌ವೇರ್‌ ಕಂಪನಿ ನಮ್ಮದು-ನಾರಾಯಣಮೂರ್ತಿ
ಮೈಕ್ರೋಸಾಫ್ಟ್‌ ಬಿಟ್ಟರೆ ಇನ್ಫೋಸಿಸ್‌ಗೆ ಸರಿಸಾಟಿ ಯಾರಿಹರು?

ಬೆಂಗಳೂರು : ಜಗತ್ತಿನಲ್ಲಿ ಮೈಕ್ರೋಸಾಫ್ಟ್‌ ಬಿಟ್ಟರೆ ಅತಿ ಹೆಚ್ಚು ಲಾಭ ಮಾಡುತ್ತಿರುವ ಸಾಫ್ಟ್‌ವೇರ್‌ ಕಂಪನಿ ಇನ್ಫೋಸಿಸ್‌ ಎಂದು ಕಂಪನಿಯ ರಾಜಗುರು ಎನ್‌.ಆರ್‌.ನಾರಾಯಣ ಮೂರ್ತಿ ಗುರುವಾರ (ಆ. 07) ತಿಳಿಸಿದರು.

ಲೆಕ್ಕಗಳ ಸಮೇತ ಇನ್ಫೋಸಿಸ್‌ ಏರುಮುಖದ ಗಳಿಕೆಯನ್ನು ನಾರಾಯಣ ಮೂರ್ತಿ ಬಿಚ್ಚಿಡುವುದು ಹೀಗೆ- ನಮ್ಮ ಕಂಪನಿ ಆದಷ್ಟು ಬೇಗ 1 ಶತಕೋಟಿ ಅಮೆರಿಕನ್‌ ಡಾಲರ್‌ ಕಂಪನಿಯಾಗಲಿದೆ. ಕಳೆದ ವಿತ್ತ ವರ್ಷಕ್ಕಿಂತ ಈ ವರ್ಷದ ಗಳಿಕೆ ಏಣಿ ಹತ್ತುತ್ತಿದೆ. ಹೋದ ವಿತ್ತ ವರ್ಷ 965 ದಶಲಕ್ಷ ಡಾಲರ್‌ ಇದ್ದ ವಹಿವಾಟು ಈ ಸಲ 982 ದಶಲಕ್ಷ ಡಾಲರ್‌ಗೆ ಏರಲಿದೆ. ಲಾಭ 235 ದಶಲಕ್ಷ ಡಾಲರ್‌ನಿಂದ 245 ದಶಲಕ್ಷ ಡಾಲರ್‌ ಮುಟ್ಟಲಿದೆ.

ಸ್ಟಾನ್‌ಫೋರ್ಡ್‌ ಏಷಿಯಾ ಟೆಕ್ನಾಲಜಿ ಇನಿಷಿಯೇಟಿವ್‌ (ಎಟಿಐ) ಆಯೋಜಿಸಿದ್ದ Leading the World: Building a Technology Tiger ಕುರಿತ ಜಾಗತಿಕ ತಂತ್ರಜ್ಞಾನ ಸಮಾವೇಶದಲ್ಲಿ ನಾರಾಯಣಮೂರ್ತಿ ಮಾತಾಡುತ್ತಿದ್ದರು. ಸ್ಟಾನ್‌ಫರ್ಡ್‌ ಮತ್ತು ಏಷ್ಯಾದ ವಿದ್ಯಾರ್ಥಿಗಳ ನಡುವೆ ಸೇತುವೆಯಾಗುವ ಉದ್ದೇಶದಿಂದ 100 ಸದಸ್ಯರ ಸ್ಟಾನ್‌ಫೋರ್ಡ್‌ ಅಲ್ಯುಮಿನಿ ಹುಟ್ಟಿಕೊಂಡಿದೆ. ಇದರಲ್ಲಿ ಇನ್ಫೋಸಿಸ್‌ ಕೂಡ ಒಬ್ಬ ಸದಸ್ಯ ಕಂಪನಿ.

1991ರಲ್ಲಿ ಇನ್ಫೋಸಿಸ್‌ 200 ಸಿಬ್ಬಂದಿಯಾಂದಿಗೆ ಶುರುವಾಯಿತು. ಆಗ ಅದು ಕೇವಲ 3.9 ದಶಲಕ್ಷ ಡಾಲರ್‌ ಕಂಪನಿ. 2002ರ ಹೊತ್ತಿಗೆ ಈ ಕಂಪನಿ 753 ದಶಲಕ್ಷ ಡಾಲರ್‌ ಕಂಪನಿಯಾಗಿ ಬೆಳೆಯಿತು. 195 ದಶಲಕ್ಷ ಡಾಲರ್‌ ಲಾಭ ಮಾಡುವಷ್ಟು ತಾಕತ್ತು ಪಡೆಯಿತು. ಇಷ್ಟಕ್ಕೆಲ್ಲ ಕಂಪನಿಯ ಶ್ರದ್ಧಾವಂತ ಹಾಗೂ ಪ್ರತಿಭಾನ್ವಿತ ಕೆಲಸಗಾರರು ಕಾರಣ. ಗ್ರಾಹಕ ಮಿತ್ರ, ನಾಯಕತ್ವ ಗುಣ, ಒಗ್ಗಟ್ಟು, ಪಾರದರ್ಶಕತೆ ಮತ್ತು ಕಸುಬುದಾರಿಕೆ ನಮ್ಮ ಕಂಪನಿಯ ಯಶಸ್ಸಿನ ಗುಟ್ಟು ಎಂದು ನಾರಾಯಣ ಮೂರ್ತಿ ಹೇಳಿದರು.

(ಪಿಟಿಐ)

ಮುಖಪುಟ / ಐಟಿ - ಬಿಟಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X