ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಜಾಪುರ ಹೀಗಿರಲಿ- ಕೃಷ್ಣ ಮೇಜಿಗೆ ವಿಪ್ರೋ ಬ್ಲೂಪ್ರಿಂಟು

By Staff
|
Google Oneindia Kannada News

ಸರ್ಜಾಪುರ ಹೀಗಿರಲಿ- ಕೃಷ್ಣ ಮೇಜಿಗೆ ವಿಪ್ರೋ ಬ್ಲೂಪ್ರಿಂಟು
ಇಷ್ಟಕ್ಕೂ ಇದು ಸರ್ಜಾಪುರ ಒಂದರದ್ದೇ ಸಮಸ್ಯೆ ಅಲ್ಲವಲ್ಲ ಮಿ.ಕೃಷ್ಣ

ಬೆಂಗಳೂರು : ರೋಡು, ಕರೆಂಟು, ಬೀದಿದೀಪ ಸರಿಯಾಗಿಲ್ಲ ಅಂತ ಅಜೀಂ ಪ್ರೇಂಜಿ ಹಾಕಿದ ಒಂದೇ ಆವಾಜ್‌ಗೆ ಕೃಷ್ಣ ಕ್ಷಿಪ್ರವಾಗಿ ಪ್ರತಿಕ್ರಿಯಿಸಿದ್ದರು. ಈಗ ನೋಡಿ, ಸರ್ಜಾಪುರವನ್ನು ಹೀಗೇ ಅಭಿವೃದ್ಧಿಪಡಿಸಬೇಕು ಅಂತ ವಿಪ್ರೋ ಕಂಪನಿ ಬ್ಲೂಪ್ರಿಂಟ್‌ ತಯಾರಿಸಿದೆ.

ವಿಪ್ರೋದ ಕಾರ್ಪೊರೇಟ್‌ ಉಪಾಧ್ಯಕ್ಷ ತಮಲ್‌ ದಾಸ್‌ಗುಪ್ತಾ ಪ್ರಕಾರ ಸರ್ಕಾರಕ್ಕೆ ಮೂಲಭೂತ ಸೌಕರ್ಯ ಅಭಿವೃದ್ಧಿ ಪಡಿಸುವ ಉಮೇದಿಯೇನೋ ಇದೆ. ಆದರೆ ಅದು ಇನ್ನೂ ಚುರುಕಾಗಬೇಕು. ಈ ಕಾರಣಕ್ಕೇ ರಸ್ತೆಯ ಹೊಂಡಗಳನ್ನು, ಬರ್ನಾದ ಬಲ್ಬುಗಳನ್ನು ಕೃಷ್ಣ ಸರ್ಕಾರದ ಕರ್ಮಿಗಳು ಲೆಕ್ಕ ಹಾಕುವಷ್ಟರಲ್ಲಿ ವಿಪ್ರೋ ನೀಲಿ ನಕಾಶೆಯನ್ನೇ ತಯಾರಿಸಿ ಕೃಷ್ಣ ಪ್ರಭುಗಳ ಮುಂದಿಟ್ಟಿದೆ. ಸರ್ಕಾರದ ಕೈಲಿ ತೀರಾ ಕಿಸಿಯದಿದ್ದಾಗ ತಾನೂ ನೆರವಿಗೆ ಬರುವುದಾಗಿ ಕಂಪನಿ ಕೊಸರು ಹಾಕುವ ಮೂಲಕ ಸರ್ಕಾರಕ್ಕೆ ಸವಾಲನ್ನೂ ಎಸೆದಿದೆ.

ವಿಪ್ರೋ ನೀಲಿ ನಕಾಶೆ ಪ್ರಕಾರ ಸರ್ಜಾಪುರ ಹೀಗಿರಬೇಕು-

  • ಜನ ಈಗಿನಂತೆ ಸಲೀಸಾಗಿ ರಸ್ತೆ ದಾಟಕೂಡದು. ಅದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತದೆ. ಜನ ರಸ್ತೆ ದಾಟಲು ದಾಟು ಸೇತುವೆ (ಓವರ್‌ ಬ್ರಿಜ್‌) ಕಟ್ಟಬೇಕು.
  • ರಸ್ತೆಗಳು ಈಗಿನದಕ್ಕಿಂತ ಅಗಲವಾಗಿರಬೇಕು.
  • ಲೇನ್‌ ಶಿಸ್ತನ್ನು ಚಾಚೂ ತಪ್ಪದೆ ಪಾಲಿಸುವಂತೆ ಮಾಡಬೇಕು.
  • ಬೀದಿ ದೀಪಗಳು ರಾತ್ರಿ ಹೊತ್ತು ಫಳಫಳಿಸುತ್ತಿರಬೇಕು.
  • ಎಲ್ಲಾ ಚರಂಡಿಗಳ ನೀರನ್ನು ಒಂದು ಕಡೆ ಸೇರಿಸಿ, ಸಮರ್ಪಕವಾಗಿ ಹರಿಯುವಂತೆ ನೋಡಿಕೊಳ್ಳಬೇಕು.
  • ಕರೆಂಟು ಸರಾಗವಾಗಿ ಹರಿದುಬರಬೇಕು. ಅದೂ ಗುಣಮಟ್ಟದ್ದಾಗಿರಬೇಕು.
  • ಈಗ ಗಂಟೆಗೆ 20 ಕಿ.ಮೀ. ಸರಾಸರಿ ವೇಗದಲ್ಲಿ ಕಂಪನಿಗೆ ವಾಹನಗಳು ತಲುಪುತ್ತಿವೆ. ಇದನ್ನು ಚೀನಾ ಮತ್ತು ಮಲೇಷಿಯಾ ಥರ ಗಂಟೆಗೆ 50 ಕಿ.ಮೀ. ಸರಾಸರಿ ವೇಗಕ್ಕೆ ಹೆಚ್ಚಿಸಬೇಕು.
  • ಈಗ ಕಂಪನಿಗೆ ನೌಕರರು ತಲುಪುತ್ತಿರುವ ಸಮಯದಲ್ಲಿ ದಿನಕ್ಕೆ 20 ಪ್ರತಿಶತ ಮಾನವ ಉತ್ಪಾದನಾ ಗಂಟೆಗಳು ಹಾಳಾಗುತ್ತಿವೆ. ಇದನ್ನು ತಪ್ಪಿಸುವಂತೆ ಸಂಚಾರಿ ವ್ಯವಸ್ಥೆ ಸುಧಾರಣೆಯಾಗಬೇಕು.
ವಿಪ್ರೋ ಕುಳಗಳು ಬಯಸುತ್ತಿರುವ ಇಂಥಾ ವ್ಯವಸ್ಥೆ ಬೇಕಾಗಿರುವಂಥಾ ಊರು- ಕೇರಿಗಳು ಬೆಂಗಳೂರಲ್ಲೇ ಇನ್ನೂ ಸಾಕಷ್ಟಿವೆ. ವಿಪ್ರೋ ಕೊಟ್ಟಿರುವ ಈ ನೀಲಿ ನಕಾಶೆಯನ್ನು ಅಗತ್ಯವಿರುವ ಎಲ್ಲಾ ಜಾಗಕ್ಕೂ ಅನ್ವಯಿಸಿ ನೋಡುವ ಮನಸ್ಸು ಕೃಷ್ಣ ಅವರದ್ದಾಗಲಿ. ಐಟಿ ದಿಗ್ಗಜ ಎಂಬ ಒಂದೇ ಕಾರಣಕ್ಕೆ ಅಜೀಂ ಆವಾಜಿಗೆ ಕೃಷ್ಣ ಮಣಿದರೆ, ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದಕ್ಕೆ ಸುಣ್ಣ ಇಟ್ಟಂತೆ ಆಗೋದಿಲ್ಲವೇ?

Post your views

ವಾರ್ತಾ ಸಂಚಯ
ಅಜೀಂ ಆವಾಜ್‌ಗೆ ಕೃಷ್ಣ ಸ್ಪಂದನ, ಸರ್ಜಾಪುರೋದ್ಧಾರಕ್ಕೆ ಕಾರ್ಯಪಡೆ
ವಿದ್ಯುತ್‌ ಇಲ್ಲ-ರಸ್ತೇಲಿ ಗುಂಡಿ ; ಕೃಷ್ಣ ಸರ್ಕಾರಕ್ಕೆ ಪ್ರೇಂಜಿ ಧಮಕಿ

ಮುಖಪುಟ / ಕೃಷ್ಣಗಾರುಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X